ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ತನದ ಪರಿಣಾಮ

ಪಂಚರಂಗಿ
Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ಖ್ಯಾತ ಗಾಯಕಿ, ಕೃಷ್ಣಸುಂದರಿ ಕೆಲ್ಲಿ ರೋಲ್ಯಾಂಡ್‌ ‘ಅಮ್ಮನಾದ ಮೇಲೆ ಶರೀರವನ್ನು ನೋಡುವ ತನ್ನ ದೃಷ್ಟಿಕೋನವೇ ಬದಲಾಗಿದೆ’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಡೇಲಿಮೇಲ್‌ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ತಾಯಿತನದಿಂದ ತಮ್ಮ ಶರೀರದಲ್ಲಾದ ಬದಲಾವಣೆಗಳ ಕುರಿತು ಮಾತನಾಡಿದ್ದಾರೆ. ‘ಅಂತೂ ಈಗ ನನ್ನ ಚರ್ಮದ ಕುರಿತು ಕಂಫರ್ಟಬಲ್‌ ಎನಿಸುತ್ತಿದೆ’ ಎಂದೂ ಅವರು ಉದ್ಘರಿಸಿದ್ದಾರೆ.

‘ಹೆರಿಗೆಯ ನಂತರ ಹೊಟ್ಟೆಯ ಮೇಲೆ ಮೂಡುವ ಗುರುತುಗಳನ್ನು ಅಳಿಸಲು ಯಾರಾದರೂ ದಾರಿಯನ್ನು ಹುಡುಕಬೇಕಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಆದರೆ ಈಗ ಮಗು ಹೆತ್ತ ಮೇಲೂ ತಾಯಿಯ ಹೊಟ್ಟೆಯ ಮೇಲೆ ಹೆರಿಗೆಯ ಗುರುತುಗಳಿಲ್ಲದಿದ್ದರೆ ನನಗೆ ಇಷ್ಟವಾಗುವುದೇ ಇಲ್ಲ’ ಎಂದು ಅವರು ಬದಲಾದ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ತಮ್ಮಲ್ಲಿ ಈ ಬದಲಾವಣೆ ಉಂಟಾಗಲು ತಮ್ಮ ತಾಯ್ತನವೇ ಕಾರಣ ಎಂದೂ ಹೇಳಿದ್ದಾರೆ. ಕೆಲ್ಲಿ ಅವರಿಗೆ 21 ತಿಂಗಳ ಮಗ (ಟೈಟಾನ್‌) ಇದ್ದಾನೆ.

ಗಾಯಕಿ, ಗೀತರಚನೆಗಾರ್ತಿ, ನಟಿ, ಕಿರುತೆರೆ ಕಲಾವಿದೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಗುರ್ತಿಸಿಕೊಂಡಿರುವ ಕೆಲ್ಲಿ, ‘ಡೆಸ್ಟಿನೀಸ್‌ ಚೈಲ್ಡ್‌’ ಸಂಗೀತ ತಂಡದ ಮೂಲಕ ಪ್ರಸಿದ್ಧಿಗೆ ಬಂದವರು. ‘ಹಿಯರ್‌ ಐ ಆ್ಯಮ್‌’, ‘ಟಾಕ್‌ ಅ ಗುಡ್‌ ಫ್ರೇಂ’ ಇವರ ಜನಪ್ರಿಯ ಆಲ್ಬಂಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT