ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಲಿದೆ ಕಾರು!

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮಹಾನಗರಗಳಲ್ಲಿ ವಾಹನ ದಟ್ಟಣೆಗೆ ಬೇಸರಿಸದ ಜನರೇ ಇಲ್ಲವೆನ್ನಬಹುದು. ಇಂಥ ತಲೆನೋವಿನಿಂದ ಜನರನ್ನು ಪಾರು ಮಾಡಲು ಯೋಚಿಸಿರುವ ಫ್ರಾನ್ಸ್‌ನ ತಂತ್ರಜ್ಞರು ಸ್ವಯಂಚಾಲಿತ ಹಾರುವ ವಿಮಾನದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. 

ಜಾಗತಿಕ ಜನಸಂಖ್ಯೆಯ ಶೇಕಡಾ 60ರಷ್ಟು ಮಂದಿ ನಗರ ಪ್ರದೇಶಗಳಲ್ಲಿ 2030ರ ವೇಳೆಗೆ ವಾಸಿಸಲಿದ್ದಾರೆ ಎಂದು ಎಣಿಕೆ ಹಾಕಿರುವ ತಂತ್ರಜ್ಞರು, ಇದರಿಂದಾಗಿ ಆಗ ವಾಹನ ದಟ್ಟಣೆ ಇನ್ನೂ ಹತ್ತು ಪಟ್ಟು ಹೆಚ್ಚಾಗುವ ಸಾಧ್ಯತೆ ಕಂಡುಕೊಂಡಿದ್ದಾರೆ.

ಸಂಚಾರ ದಟ್ಟಣೆ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿಭಾಯಿಸಲು ಹಾರುವ ಕಾರೇ ಸೂಕ್ತ ಎಂಬ ಅಭಿಮತಕ್ಕೆ ಬಂದಿದ್ದಾರೆ. ಈ ಕಾರಿಗೆ ‘ವಾಹನ್‌’ ಎಂದು ಹೆಸರು ಇಡಲಾಗಿದೆ.

ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಎಲ್ಲಾ ದೇಶಗಳಲ್ಲೂ ಈಗಿರುವ ಕಾನೂನಿನ ಪ್ರಕಾರ ಪೈಲಟ್‌ ಇಲ್ಲದ ವಿಮಾನವನ್ನು ಹಾರಿಸುವಂತಿಲ್ಲ. ಆದ್ದರಿಂದ ಚಾಲಕ ಇಲ್ಲದ ಈ ಕಾರನ್ನು ಹಾರಿಸಲು ಅನುಮತಿ ನೀಡಲಾಗುವುದೇ ಎಂಬ ಸಮಸ್ಯೆಯೂ ತಂತ್ರಜ್ಞರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT