ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದ ಡೇರಿ: ದೇಶಕ್ಕೆ ಮಾದರಿ’

Last Updated 29 ಆಗಸ್ಟ್ 2016, 5:58 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದ ಸಹಕಾರಿ ಹಾಲು ಉತ್ಪಾದಕರ ಸಂಘಗಳು ತಮ್ಮ ಉತ್ತಮ ನಿರ್ವಹಣಾ ವ್ಯವಸ್ಥೆಯಿಂದ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ ಹೇಳಿದರು.

ಮೈಸೂರಿನ ಕೆಎಂಎಫ್‌ ತರಬೇತಿ ಕೇಂದ್ರ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಯೋಗದಲ್ಲಿ ಉಡುಪಿ ಜಿಲ್ಲಾ ಹಾಲು ಉತ್ಪಾದಕ ಸಂಘಗಳ ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ)ನಲ್ಲಿ ಇತ್ತೀಚೆಗೆ ಆಯೋಜಿಸಿದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂ ರಿನ ಕರ್ನಾಟಕ ಹಾಲು ಮಹಾಮಂಡಳಿ ತರಬೇತಿ ಕೇಂದ್ರದಿಂದ ನಡೆಯುತ್ತಿರುವ ನಿರಂತರ ತರಬೇತಿಯಿಂದಾಗಿ ಹಾಲು ಉತ್ಪಾದಕ ಸಂಘಗಳು ಹೆಚ್ಚು ವೃತ್ತಿಪ ರತೆಯಿಂದ ಕಾರ್ಯನಿರ್ವ ಹಿಸುವಂತಾಗಿದೆ ಎಂದರು.

ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಹಾಲು ಮಹಾಮಂಡಳಿ ತರಬೇತಿ ಕೇಂದ್ರದ ಉಪಪ್ರಬಂಧಕ ಡಾ. ಅನಿಲ್‌ ಕುಮಾರ್‌ ಶೆಟ್ಟಿ, ಉಪನ್ಯಾಸಕರಾದ ಎಚ್‌.ಎಂ. ಮಹದೇವ ಸ್ವಾಮಿ, ರಾಮಚಂದ್ರಪ್ಪ ಉಪಸ್ಥಿತರಿದ್ದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಣಿಪಾಲ ಕೇಂದ್ರದ ಸಹಾಯಕ ವ್ಯವಸ್ಥಾಪಕರಾದ ಶಿವಪ್ಪ ಸ್ವಾಗತಿಸಿದರು, ಸತೀಶ್‌ ಯಡಿಯಾಳ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT