ಭಾನುವಾರ, 2 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಬೂಜಿನಿಂದ ವಸ್ತುಗಳನ್ನು ಸಂರಕ್ಷಿಸಿ: ಮನೆಯನ್ನು ಹೀಗೆ ಅಲಂಕರಿಸಿ

Published 11 ಮೇ 2024, 0:40 IST
Last Updated 11 ಮೇ 2024, 0:40 IST
ಅಕ್ಷರ ಗಾತ್ರ
ಬಿಸಿಲ ಝಳ, ಒಣ ಹವೆಯಿಂದ ಬಸವಳಿದಿದ್ದ ಜನರಿಗೆ ಈಗ ಮಳೆಯ ಸಿಂಚನದ ಮುದ. ಆದರೆ ಮಳೆಯ ಹಿತದ ನಡುವೆ, ವಾತಾವರಣದ ತೇವಾಂಶದಿಂದ ಉಂಟಾಗುವ ಬೂಜು ಸಮಸ್ಯೆ, ಮನೆಯೊಳಗೆ ದುರ್ಗಂಧ ಬೀರುವುದರ ಜತೆಗೆ, ವಸ್ತುಗಳನ್ನೂ ಹಾಳು ಮಾಡಲಿದೆ. ಹೀಗಾಗಿ ಒಳಾಂಗಣವನ್ನು ಬೆಚ್ಚಗಿರಿಸಿ, ಮನೆಯ ಅಂದವನ್ನೂ ಹೆಚ್ಚಿಸಲು ಇಲ್ಲಿವೆ ಒಂದಷ್ಟು ಮಾರ್ಗೋಪಾಯಗಳು...

ಲ್ಯಾಂಪ್‌ ಲೈಟ್‌ಗಳು

ಜೋರು ಮಳೆಗಾಲದಲ್ಲಿ ಮನೆಯೊಳಗೆ ಬೆಳಕಿನ ಕೊರತೆಯಾಗಬಹುದು. ಹೀಗಾಗಿ ಗೋಡೆಯ ಮೇಲೆ ಅಲ್ಲಲ್ಲಿ ಲ್ಯಾಂಪ್‌ಲೈಟ್‌ಗಳನ್ನು ಅಳವಡಿಸಿ. ಇದು ಮನೆಗೆ ಸಾಂಪ್ರದಾಯಿಕ ಲುಕ್‌ ಜತೆಗೆ ಬೆಳಕನ್ನೂ ನೀಡಬಲ್ಲದು. ಲ್ಯಾಂಪ್‌ಲೈಟ್‌ಗಳು ಹಳದಿ ಬಣ್ಣದಲ್ಲಿ ಇದ್ದರೆ ಉತ್ತಮ. 

ಕರ್ಟನ್‌

ಮಳೆಗಾಲದಲ್ಲಿ ಕಿಟಕಿಗಳಿಗೆ ಕರ್ಟನ್‌ ಅಳವಡಿಸುವುದು ಒಳ್ಳೆಯದು. ಆದಷ್ಟು ಹಗುರುದ ಮತ್ತು ತಿಳಿ ಬಣ್ಣದ ಕರ್ಟನ್‌ಗಳನು ಹಾಕಿ. ಇವು ಮನೆಯೊಳಗೆ ಬೆಳಕು ಬರುವಂತೆ ಮಾಡುತ್ತವೆ. ಜತೆಗೆ ಒಳಗೇ ಕುಳಿತು ಹೊರಗಿನ ವಾತಾವರಣವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. 

ಧೂಪ ಮತ್ತು ದೀಪದ ಬಳಕೆ

ಮಳೆಗಾಲದಲ್ಲಿ ಮನೆಯ ಒಳಗೆ ದೂಪವನ್ನು ಹಚ್ಚಿಡಿ. ಇದು ಉತ್ತಮ ಸುವಾಸನೆಯನ್ನೂ ನೀಡುತ್ತದೆ. ದೂಪವನ್ನು ಹಚ್ಚಿ ಮೇಣದಬತ್ತಿ ಅಥವಾ ಪುಟ್ಟ ಎಲ್‌ಇಡಿ ಬಲ್ಪ್‌ಗಳ ನಡುವೆ ಇಟ್ಟರೆ ದೂಪದಿಂದ ಹೊರಬರುವ ಸಣ್ಣ ಹೊಗೆ ಮನೆಯ ಹಾಲ್‌ನಲ್ಲಿ ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತದೆ.  

ವಿಂಡ್‌ ಚಿಮ್ಸ್‌

ಮನೆಯ ಹಾಲ್‌ನಲ್ಲಿ ಅಥವಾ ಮನೆಯನ್ನು ಪ್ರವೇಶಿಸುವ ದ್ವಾರದಲ್ಲಿ ವಿಂಡ್‌ ಚೈಮ್ಸ್ ತೂಗುಹಾಕಿ. ಗಾಳಿ ಬಂದಾಗ ವಿಂಡ್‌ ಚೈಮ್ಸ್‌ನಿಂದ ಹೊರಬರುವ ಇಂಪಾದ ಸದ್ದು ಹಿತವೆನಿಸುತ್ತದೆ. ಇದು ಮನೆಯ ಅಂದವನ್ನೂ ಇಮ್ಮಡಿಗೊಳಿಸುತ್ತದೆ. ಸಣ್ಣ ಗೆಜ್ಜೆಗಳಿರುವ ವಿಂಡ್‌ ಚೈಮ್ಸ್‌, ಲೋಹದ ಅಥವಾ ಬಿದಿರಿನಿಂದ ತಯಾರಿಸಿದಂತಹವುಗಳು ಸೇರಿದಂತೆ ತರಹೇವಾರಿ ವಿಂಡ್‌ ಚೈಮ್ಸ್‌ಗಳು ಆನ್‌ಲೈನ್‌, ಮಾರುಕಟ್ಟೆಗಳಲ್ಲಿ ದೊರೆಯುತ್ತವೆ.

ಗಿಡಗಳು

ಮನೆಯ ಒಳಾಂಗಣ ಅಂದವಾಗಿರುವಂತೆ ನೋಡಿಕೊಳ್ಳಲು ಗಿಡಗಳನ್ನು ಇಡುವುದು ಎಲ್ಲಾ ಋತುಗಳಲ್ಲಿ ಒಳ್ಳೆಯದು. ಗಿಡಗಳು ಗಾಳಿಯನ್ನು ಶುದ್ಧೀಕರಿಸುವುದರ ಜತೆಗೆ ಮನಸ್ಸಿಗೆ ಮುದ ತರುತ್ತವೆ. ಉದಾಹರಣೆಗೆ ಸ್ನೇಕ್‌ ಪ್ಲಾಂಟ್‌, ಪೀಸ್‌ ಲಿಲ್ಲಿ, ಜರಿಗಿಡಗಳನ್ನು ಇಡಬಹುದು. ಇವು ನಿಮ್ಮ ಒಳಾಂಗಣವನ್ನು ದೊಡ್ಡದಾಗಿ ಕಾಣುವಂತೆಯೂ ಮಾಡುತ್ತವೆ.

ಮ್ಯಾಟ್‌ಗಳು

ಮನೆಯ ಬಾಗಿಲಿನಲ್ಲಿ ಮ್ಯಾಟ್‌ಗಳನ್ನು ಹಾಕುವುದು ಕೂಡ ಮನೆಗೆ ಒಂದು ಲುಕ್‌ ನೀಡುತ್ತದೆ. ಮಳೆಗಾಲದಲ್ಲಿ ಬಟ್ಟೆಯ ಮ್ಯಾಟ್‌ಗಳನ್ನು ಹಾಕಬೇಡಿ, ಒದ್ದೆಗೆ ದುರ್ವಾಸನೆ ಬೀರಬಹುದು. ಬದಲು ರಬ್ಬರ್‌ ಅಥವಾ ತೆಂಗಿನ ನಾರಿನ ಮ್ಯಾಟ್‌ಗಳು ಉತ್ತಮ. ಮ್ಯಾಟ್‌ಗಳ ಬಳಕೆಯಿಂದ ಮನೆ‌ ಕೊಳೆಯಾಗುವುದರಿಂದಲೂ ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT