ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂತರಾಜ’ನ ಕಲೋಪಾಸನೆ

Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಐತಿಹಾಸಿಕ ಸ್ಥಳ, ಸ್ಮಾರಕ ಹಾಗೂ ಪ್ರಕೃತಿಯನ್ನು ಆಸ್ವಾದಿಸುವಾಗ ಹೊಮ್ಮುವ ಭಾವನೆಗಳನ್ನು ಬಣ್ಣಗಳ ಮೂಲಕ ಬಿಂಬಿಸಿದ್ದಾರೆ ಕಲಾವಿದ  ಕಾಂತರಾಜ್‌ ಎನ್‌.

ಕಳೆದ 15 ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಕೊಂಡಿರುವ ಇವರು, ತಮ್ಮ ಆರನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ರವೀಂದ್ರ ಕಲಾಕ್ಷೇತ್ರದ ಪಡಸಾಲೆ ಆರ್ಟ್‌ ಗ್ಯಾಲರಿಯಲ್ಲಿ ಏರ್ಪಡಿಸಿದ್ದಾರೆ. ಡಿಸೆಂಬರ್‌ 29ರವರೆಗೆ ಇವರ ಕಲಾಕೃತಿಗಳು ವೀಕ್ಷಣೆಗೆ ಲಭ್ಯವಿರುತ್ತವೆ. 

ನಿಸರ್ಗ ಹಾಗೂ ಐತಿಹಾಸಿಕ ಸ್ಥಳಗಳ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಕಾಂತರಾಜ್‌, ಈವರೆಗೆ ಹಲವಾರು ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡಿ ಅವುಗಳಿಗೆ ತಮ್ಮ ಕುಂಚದ ಮೂಲಕ ಮರು ಜೀವ ನೀಡಿದ್ದಾರೆ.

ಇಲ್ಲಿ ಪ್ರದರ್ಶಗೊಳ್ಳುವ ಕಲಾಕೃತಿಗಳೆಲ್ಲವೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚಿತ್ರಿಸಿದ್ದಲ್ಲ. ಬದಲಾಗಿ ಪ್ರಕೃತಿಯ ಮಡಿಲಲ್ಲಿ, ಐತಿಹಾಸಿಕ ಸ್ಥಳಗಳಲ್ಲಿಯೇ  ಕುಳಿತು ರಚನೆ ಮಾಡಿದಂತಹ ಕೃತಿಗಳು ಎಂಬುದು ವಿಶೇಷ.

ಜಲವರ್ಣ ಹಾಗೂ ಲ್ಯಾಂಡ್‌ಸ್ಕೇಪ್‌ಗಳಲ್ಲಿರುವ ಇವರ ಕಲಾಕೃತಿಗಳು ಪ್ರಕೃತಿಯ ವಿವಿಧ ಕಾಲಘಟ್ಟಗಳ ಕುರಿತಾಗಿದೆ. ಇದಲ್ಲದೆ ಈ ಕಲಾಕೃತಿಗಳೆಲ್ಲವೂ ನೋಡಿದೊಡನೆ ಅರ್ಥವಾಗುವಂತೆ ಚಿತ್ರಿತವಾಗಿದೆ.

ಹೂ ಬಿಟ್ಟ ಗುಲ್‌ ಮೊಹರ್‌ ಮರ, ಪ್ರವಾಸಿ ತಾಣ, ಐತಿಹಾಸಿಕ ಸ್ಥಳಗಳು, ಸ್ಮಾರಕಗಳು, ಕಾನನ ಮುಂತಾದ ವಿಷಯಗಳು ಇವರ ಕಲಾಕೃತಿಗೆ ವಿಷಯವಸ್ತುವಾಗಿವೆ.

ಬಾಲ್ಯದಿಂದಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಕಾಂತರಾಜ್, ಕಲೆಯ ಬಗ್ಗೆ ಆಕರ್ಷಿತರಾಗಿದ್ದು ಅವರ ತಂದೆ ಹಾಗೂ ಸಹೋದರರಿಂದ. ನಂತರ ಚಿತ್ರಕಲೆಯ ಬಗ್ಗೆ ಅಧ್ಯಯನ ನಡೆಸಿ ಸುಮಾರು 15 ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
2014ನೇ ಸಾಲಿನ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ನಡೆಸುವ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಚಿತ್ರಕಲಾ ಆಸಕ್ತರಿಗೆ ಇವರು ತರಬೇತಿಯನ್ನೂ ನೀಡುತ್ತಿದ್ದಾರೆ.
ಸಂಪರ್ಕ: 98443 00600

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT