ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಮಂಡಲದ ನೆರೆಯ ಗ್ರಹದಲ್ಲಿ ನೀರಿರಬಹುದೆ?

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ನಮ್ಮ ಸೌರಮಂಡಲಕ್ಕೆ ಅತ್ಯಂತ ಸಮೀಪ ಇರುವ ಪ್ರೋಕ್ಸಿಮಾ ಸೆಂಕ್ಟೌರಿ ನಕ್ಷತ್ರವನ್ನು ಸುತ್ತಿಬರುವ ಪ್ರೋಕ್ಸಿಮಾ ಬಿ ಎಂಬ ಗ್ರಹದಲ್ಲಿ ನೀರು ಇರಲು ಸೂಕ್ತವಾದಷ್ಟು ಉಷ್ಣತೆ ಇದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಆದರೆ ನೀರು ಯಾವ ಸ್ವರೂಪದಲ್ಲಿ ಇದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇದರ ಜತೆಗೆ ಜೀವಿಗಳ ಅಭಿವೃದ್ಧಿಗೆ ಹಾಗೂ ಜೀವಿಗಳ ವಾಸಕ್ಕೆ ಯೋಗ್ಯವಾಗಿದ್ದು, ನಮಗೆ ಸಮೀಪ ಇರುವ ಗ್ರಹ ಇದೊಂದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಐದೂವರೆ ದಿನಕ್ಕೆ ಮಾಯ
ಈ ವಿಜ್ಞಾನಿಗಳ ತಂಡ ಪ್ರೋಕ್ಸಿಮಾ ಸೆಂಕ್ಟೌರಿ ನಕ್ಷತ್ರವನ್ನು ಅಧ್ಯಯನ ಮಾಡುತ್ತಿತ್ತು. ಆದರೆ ಈ ನಕ್ಷತ್ರದ ಸಮೀಪ ಇದ್ದ ಸಣ್ಣ ಚುಕ್ಕೆಯೊಂದು ಮರೆಯಾಗಿ ಮತ್ತೆ, ಗೋಚರಿಸುತ್ತಿತ್ತು. ಅದು ಐದೂವರೆ ದಿನ ಗೋಚರಿಸಿದರೆ, ಮುಂದಿನ ಐದೂವರೆ ದಿನ ಗೋಚರಿಸುತ್ತಿರಲಿಲ್ಲ. ಹೀಗಾಗಿ ಊಹೆಯ ಮೇಲೆ ಆ ಚುಕ್ಕೆಯ ಮೇಲೆ ಗಮನಹರಿಸಲಾಯಿತು.  ನಂತರ ಅದೊಂದು ಗ್ರಹ ಎಂದು ದೃಢವಾಯಿತು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT