ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿ ಗೀತ

ಪಿಕ್ಚರ್‌ ಪ್ಯಾಲೇಸ್
Last Updated 3 ಮೇ 2015, 19:30 IST
ಅಕ್ಷರ ಗಾತ್ರ

ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ದಿನೇದಿನೇ  ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ಮಾಲಿನ್ಯದ  ಪ್ರಮಾಣವೂ ಹಿಗ್ಗುತ್ತಿದೆ. ಮಿತಿಮೀರಿದ ಮಾಲಿನ್ಯ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗೆಯೇ, ಹಕ್ಕಿ–ಪಕ್ಷಿಗಳಿಗೂ ಅದರ ಬಿಸಿ ತಟ್ಟಿದೆ. ಹಸಿರು ನಗರಿ ಎಂಬ ಹಿರಿಮೆ ಹೊಂದಿದ್ದ  ಸಂದರ್ಭದಲ್ಲಿ ಬೆಂಗಳೂರಿನಲ್ಲಿ ತರಹೇವಾರಿ ಹಕ್ಕಿಗಳು ವಾಸ ಮಾಡುತ್ತಿದ್ದವು. ಸೂರ್ಯ ಕಣ್ಣುಬಿಡುವ ಮುನ್ನ ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ಗೆ ಕಾಲಿಟ್ಟರೇ ಅಲ್ಲಿ ಕೇಳಿಸುತ್ತಿದ್ದ ಹಕ್ಕಿಗಳ ಚಿಲಿಪಿಲಿ ನಾದ ಮನಸ್ಸಿಗೆ ಮುದನೀಡುತ್ತಿತ್ತು.  ಕಾಲ ಸರಿದಂತೆ ನಗರದ ಪರಿಸ್ಥಿತಿ ಬದಲಾಗಿದೆ. ಕೆರೆಗಳು, ಮರಗಳು ಮಾಯವಾಗಿ ಅಲ್ಲೆಲ್ಲಾ ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ಬದಲಾದ ಸನ್ನಿವೇಶ ಕಂಡು ಕಂಗೆಟ್ಟ ಹಕ್ಕಿ–ಪಕ್ಷಿಗಳು ತವರು ತೊರೆಯುತ್ತಿವೆ.
ಹಸಿರನ್ನರಸಿ ದೂರದೂರುಗಳಿಗೆ ಪ್ರಯಾಣ ಬೆಳೆಸುತ್ತಿವೆ. ನಗರದಲ್ಲೇ ನೆಲೆ ಕಂಡುಕೊಂಡಿದ್ದ ಈ ಪಕ್ಷಿಗಳನ್ನು ನೋಡಲು ಈಗ ಪಕ್ಕದೂರಿಗೆ ಹೋಗಬೇಕಿದೆ. ಅಂದಹಾಗೆ, ಈ ಹಕ್ಕಿಗಳು ಕ್ಯಾಮೆರಾಕ್ಕೆ ಸೆರೆಸಿಕ್ಕಿದ್ದು  ಕನಕಪುರ ಮುಖ್ಯ ರಸ್ತೆಯಲ್ಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT