ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 10 ಏಪ್ರಿಲ್, ಬುಧವಾರ 2024
Published 10 ಏಪ್ರಿಲ್ 2024, 1:33 IST
ಪ್ರಜಾವಾಣಿ ವಿಶೇಷ
author
ಮೇಷ
ಇಷ್ಟುದಿನವೂ ಶ್ರಮಪಟ್ಟ ನಿಮಗೆ ನಿರೀಕ್ಷೆಯ ಫಲ ದೊರೆಯದೆ ಬೇಸರ ಉಂಟಾಗಬಹುದು. ಭಾವನೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೊಂಚ ಹಿನ್ನಡೆಯಾಗಲಿದೆ. ತಾಯಿಯ ಆರೋಗ್ಯದ ಕಡೆ ಎಚ್ಚರವಹಿಸಿ.
ವೃಷಭ
ಉದ್ಯೋಗದಲ್ಲಿ ಯಾವುದೇ ಮುಜುಗರ ಅಥವಾ ಹೆದರಿಕೆ ಇಲ್ಲದೆ ಸಮಯವನ್ನು ಬಳಸಿಕೊಳ್ಳಲು ಪ್ರಯತ್ನವನ್ನು ಮಾಡಿ. ಮಹಿಳೆಯರಿಗೆ ಕೆಲವು ವುಕರಾಗುವಂತಹಾ ಸನ್ನಿವೇಶಗಳು ಎದುರಾಗಬಹುದು.
ಮಿಥುನ
ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂ ಅನುಕೂಲಗಳು ಉಂಟಾಗಲಿದೆ. ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಪ್ರಯತ್ನವನ್ನು ಮಾಡಿ. ಅಪರಿಚಿತರೂ ಕೂಡ ನಿಮ್ಮನ್ನು ಪ್ರಶಂಸಿಸುವಂತೆ ಆಗುವುದು.
ಕರ್ಕಾಟಕ
ಕಛೇರಿಯಲ್ಲಿ ನಿಮ್ಮ ತಪುö್ಪಗಳನ್ನು ಸರಿಪಡಿಸಲು ಸಹೋದ್ಯೋಗಿಗಳ ಸಹಕಾರ ಪಡೆಯುವುದು ಅಗತ್ಯ. ಕೌಟುಂಬಿಕವಾಗಿ ಅಚ್ಚರಿಯ ಸಂಗತಿಗಳನ್ನು ಕೇಳುವAತಾಗುವುದು. ಸಿಹಿತಿನಿಸುಗಳ ತಯಾರಕರಿಗೆ ಬೇಡಿಕೆ ಹೆಚ್ಚಾಗುವುದು.
ಸಿಂಹ
ಹಿರಿಯರ ವ್ಯವಹಾರಗಳ ಮರ್ಮವನ್ನು ಅರಿಯಲು ಪ್ರಯತ್ನಿಸಿ. ಪ್ರಯೋಜನವಾಗುತ್ತದೆ. ಮಕ್ಕಳ ಆರೋಗ್ಯದಲ್ಲಿನ ಕ್ಷೀಣತೆಯು ತಲೆನೋವಿಗೆ ಕಾರಣವಾಗುತ್ತದೆ. ಅಧಿಕಾರಿ ವರ್ಗದವರಿಗೆ ಸೇವಕ ವರ್ಗದವರಿಂದ ಸಹಾಯ ಸಿಗಲಿದೆ.
ಕನ್ಯಾ
ಸಂಘಟನಾ ಶಕ್ತಿಯನ್ನು ಹೊಂದಿರುವ ನಿಮಗೆ ಪಾಲುದಾರರಲ್ಲಿ ವ್ಯವಹರಿಸುವುದು ಸುಲಭವಾಗುವುದು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರಿ ಬರುವುದು. ಉದ್ಯೋಗ ನಿರೀಕ್ಷೆಯಲ್ಲಿರುವ ಜನರು ಉತ್ತಮ ಸಮಾಚಾರವನ್ನು ಕೇಳುವಿರಿ.
ತುಲಾ
ಈ ದಿನ ನಿಮಗೆ ನಿಮ್ಮ ಜೀವನದಲ್ಲಿನ ಧನಾತ್ಮಕ ಚಿಂತನೆಯಿಂದ ಮನಸ್ಸು ಆಹ್ಲಾದಕರವಾಗಿರುತ್ತದೆ. ಪ್ರತಿನಿತ್ಯದ ದಿನಚರಿಯ ಹೊರತಾಗಿ ಹೊಸ ಕೆಲಸವು ನಿಮ್ಮ ಹೆಗಲೆರುವುದು. ವಾಹನ ಚಾಲನೆಯಲ್ಲಿ ನಿಗವಿರಲಿ.
ವೃಶ್ಚಿಕ
ಆಹಾರ ಪದ್ಧತಿಯಲ್ಲಿ ನಿಯಮ ಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅನಾರೊಗ್ಯದ ಸಂಭವವಿರುವುದರಿAದ ಆರೋಗ್ಯದ ಮೇಲೆ ನಿಗವಿರಲಿ. ಈಶ್ವರ ಆರಾಧನೆಯಿಂದ ಶುಭವಾಗುವುದು.
ಧನು
ಇಂಜಿನಿಯರಿಂಗ್ ಕ್ಷೇತ್ರದಲ್ಲಿಯವರಿಗೆ ಹೆಚ್ಚಿನ ಅವಕಾಶಗಳೊಂದಿಗೆ ಬಯಸಿದ ಜಾಗ ಹಾಗೂ ಹೆಸರಾಂತ ಕಂಪೆನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ಆದರೆ ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದು.
ಮಕರ
ಯೋಗ್ಯ ವಯಸ್ಕರಿಗೆ ಉತ್ತಮವಾದ ಅವಕಾಶಗಳಿಂದ ವೈವಾಹಿಕ ಭಾಗ್ಯ ಒದಗಿ ಬರಲಿದೆ. ಗೃಹದಲ್ಲಿ ಸುಖ-ಶಾಂತಿ ಸಮೃದ್ಢಿಯಾಗಿ ಕಾಣಲಿದೆ. ಹೂವು ಹಣ್ಣು ಮಾರಾಟಗಾರರಿಗೆ ದಿನದ ಅಂತ್ಯದಲ್ಲಿ ತೃಪ್ತಿ ಇರಲಿದೆ.
ಕುಂಭ
ವ್ಯವಹಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಆಕಸ್ಮಿಕ ಧನಾಗಮನದಿಂದಾಗಿ ಬಾಕಿ ಇರಿಸಿಕೊಂಡಿದ್ದ ವ್ಯವಹಾರವು ಪೂರ್ಣಗೊಳ್ಳುವುದು
ಮೀನ
ಮಾನಸಿಕ ಚಿಂತೆಗಳು ಮತ್ತು ಬಾಹ್ಯ ತೊಂದರೆಗಳು ದೂರಾಗಿ ಹಿಂದಿನ ಸಂತೋಷವನ್ನು ಪುನಃ ಪಡೆಯುವಿರಿ. ಭೂಮಿ ಹಾಗು ಕಟ್ಟಡದ ವಿಚಾರಕ್ಕೆ ಸಂಬAಧಿಸಿದ ಹಾಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆತುರ ಮಾಡದಿರಿ.