ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಚಿಂಗ್‌ ಮಾಯೆ...

Last Updated 29 ಜೂನ್ 2015, 19:30 IST
ಅಕ್ಷರ ಗಾತ್ರ

ಇದು ಮ್ಯಾಚಿಂಗ್‌ ಜಮಾನ. ದಿರಿಸು ಎಂಥದ್ದೇ ಇರಲಿ, ಅದರೊಂದಿಗೆ ಧರಿಸುವ ಆಕ್ಸಸರೀಸ್‌ ಮ್ಯಾಚ್ ಆಗಿರಬೇಕು ಎಂದು ಬಯಸುವ ದಿನವಿದು. ಮಹಿಳೆಯರಷ್ಟೇ ಅಲ್ಲ, ಪುರುಷರೂ ಇತ್ತೀಚೆಗೆ ಮ್ಯಾಚಿಂಗ್‌ ಟ್ರೆಂಡ್‌ನತ್ತ ಆಕರ್ಷಿತರಾಗುತ್ತಿದ್ದಾರೆ.

ಸಾಂಪ್ರದಾಯಿಕವೇ ಇರಲಿ ಅಥವಾ ಪಾಶ್ಚಾತ್ಯ ದಿರಿಸೇ ಇರಲಿ ಅದಕ್ಕೆ ಹೋಲುವ ಕಿವಿಯೋಲೆ, ಬಳೆ, ಕ್ಲಿಪ್‌, ವಾಚ್‌, ಚಪ್ಪಲಿ, ಸರ, ಬಿಂದಿ ಎಲ್ಲವೂ ಮ್ಯಾಚ್‌ ಆಗಬೇಕು.ದಿರಿಸಿಗೆ ತಕ್ಕಂತೆ ಎಲ್ಲವನ್ನೂ ಮ್ಯಾಚ್‌ ಮಾಡಿಕೊಳ್ಳುವ ಮನಸ್ಥಿತಿ ಹೆಚ್ಚಾದಂತೆ ಒಂದೇ ವಸ್ತುವಿನಲ್ಲಿ ಬಣ್ಣಗಳ ಬಹು ಆಯ್ಕೆಯ ವಿನ್ಯಾಸಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಆರಂಭದಲ್ಲಿ ಲೆದರ್‌ ಬೆಲ್ಟ್‌ ವಿನ್ಯಾಸದಿಂದ ಆರಂಭವಾದ ವಾಚ್‌ಗಳು,  ಗೋಲ್ಡ್‌, ಸಿಲ್ವರ್‌ ಬಣ್ಣದ ಚೈನ್‌ಗಳ ವಿನ್ಯಾಸದಲ್ಲಿ ಪರಿಚಯವಾದಾಗ  ವಾಚ್‌ಗಳ ಬೇಡಿಕೆ ಹೆಚ್ಚಿತು.

ಅದೇ ಬೇಡಿಕೆ ಈಗ ವಿವಿಧ ಬಣ್ಣಗಳ ಮ್ಯಾಚಿಂಗ್‌ ವಾಚ್‌ಗಳಿಗೂ ಇದೆ. ಮ್ಯಾಚಿಂಗ್‌ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸುವ ಯುವತಿಯರು ಆಯಾ ಬಣ್ಣದ ಬಟ್ಟೆಗಳಿಗೆ ಹೊಂದುವ  ವಾಚ್‌ಗಳನ್ನು ಧರಿಸುತ್ತಾರೆ. ವಾಚ್‌ಗಳ ಬೆಲ್ಟ್ ಹಾಗೂ ಡಯಲ್‌ ರಿಂಗ್‌ ಅನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದು,  ಹಾಗಾಗಿ ಬಣ್ಣ ಬಣ್ಣದ ಮ್ಯಾಚಿಂಗ್ ವಾಚ್‌ಗಳಿಗೆ ಹೆಚ್ಚು ಬೇಡಿಕೆ.  ಉಡುಪಿಗೆ ಮಾತ್ರವಲ್ಲದೆ ಕೆಲವರು ತಮ್ಮ ಅಭಿರುಚಿಗೆ ತಕ್ಕಂತೆ ದಿನಕ್ಕೊಂದು ಬಣ್ಣದ ವಾಚ್‌ ತೊಡುತ್ತಾರೆ.

ವಾಚ್‌ಗಳ ಬೆಲ್ಟ್‌ಗಳಲ್ಲಿ ಬಣ್ಣ, ಆಕಾರದಲ್ಲೂ ಬಹಳ ವಿನ್ಯಾಸಗಳಿವೆ. ಇದರ ಸಾಲಿಗೆ ಬಣ್ಣದ ಟೇಪ್ ಮಾದರಿಯ ಬೆಲ್ಟ್‌ಗಳೂ ಇತ್ತೀಚೆಗೆ ಸೇರಿವೆ.
ಬಳೆಗಳ ಜೊತೆಗೆ ಮ್ಯಾಚಿಂಗ್‌ ವಾಚ್‌ಗಳನ್ನು ತೊಡುವುದು ಇತ್ತೀಚಿನ  ಫ್ಯಾಶನ್‌. ಒಂದು ಕೈತುಂಬ ಬಳೆ ಸಿಂಗರಿಸಿಕೊಂಡು, ಇನ್ನೊಂದು ಕೈಗೆ ಮ್ಯಾಚಿಂಗ್‌ ವಾಚ್‌ನಿಂದ ಅಲಂಕರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ವಾಚ್‌ಗಳಿಗೆ ಮ್ಯಾಚ್‌ ಆಗುವ ಬಳೆ, ಚೈನ್‌ಗಳನ್ನು ಖರೀದಿಸುತ್ತಾರೆ.

ಪ್ರೀತಿಯ ಮಡದಿಗೋ, ಪ್ರೇಯಸಿಗೋ, ಸ್ನೇಹಿತೆಗೋ ಮ್ಯಾಚಿಂಗ್‌ ವಾಚ್‌ಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್‌ ಇತ್ತೀಚೆಗೆ ಮಾಮೂಲಾಗಿದೆ. ಬ್ರ್ಯಾಂಡ್‌ಗಳಿಗೆ ತಕ್ಕಂತೆ ವಾಚ್‌ಗಳ ಬೆಲೆಯಲ್ಲಿ ವಿಭಿನ್ನತೆ ಇದ್ದರೂ ಬೇಡಿಕೆ ಮಾತ್ರ ಹಾಗೇ ಇದೆ.

ಪಾದರಕ್ಷೆಗಳ ಮ್ಯಾಚಿಂಗ್‌
ಇನ್ನು ಪಾದರಕ್ಷೆಗಳ ಮ್ಯಾಚಿಂಗ್‌ ವಿಷಯದಲ್ಲಿ ಯುವತಿಯರ ಆಯ್ಕೆಗೆ ಮೀರಿದ ಹೊಸ ವಿನ್ಯಾಸಗಳು ರೂಪುಗೊಂಡಿವೆ. ಫ್ಲ್ಯಾಟ್ಸ್‌, ಹೀಲ್ಡ್‌, ಹೈಹೀಲ್ಡ್‌, 

ಪೆನ್ಸಿಲ್‌ ಹೀಲ್‌ಗಳು, ಷೂಗಳು ಈಗಿನ ಉಡುಪುಗಳ ಟ್ರೆಂಡ್‌ಗೆ ತಕ್ಕಂತೆ ವಿನ್ಯಾಸಗೊಳ್ಳುತ್ತಿವೆ. ಮ್ಯಾಚಿಂಗ್‌ ಪಾದರಕ್ಷೆಗಳು ಫ್ಯಾನ್ಸಿ ಡ್ರೆಸ್‌ಗಳ ಜೊತೆಗೆ ರೇಷ್ಮೆ ಸೀರೆಗಳಿಗೂ ಹೊಸ ಲುಕ್‌ ನೀಡುತ್ತಿವೆ. ಯುವತಿಯರು ಮಾತ್ರವಲ್ಲದೆ ಉದ್ಯೋಗಕ್ಕೆ ಹೋಗುವ ಮಹಿಳೆಯರು ಸಹ ಫ್ಯಾನ್ಸಿ ಫ್ಲ್ಯಾಟ್‌ ಪಾದರಕ್ಷೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇವು ಪಾದಗಳಿಗೆ ಹೆಚ್ಚು ಆರಾಮದಾಯಕ ಎನಿಸುವುದರ ಜೊತೆಗೆ ಕಾಲಿನ ಅಂದವನ್ನು ಹೆಚ್ಚಿಸುತ್ತವೆ.
ಎಂಬ್ರಾಯಿಡರಿ, ಸ್ಟೋನ್‌, ಬೀಡ್ಸ್‌, ನೆಟ್‌, ಬಣ್ಣದ ಹೂವುಗಳು,  ಚಿಟ್ಟೆಗಳ ವಿನ್ಯಾಸಗಳನ್ನು ಬಳಸಿಕೊಂಡು  ತಯಾರಿಸಿದ ಪಾದರಕ್ಷೆಗಳು ಫ್ಯಾಶನ್‌ ಜತೆಗೆ ಮ್ಯಾಚಿಂಗ್‌ಗೆ ಹೆಚ್ಚು ಆದ್ಯತೆ ನೀಡುವವರ ಆಯ್ಕೆಯ ಪಾದರಕ್ಷೆಗಳು.

ಸಾಮಾನ್ಯವಾಗಿ ಷೂಗಳು ಎಲ್ಲ ವಿಧವಾದ ಉಡುಪುಗಳಿಗೆ ಒಪ್ಪುವುದರಿಂದ ಫ್ಲ್ಯಾಟ್‌, ಹೀಲ್‌, ಹೈ ಹೀಲ್‌ ಮಾದರಿಯ ವಿವಿಧ ಬಣ್ಣದ ಫ್ಯಾನ್ಸಿ ಮ್ಯಾಚಿಂಗ್‌ ಷೂಗಳಿಗೆ ಯುವತಿಯರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದೂ ಅಲ್ಲದೆ ಕೇವಲ ಬೆಲ್ಟ್‌ನ್ನು ಬದಲಾಯಿಸಿಕೊಳ್ಳುವ ಮೂಲಕ ಒಂದೇ ಚಪ್ಪಲಿಯಲ್ಲಿ ವಿವಿಧ ವಿನ್ಯಾಸ ಮಾಡಿಕೊಳ್ಳುವ ಟ್ರೆಂಡ್‌ ಇಂದಿನ ಯುವತಿಯರಿಗೆ ಅಪ್ತವಾಗುತ್ತಿದೆ. ಹಾಕಿದ ಬಟ್ಟೆಗೆ ಮಾತ್ರವಲ್ಲ, ಕೆಲವೊಮ್ಮೆ ಬ್ಯಾಗ್ ಅಥವಾ ಕ್ಲಚ್‌ಗೆ ಚಪ್ಪಲಿ, ಶೂಗಳನ್ನು ಮ್ಯಾಚ್‌ ಮಾಡುವುದೂ ಇದೆ. ಕೆಲವು ಭಾಗಗಳಲ್ಲಿ ಕ್ಯಾಪ್‌ಗೆ ಶೂಗಳನ್ನು ಮ್ಯಾಚ್‌ ಮಾಡು

ಚಿನ್ನಕ್ಕೂ ಮ್ಯಾಚಿಂಗ್ ಅಂಟು
ಯುವತಿಯರು ಎಷ್ಟೇ ಆಧುನಿಕ ಜೀವನಕ್ಕೆ ಹೊಂದಿಕೊಂಡಿದ್ದರೂ ಚಿನ್ನದ ಬಗೆಗಿನ ಒಲವು ಮಾತ್ರ ಕಡಿಮೆ ಆಗದು. ವಿವಿಧ ಬಗೆಯ ವಿನ್ಯಾಸದ ಫ್ಯಾನ್ಸಿ ಆಭರಣಗಳು ಬಂದಿದ್ದರೂ ಚಿನ್ನದ ಒಡವೆಗಳಿಗೆ ನೀಡುವ ಪ್ರಾಮುಖ್ಯ ಕಡಿಮೆಯಾಗಿಲ್ಲ.

ಈಗಂತೂ ಡಿಸೈನರ್‌ ಆಭರಣಗಳ ಅಂದ ಚೆಂದಕ್ಕೆ ಕಡಿಮೆ ಇಲ್ಲದಂತೆ ಚಿನ್ನದ ಆಭರಣಗಳು ವಿವಿಧ ನಮೂನೆಯಲ್ಲಿ ಮೈದಳೆದಿವೆ. ಚಿನ್ನಾಭರಣಗಳಲ್ಲಿ ಮೂಡುತ್ತಿರುವ ಕುಸುರಿ ಕಲೆಯಿಂದಾಗಿ ಮನೆಯ ಹಳೆ ಚಿನ್ನಕ್ಕೂ ಹೊಸ ರೂಪ ದಕ್ಕುತ್ತಿದೆ. ಅದರಲ್ಲೂ ಜುಮುಕಿ, ಮೂಗುತಿ, ಬಳೆಗಳು, ಸರಗಳು ಹಳೆ ವಿನ್ಯಾಸವಾಗಿದ್ದರೂ ಅವುಗಳನ್ನು ಮ್ಯಾಚ್ ಮಾಡಿಕೊಳ್ಳುವುದಕ್ಕೆ ಹೆಚ್ಚು ಗಮನ ಹರಿಸುತ್ತಾರೆ.

ಚಿನ್ನದ ಒಡವೆಗಳಿಗೆ ಹರಳುಗಳ ಗೊಡವೆ ಹೆಚ್ಚಿದೆ. ಬೇರೆ ಬೇರೆ ದಿರಿಸು ಧರಿಸಿದಾಗ ಅದಕ್ಕೊಪ್ಪುವ ಮ್ಯಾಚಿಂಗ್‌ ಹರಳುಗಳನ್ನು ಕಿವಿಯೋಲೆಗೆ ಜೋಡಿಸಿ ತೊಡುವುದು ಸಾಮಾನ್ಯವಾಗಿದೆ. ಅದೂ ಅಲ್ಲದೆ ಕಿವಿಯೋಲೆ ಹಿಂದೆ ವಿವಿಧ ಬಗೆಯ ಅಲಂಕಾರಿಕ ಪ್ಲೇಟ್‌ ಜೋಡಿಸಿಕೊಳ್ಳುವ ಮೂಲಕವೂ ಮ್ಯಾಚಿಂಗ್ ಹಾಗೂ ವಿವಿಧ ವಿನ್ಯಾಸದ ಮೆರುಗಿಗೆ ಮಾರುಹೋಗುತ್ತಿದ್ದಾರೆ.  ಸಿಂಪಲ್‌ ಡಿಸೈನ್‌ ಚಿನ್ನದ ಸರಗಳಿಗೆ ಗ್ರ್ಯಾಂಡ್‌ ಡಿಸೈನ್‌ ಮ್ಯಾಚಿಂಗ್‌ ಕಿವಿಯೋಲೆಗಳನ್ನು ಧರಿಸುವುದು ಫ್ಯಾಶನ್‌. ಹಾಗೆ ಸಿಂಗಲ್‌  ನೆಕ್‌ಲೆಸ್‌ಗೆ ಮ್ಯಾಚ್‌ ಆಗುವ ಉದ್ದನೆಯ ಚಿನ್ನದ ನೆಕ್‌ಲೆಸ್‌ಗಳನ್ನು ಆಯಾ ಉಡುಪಿಗೆ ತಕ್ಕಂತೆ ಮ್ಯಾಚ್‌ ಮಾಡಿಕೊಳ್ಳುವ ಮೂಲಕ ದಿನೇದಿನೇ ಹೊಸತನ ಭರಿತ ಟ್ರೆಂಡ್‌ ಮಾನಿನಿಯರ ನಡುವೆ ಹರಿದಾಡುತ್ತಿದೆ.

ಅತಿಯಾದರೆ ಯಾವುದೂ ತರವಲ್ಲ
ಫ್ಯಾಶನ್‌ ಎಂದರೆ ಕೈಗೆ ಸಿಕ್ಕಿದ್ದನ್ನೆಲ್ಲ ಜೋಡಿಸಿ ಹಾಕಿಕೊಳ್ಳುವುದು ಎಂದು ಅರ್ಥವಲ್ಲ. ಕೆಲವೊಮ್ಮೆ ಆಯಾ ಸಮಯ–ಸಂದರ್ಭಕ್ಕೆ ಮಿತಿಮೀರಿ

ಆಭರಣಗಳನ್ನು, ಇತರೆ ವಸ್ತುಗಳನ್ನು ಮ್ಯಾಚ್‌ ಮಾಡಿದರೂ ಚೆನ್ನಾಗಿ ಕಾಣುವುದಿಲ್ಲ.ಮ್ಯಾಚಿಂಗ್‌ ಮಾಡುವಾಗ ನಾವು ತೊಡುವ ವಸ್ತ್ರಗಳು ಹಾಗೂ ಹೊರಟ ಉದ್ದೇಶವೂ ಮುಖ್ಯವಾಗುತ್ತದೆ. ಸಾಂಪ್ರದಾಯಿಕ ಸಮಾರಂಭಗಳಿಗೆ ಸೀರೆ, ಚೂಡಿದಾರ್ ತೊಟ್ಟು ಹೋಗುವಾಗ ಅದಕ್ಕೆ ಒಪ್ಪುವ ಮ್ಯಾಚಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಶಾಪಿಂಗ್, ಪಾರ್ಟಿಗಳಿಗೆ ಹೊರಟಾಗ ಧರಿಸಿದ ಮಾಡರ್ನ್ ವಸ್ತ್ರಕ್ಕೆ ತಕ್ಕಂತೆ ಟ್ರೆಂಡಿ ವಾಚ್‌, ಚಿಕ್ಕ ಹರಳಿನ ಕಿವಿಯೋಲೆ ಹೊಸ ಮೆರುಗು ನೀಡುತ್ತವೆ.

ಆಯಾ ಫ್ಯಾಶನ್‌ಗೆ ತಕ್ಕಂತೆ ಟ್ರೆಂಡಿಯಾಗಿರಲು ಎಲ್ಲರೂ ಆಸೆಪಡುತ್ತಾರೆ. ಕಾಲೇಜಿನ ಯುವತಿಯರು, ಕೆಲಸಕ್ಕೆ ಹೋಗುವ ಮಹಿಳೆಯರು ಪ್ರತಿ ನಿತ್ಯ ಟ್ರೆಂಡಿಯಾಗಿ ಕಾಣಲು ಬಯಸುತ್ತಾರೆ. ಆದರೆ ಯಾರು ಯಾವ ರೀತಿ ಮ್ಯಾಚ್‌ ಮಾಡಿದರೆ ಹೆಚ್ಚು ಒಪ್ಪುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಒಳಿತು. ಯಾವಾಗಲೂ ಮ್ಯಾಚಿಂಗ್ ಮಾಡಿಕೊಂಡು ಹೋಗುವುದಕ್ಕಿಂತ ಕೆಲವೊಮ್ಮೆ ಸರಳತೆಯೇ ಸುಂದರವಾಗಿ ಕಾಣುತ್ತದೆ ಎನ್ನುವುದನ್ನೂ ಮರೆಯಬಾರದು.

ಟ್ರೆಂಡಿ ಆಗಿ ಕಾಣಿಸಿಕೊಳ್ಳಲು ವಯಸ್ಸಿನ ಆಗತ್ಯವಿಲ್ಲ.  ಫ್ಯಾಷನ್ ಎನ್ನುವುದು ಕೇವಲ ಯುವಕ–ಯುವತಿಯರನ್ನು ಮಾತ್ರ ಆಕರ್ಷಿಸುವುದಲ್ಲ. ಯುವಕರಂತೆ ಹಿರಿಯರೂ ಸಹ ಟ್ರೆಂಡಿಯಾಗಿರಲು ಇಷ್ಟಪಡುತ್ತಾರೆ. ಗೃಹಿಣಿಯರೂ ಸಹ ಹೊರಗೆ ಬರುವಾಗ ಹೊಸ ಟ್ರೆಂಡನ್ನು ಅನುಸರಿಸಲು ಹಂಬಲಿಸುತ್ತಾರೆ.

ದೀಪಾ ಗುರುಲಿಂಗಸ್ವಾಮಿ
ಮೇಕಪ್‌ ಕಲಾವಿದೆ, ಬೆಲ್ಲಿ ಬೇಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT