ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲ್ಬರ್ಗ ಬಿ ಗ್ರೇಡ್ ನಗರವನ್ನಾಗಿಸಿ

Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಲ್ಬರ್ಗವನ್ನು `ಬಿ~ ಗ್ರೇಡ್ ನಗರವನ್ನಾಗಿ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಧರಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ನೌಕರರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಗರ ಎರಡು ವಿಧಾನಸಭೆ, 55 ವಾರ್ಡ್ ಹೊಂದಿದ್ದು ಮನೆ ಬಾಡಿಗೆ ದರ ತುಂಬಾ ಹೆಚ್ಚಾಗಿದೆ. ಸರ್ಕಾರಿ ನೌಕರರು ವೇತನದ ಅರ್ಧದಷ್ಟು ಮನೆ ಬಾಡಿಗೆಗೆ ಕೊಡಬೇಕಾಗುತ್ತದೆ. ಅದಕ್ಕಾಗಿ ಗುಲ್ಬರ್ಗವನ್ನು `ಬಿ~ ಗ್ರೇಡ್ ನಗರವೆಂದು ಘೋಷಿಸುವಂತೆ ಪ್ರಥಮ ಹಂತವಾಗಿ ಸ್ಥಳೀಯ ಶಾಸಕರು ಮತ್ತು ಸಚಿವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.

371ನೇ ವಿಧಿ ಯಶಸ್ಸಿಗೆ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸರ್ಕಾರಿ ವಿವಿಧ ಇಲಾಖೆ ನೌಕರರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು. ರೈಲ್ವೆ ಇಲಾಖೆ ಅಧಿಕಾರಿ ಪಿ.ಉಮಾಪತಿ, ಎ.ಎಸ್.ಪಿ. ರಾವ್, ಕೇಂದ್ರ ಆದಾಯ ತೆರಿಗೆ ಇಲಾಖೆ ನೌಕರರ ಸಂಘದ ರಾಜಕುಮಾರ ಸಿಂಗ್ ರಾಠೋಡ, ಗುಲ್ಬರ್ಗ

ವಿವಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಕಾಂಬಳೆ, ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಕೋತಾಳಿ ಭೂತಾಳೆಪ್ಪ, ಅಂಚೆ ಮತ್ತು ತಂತಿ ಇಲಾಖೆ ನೌಕರರ ಸಂಘದ ಸುಶೀಲ್‌ಕುಮಾರ ಚಿತಕೋಟಿ, ವಿ.ಕೆ. ಬಬಲಾದಿ, ಶ್ರೀಮಂತ ಕೋಬಾಳ, ವಿವೇಕನಂದ, ಸಂಗೀತಾ ಕಟ್ಟೀಮನಿ ಪಾಲ್ಗೊಂಡಿದ್ದರು. ನಾಗೇಂದ್ರ ಪಾಮಗಾಂವ ನಿರೂಪಿಸಿದರು. ಸಿದ್ದಣ್ಣ ಭಾವಿಮನಿ ವಂದಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT