ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ ಅನಿಲ ವಿದ್ಯುತ್‌ ಸ್ಥಾವರಕ್ಕೆ ಬಿಲ್ಡರ್‌ಗಳಿಂದ ಅಡ್ಡಿ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಅನಿಲ ಆಧಾರಿತ ವಿದ್ಯುತ್‌ ಉತ್ಪಾದನಾ ಸ್ಥಾವರ ಸ್ಥಾಪನೆಗೆ ಕೆಲ ಬಿಲ್ಡರ್‌ಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್‌ ಹೇಳಿದ್ದಾರೆ.

ನಗರದ ರಾಜ್ಯ ವಿದ್ಯುತ್‌  ಪೂರೈಕೆ ನಿಯಂತ್ರಣ ಕೇಂದ್ರದಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ವಿದ್ಯುತ್‌ ಪೂರೈಕೆ ಸ್ಥಿತಿ ಕುರಿತು ಚರ್ಚೆ ನಡೆಸಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಬಿಲ್ಡರ್‌ಗಳು ವಿದ್ಯುತ್‌ ಸ್ಥಾವರದಿಂದ  ಜನರಿಗೆ ಅಪಾಯವಾಗುತ್ತದೆ ಎಂಬ ಭಯ ಹುಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.  ಸಾರ್ವಜನಿಕರು ಈ ಬಗ್ಗೆ ಆತಂಕಪಡಬೇಕಾಗಿಲ್ಲ.   ಯೋಜನೆಯಿಂದ ಪರಿಸರಕ್ಕೆ ಹಾನಿ ಯಾಗುವುದಿಲ್ಲ.  ಈ  ಸ್ಥಾವರದಲ್ಲಿ  350 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುವುದು ಎಂದರು.

ಲೋಡ್‌ ಶೆಡ್ಡಿಂಗ್‌ ಇಲ್ಲ: ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದರೂ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಪುನರುಚ್ಚರಿಸಿದರು.
ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಜಲಾಶಯಗಳ ನೀರನ್ನು ಬಳಸಲಾಗುತ್ತಿದೆ. 

ಬೆಂಗಳೂರು ಮತ್ತಿತರ ಕಡೆಗಳಲ್ಲಿ ತಾಂತ್ರಿಕ ಕಾರಣಗಳಿಂದ ವಿದ್ಯುತ್‌ ಉತ್ಪಾದನೆ ಕಡಿಮೆ ಆಗಿದೆ. ಬೆಂಗಳೂರು ದಕ್ಷಿಣ ಮತ್ತು ಮಹಾದೇವಪುರದಲ್ಲಿ  ಹೆಚ್ಚಿನ  ತೊಂದರೆ ಇದೆ. ಅದನ್ನು ಆದಷ್ಟು ಶೀಘ್ರವೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ವಿದ್ಯುತ್‌ ಕೊರತೆ ಆಗದಂತೆ  ನೋಡಿಕೊಂಡಿದ್ದೇವೆ.  ಕೇಂದ್ರೀಯ ಗ್ರಿಡ್‌ ಮತ್ತು  ಅನ್ಯ ರಾಜ್ಯಗಳಿಂದಲೂ ವಿದ್ಯುತ್‌  ಖರೀದಿ ಮಾಡಲಾಗುತ್ತಿದೆ ಎಂದರು.

*
ರಮ್ಯಾ ತಪ್ಪು ಮಾಡಿಲ್ಲ

ಪಾಕ್‌ ಕುರಿತು ಹೇಳಿಕೆ ನೀಡಿ ರಮ್ಯಾ ಯಾವುದೇ ತಪ್ಪು ಮಾಡಿಲ್ಲ.  ನಾವು ಸದಾ ಪಾಕ್‌ ಜತೆ ಜಗಳ ಆಡಲು ಸಾಧ್ಯವೇ ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಎಲ್‌.ಕೆ.ಆಡ್ವಾಣಿಯವರು ತಮ್ಮ ಪುಸ್ತಕದಲ್ಲಿ ಪಾಕಿಸ್ತಾನದ ಕುರಿತು ಬರೆದಿದ್ದಾರೆ.  ಮೋದಿಯವರು ನವಾಜ್‌ ಷರೀಫ್‌ ಅವರ ತಾಯಿಗೆ ಉಡುಗೊರೆಯಾಗಿ ಸೀರೆ ಕಳುಹಿಸಿದ್ದರು.

ಇವೆಲ್ಲವನ್ನು ಮರೆಯಲು ಸಾಧ್ಯವೇ? ಬಿಜೆಪಿಯವರು ಸಾಧ್ಯವಾದರೆ ಬಸ್‌, ರೈಲು ಸಂಪರ್ಕ ಹಾಗೂ ಪಾಕ್‌ ಜತೆಗಿನ ಕ್ರೀಡಾ ಸಂಬಂಧವನ್ನು ನಿಲ್ಲಿಸಲಿ ಎಂದು ಶಿವಕುಮಾರ್‌ ಸವಾಲು ಹಾಕಿದರು.

*
ಬೆಂಬಲ  ಅಗತ್ಯವಿಲ್ಲ: ಸಿ.ಎಂ
ಹುಬ್ಬಳ್ಳಿ: ಪಾಕಿಸ್ತಾನ ಪರ ಹೇಳಿಕೆ ನೀಡಿದ ಮಾಜಿ ಸಂಸದೆ ರಮ್ಯಾ ಅವರಿಗೆ ಯಾರ ಬೆಂಬಲದ ಅಗತ್ಯವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹೇಳಿದರು.

ಧಾರವಾಡ ಐಐಟಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ರಮ್ಯಾ ವಿರುದ್ಧ ಬಿಜೆಪಿಯವರು ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್‌ನವರಾರೂ ಬೆಂಬಲಕ್ಕೆ ನಿಲ್ಲಲಿಲ್ಲವಲ್ಲ’ ಎಂದು ಪತ್ರಕರ್ತರು ಕೇಳಿದಾಗ, ‘ಅವರಿಗೆ ಸ್ವಂತವಾಗಿ ಹೋರಾಡುವ ತಾಕತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT