ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್ ದುರಂತ ತಪ್ಪಿಸಲು ‘ಎಮರ್ಜೆನ್ಸಿ ಬ್ರೇಕ್‌ ಸ್ಟಾಪರ್‌’

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಲಿಫ್ಟ್‌ನಲ್ಲಿ ತೊಂದರೆಗಳಾಗಿ ಅನೇಕ ಅವಘಡಗಳಾದ ಬಗ್ಗೆ ನಿತ್ಯವೂ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ.
ಸಣ್ಣಪುಟ್ಟ ಗಾಯಗಳಾಗಿ, ಕೆಲವೊಂದು ಕಡೆ ಲಿಫ್ಟ್‌ಗಳು ಕೆಟ್ಟು ಪ್ರಾಣಹಾನಿಯೂ ಆಗಿದೆ. ಹೆಚ್ಚಿನ ಅಪಘಾತಗಳು ಲಿಫ್ಟ್ ಬಾಕ್ಸನ್ನು ಚಲಿಸುವಂತೆ ಮಾಡುವ ಮುಖ್ಯ ಕೇಬಲ್‌ ತುಂಡಾಗುವುದರಿಂದ ಇಂಥ ಅವಘಡಗಳು ಪದೇಪದೇ ಸಂಭವಿಸಿವೆ.

ಕೇಬಲ್‌ ಕಟ್‌ ಆಗುವುದರಿಂದ ಲಿಫ್‌್ಟ ಬಾಕ್‌್ಸ ರಭಸವಾಗಿ ಕೆಳಗೆ ಬೀಳುತ್ತದೆ. ಆದ್ದರಿಂದ ಒಳಗಿನ ಜನ ಒಮ್ಮೆಲೇ ಗಾಬರಿಯಿಂದ ಬಿದ್ದು ಗಾಯಗಳಾಗುತ್ತವೆ. ಆದರೆ ಇಂಥ ಅಪಘಾತಗಳನ್ನು ತಪ್ಪಿಸಲು ಒಂದು ಸಾಧನವಿದೆ. ಅದರ ಹೆಸರು ‘ಎಮರ್ಜೆನ್ಸಿ ಬ್ರೇಕ್‌ ಸ್ಟಾಪರ್‌’. ಅದು ಲಿಫ್ಟ್ ಬಾಕ್‌್ಸನಲ್ಲಿ ಇದ್ದರೆ ಸಾಕು.

ಸಾಧನಕ್ಕೆ ಬೇಕಾಗುವ ಉಪಕರಣಗಳು
*ಎರಡು ಗೇರ್‌ ಬಾಕ್ಸ್ – ಅದಕ್ಕೆ ಹೊಂದಿಕೊಂಡಿರುವಂತೆ ಡಿಸ್ಕ್ ಬ್ರೇಕ್‌.
*ಎರಡು ಕೇಬಲ್‌ಗಳು (ಡಿಸ್ಕ್ ಬ್ರೇಕ್‌ಗೆ ಹೊಂದಿಸಲು)
*ಗೇರ್‌ ವ್ಹೀಲ್‌ ಚಲಿಸಲು ಎರಡು ಸ್ಲಾಟೆಡ್ ಚಾನಲ್‌್ಸ
*ಬ್ರೇಕ್‌ ಹ್ಯಾಂಡಲ್‌ ಬಾರ್‌.

ಕಾರ್ಯನಿರ್ವಹಿಸುವ ವಿಧಾನ
ಲಿಫ್ಟ್ ಬಾಕ್‌್ಸನ ಹೊರಭಾಗದ ಮೇಲ್ಭಾಗದಲ್ಲಿ 2 ಗೇರ್‌ ವ್ಹೀಲ್‌ಗಳನ್ನು ಜೋಡಿಸಬೇಕು. ಈ ಗೇರ್‌ ವ್ಹೀಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿರುವಂತೆ  ‘ಡಿಸ್ಕ್ ಬ್ರೇಕ್‌’ ವ್ಯವಸ್ಥೆಯನ್ನು ಅಳವಡಿಸಬೇಕು. ಈ ಎರಡು ಗೇರ್‌ ವ್ಹೀಲ್‌ ಅಲ್ಲಾಡದಂತೆ ಒಂದು ಸಪೋರ್ಟಿಂಗ್‌ ರಾಡ್‌ ಅಳವಡಿಸಬೇಕು.

ಗೇರ್‌ ವ್ಹೀಲ್‌ ಸರಾಗವಾಗಿ ಚಲಿಸುವಂತೆ ಎರಡು ಸ್ಲಾಟೆಡ್‌ ಚಾನಲ್‌ಗಳನ್ನು ಗೋಡೆಗೆ ಭದ್ರವಾಗಿ ಕೂಡಿಸಬೇಕು. ಇದರಿಂದ ಮುಖ್ಯ ಕೇಬಲ್‌ ತುಂಡಾದಾಗ ಲಿಫ್ಟ್ ಬಾಕ್‌್ಸ ಒಮ್ಮೆಲೇ ಬೀಳದೆ ಸ್ಲಾಟೆಡ್ ಚಾನಲ್‌ ಮುಖಾಂತರ ಜಾರುತ್ತದೆ. ಇದರಿಂದ ಒಳಗಿನ ಜನರಿಗೆ ಅಪಾಯದ ಅರಿವಾಗುತ್ತದೆ. ಜಾಗೃತರಾಗಲು ಸಮಯ ದೊರೆಯುತ್ತದೆ.

ಗೇರ್‌ ವ್ಹೀಲ್‌ಗಳಿಗೆ ಕೇಬಲ್‌ಗಳ ಒಂದು ತುದಿಯನ್ನು ಜೋಡಿಸಬೇಕು. ಇನ್ನೊಂದು ತುದಿಯನ್ನು ಲಿಫ್ಟ್ ಬಾಕ್ಸ್‌ನಲ್ಲಿ ಹ್ಯಾಂಡಲ್‌ ಬಾರ್‌ಗೆ ಸೇರಿಸಬೇಕು. ಇದು ಒಂದು ರೀತಿಯಲ್ಲಿ ದ್ವಿಚಕ್ರ ವಾಹನದಲ್ಲಿನ ‘ಬ್ರೇಕ್‌’ನಂತಿರಬೇಕು. ಲಿಫ್ಟ್ ಬಾಕ್‌್ಸನ ಮುಖ್ಯ ಕೇಬಲ್‌ ತುಂಡಾದಾಗ, ಬಾಕ್‌್ಸ ಕೆಳಗೆ ಜಾರುತ್ತಿರುವಾಗಲೇ ಹ್ಯಾಂಡಲ್‌ ಬಾರ್‌ ಎಳೆದಾಗ ಲಿಫ್ಟ್ ಬಾಕ್‌್ಸ ನಿಂತು ಅಪಘಾತ ತಪ್ಪಿಸಬಹುದು. ಈ ವ್ಯವಸ್ಥೆಯಿಂದ ಬಹುತೇಕ ಅಪಘಾತಗಳನ್ನು ತಡೆಯಬಹುದು. ಜನ ಆತಂಕವಿಲ್ಲದೆ ಲಿಫ್ಟ್ ಬಳಸಬಹುದು.
ಮಾಹಿತಿಗೆ: 93418 99268
– ಪಿ.ಎನ್‌.ಎಂ. ಗುಪ್ತಾ

‘ಪ್ರಜಾವಾಣಿ’ ಮೆಟ್ರೊ ಪುರವಣಿಯಲ್ಲಿ ಪ್ರಕಟವಾದ (ಏ.8) ‘ಲಿಫ್ಟ್‌ನಲ್ಲೂ ಅಕ್ರಮ–ಸಕ್ರಮ’ ಲೇಖನಕ್ಕೆ ಬಂದ ಪ್ರತಿಕ್ರಿಯೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT