ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಯಿ:  ಏಕಾಂತವಾಸ ಪ್ರಯೋಗ ಅಂತ್ಯ

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ (ಎಎಫ್‌ಪಿ): ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಮಂಗಳ ಯೋಜನೆಯ ಭಾಗವಾಗಿ ಅಮೆರಿಕದ ಹವಾಯಿಯಲ್ಲಿ ಆರು ಜನರು ಒಂದು ವರ್ಷದಿಂದ ಕೈಗೊಂಡಿದ್ದ ಏಕಾಂತವಾಸ ಅಂತ್ಯವಾಗಿದೆ. ಪ್ರಯೋಗಕ್ಕೆ ಒಳಗಾಗಿದ್ದ ಆರು ಮಂದಿ ಸೋಮವಾರ ಹೊರ ಜಗತ್ತಿಗೆ ಕಾಲಿಟ್ಟಿದ್ದಾರೆ.

ಮೌನಾಲಾವೊದ ಬ್ಯಾರೆನ್‌ನಲ್ಲಿ ನೆಲೆಗೊಂಡಿದ್ದ  ಈ ತಂಡದ ಸದಸ್ಯರು, 36 ಅಡಿ ಸುತ್ತಳತೆ ಹಾಗೂ 20 ಅಡಿ ಎತ್ತರದ ಗುಮ್ಮಟದೊಳಗೆ (ಡೋಮ್) ಒಂದು ವರ್ಷದ ವಾಸ ಪೂರ್ಣಗೊಳಿಸಿದ್ದಾರೆ.  

ಪ್ರಾಣಿಗಳು ಹಾಗೂ ಸಸ್ಯವರ್ಗ ಇಲ್ಲದ ಪ್ರದೇಶದಲ್ಲಿ ಗುಮ್ಮಟವನ್ನು ನಿರ್ಮಿಸಲಾಗಿತ್ತು. 2015ರ ಆಗಸ್ಟ್ 28ರಂದು ಇವರ ವಾಸ ಆರಂಭವಾಗಿತ್ತು. ಈ ತಂಡದಲ್ಲಿ ಜರ್ಮನಿಯ ಭೌತಶಾಸ್ತ್ರಜ್ಞ, ಫ್ರಾನ್ಸ್‌ನ ಖಗೋಳ ಜೀವಶಾಸ್ತ್ರಜ್ಞ ಹಾಗೂ ನಾಲ್ವರು ಅಮೆರಿಕನ್ನರು ಇದ್ದರು. ನಾಲ್ವರಲ್ಲಿ ಪೈಲಟ್, ವಾಸ್ತುಶಿಲ್ಪಿ, ವೈದ್ಯ/ಪತ್ರಕರ್ತ ಹಾಗೂ ಮಣ್ಣು ವಿಜ್ಞಾನಿ ಸೇರಿದ್ದಾರೆ.

‘ಅದ್ಭುತ ಎನಿಸುತ್ತಿದೆ, ಹೊಸ ಗಾಳಿ ತಾಜಾ ಆಹಾರ ಸೇವಿಸಲು ಸಂತಸವಾಗುತ್ತಿದೆ’ ಎಂದು ಏಕಾಂತವಾಸದಿಂದ ಹೊರಬಂದ ಬಳಿಕ ಫ್ರಾನ್ಸ್‌ನ ಖಗೋಳ ಜೀವಶಾಸ್ತ್ರಜ್ಞ ಸಿಪ್ರಿಯನ್ ವೆರ್‌ಸೀಕ್ಸ್ ಅವರು ಹೇಳಿದ್ದಾರೆ.

ಏಕತಾನತೆಯೇ ಈ ಪ್ರಯೋಗದ ಅತಿದೊಡ್ಡ ಸವಾಲಾಗಿತ್ತು ಎಂದೂ ಅವರು ಹೇಳಿದ್ದಾರೆ. ಆದಾಗ್ಯೂ ಪ್ರಯೋಗದ ಫಲಿತಾಂಶದ ಬಗ್ಗೆ ಅವರು ಆಶಾವಾದಿಯಾಗಿದ್ದಾರೆ.

*
ಹೀಗಿತ್ತು ಜೀವನಕ್ರಮ
ಪುರುಷ ಮತ್ತು ಮಹಿಳೆಯರಿಗೆ ಚಿಕ್ಕ ಕೋಣೆಗಳಿದ್ದವು. ಅಲ್ಲಿ ಮಲಗಲು ಮಂಚದ ವ್ಯವಸ್ಥೆ ಇತ್ತು. ಪುಡಿ ರೂಪದ ಗಿಣ್ಣು (ಚೀಸ್‌) ಮತ್ತು ಡಬ್ಬಿಯಲ್ಲಿ ಸಂಗ್ರಹಿಸಿದ್ದ ಮೀನುಗಳನ್ನು ಆಹಾರವಾಗಿ ಸೇವಿಸುತ್ತಿದ್ದರು. ಅಂತರ್ಜಾಲದ ಬಳಕೆ ಸೀಮಿತವಾಗಿತ್ತು. ಗುಮ್ಮಟದಲ್ಲಿದ್ದವರಿಗೆ ಋತುಮಾನಗಳ  ಬದಲಾವಣೆ ಅನುಭವಕ್ಕೆ ಬಂದಿಲ್ಲ.

ಕೆಂಪುಗ್ರಹಕ್ಕೆ ರೊಬಾಟಿಕ್ ಯಂತ್ರ ಕಳುಹಿಸಲು ಎಂಟು ತಿಂಗಳು ಅಗತ್ಯ. ಅದೇ ಗಗನಯಾನಿಗಳನ್ನು ಕಳುಹಿಸಲು ಒಂದರಿಂದ ಮೂರು ವರ್ಷ ಪ್ರಯಾಣದ ಅವಧಿ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT