ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವಚೆಯ ಅಂದಕ್ಕೆ ಚಾಕು ಇಲ್ಲದ ಆಲ್‌ಥೆರಪಿ...

Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮಹಿಳೆಯರಿಗೆ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ. ಅದರ ಆರೈಕೆಗಾಗಿ ಅನೇಕ ಪ್ರಯೋಗಗಳ ಮೊರೆ ಹೋಗುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್‌ ಎನಿಸಿದೆ. ಕಲೆಗಳು, ಮೊಡವೆಗಳಿಲ್ಲದೇ ಮುಖವೂ ಸ್ವಚ್ಛವಾಗಿ ಹೊಳೆಯಬೇಕು ಎನ್ನುವುದು ಹೆಣ್ಣು ಮಕ್ಕಳ ಆಸೆ.

ಒತ್ತಡದ ಜೀವನಶೈಲಿ, ನಿದ್ರಾಹೀನತೆ, ಆಹಾರದಲ್ಲಿ ಏರುಪೇರು ಹಾಗೂ ವಯೋ ಸಹ ಕಾರಣಗಳಿಂದಾಗಿ ಹೆಚ್ಚಿನ ಮಹಿಳೆಯರಲ್ಲಿ ಚರ್ಮವೂ ಬಹುಬೇಗ ಕಳೆಗುಂದುತ್ತದೆ. ಮುಖದಲ್ಲಿ ನೆರಿಗೆಗಳು ಹೆಚ್ಚಾದಂತೆ ವಯಸ್ಸೂ ಹೆಚ್ಚಾದಂತೆ ಭಾಸವಾಗುತ್ತದೆ.

ಇಂಥ ಸಂದರ್ಭಗಳಲ್ಲಿ ಯುವತಿಯರು ವಿವಿಧ ಕ್ರೀಂಗಳನ್ನು ಬಳಸಲು ಮುಂದಾಗುತ್ತಾರೆ. ಪ್ರಯೋಜನವಾಗದಿದ್ದರೆ ಥೆರಪಿಗಳ ಮೊರೆ ಹೋಗುವುದು ಸಹಜ.

ಕೆಲವರಿಗೆ ಚಾಕು ಕಂಡರೆ ಭಯ. ಸೂಜಿಗಳಿಂದ ಚುಚ್ಚಿಸಿಕೊಳ್ಳುವುದನ್ನೂ ಅವರು ಇಷ್ಟಪಡುವುದಿಲ್ಲ. ಅಂಥವರಿಗಾಗಿಯೇ ಅಪೊಲೊ ಕಾಸ್ಮೆಟಿಕ್‌ ನೂತನ ‘ಲಂಚ್‌ ಟೈಮ್‌ ಲಿಫ್ಟ್‌’ ಎಂಬ ಆಲ್‌ ಥೆರಪಿ ಚಿಕಿತ್ಸೆಯನ್ನು ಪರಿಚಯಿಸಿದೆ. ಆಲ್‌ ಥೆರಪಿ ಚಿಕಿತ್ಸಾ ಪದ್ಧತಿ ಭಾರತಕ್ಕೆ ಹೊಸತು. ಇದು ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ನುಣುಪಿನ ಪರಿಣಾಮ ಒದಗಿಸುತ್ತದೆ. ಚರ್ಮವನ್ನು ಬಿಗಿಗೊಳಿಸಿ ತಾಜಾ ಆಗಿ ಇರಿಸುತ್ತದೆ.

ಆಲ್‌ಥೆರಪಿಯನ್ನು 55ಕ್ಕೂ ಅಧಿಕ ದೇಶಗಳಲ್ಲಿ ಉಪಯೋಗಿಸಲಾಗುತ್ತಿದೆ. 30 ರಿಂದ 60 ವರ್ಷದವರೆಗಿನವರಿಗೆ ಶಿಫಾರಸು ಮಾಡಲಾಗುತ್ತದೆ. ಚಿಕಿತ್ಸೆಯ ಪರಿಣಾಮ 3 ತಿಂಗಳ ಒಳಗೆ ಗೋಚರಿಸುತ್ತದೆ.

60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರು ತಿಂಗಳಲ್ಲಿ ಎರಡನೇ ಚಿಕಿತ್ಸೆ ಬೇಕಾಗುತ್ತದೆ. ಗಲ್ಲ, ಕಣ್ಣು, ಹುಬ್ಬುಗಳ ಜಾಗದಲ್ಲಿ ಚಿಕಿತ್ಸೆಯ ಪರಿಣಾಮ ನಿಚ್ಚಳವಾಗಿ ಗೋಚರಿಸುತ್ತದೆ.

ಆಲ್‌ ಥೆರಪಿಗಾಗಿ ಹೆಚ್ಚು ಸಮಯ ಕ್ಲಿನಿಕ್‌ನಲ್ಲಿ ನಿಲ್ಲಬೇಕಾಗಿಲ್ಲ, ಇದು ಕೇವಲ 60–90 ನಿಮಿಷಗಳ ಚಿಕಿತ್ಸೆಯಾಗಿದ್ದು, ಕೆಲಸಕ್ಕೆ ಹೋಗುವವರು ನಿಮ್ಮ ಊಟದ ಸಮಯದಲ್ಲಿ ಚಿಕಿತ್ಸೆ ಮುಗಿಸಿಕೊಂಡು ಮರಳಿ ಕೆಲಸಕ್ಕೆ ಹೋಗಬಹುದು.
www.apollocosmeticclinics.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT