ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್‌ನಲ್ಲಿ ಸಿಲುಕಿದ್ದ ನ್ಯಾ. ಭಕ್ತವತ್ಸಲ

ಕಂದಾಯ ಭವನದ ಬಹುಮಹಡಿ ಕಟ್ಟಡದಲ್ಲಿ ಘಟನೆ
Last Updated 29 ಆಗಸ್ಟ್ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿ  (ಕೆಎಟಿ) ಅಧ್ಯಕ್ಷ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಹಾಗೂ ಆಡಳಿತ ಸದಸ್ಯ  ವಿ.ಪಿ.ಬಳಿಗಾರ್ ಅವರು ಕಂದಾಯ ಭವನದ ಲಿಫ್ಟ್‌ನಲ್ಲಿ ಸಿಲುಕಿ ಕೆಲ ಹೊತ್ತು ಆತಂಕ ಎದುರಿಸಿದರು.

ಮೈಸೂರು ಬ್ಯಾಂಕ್‌ ಬಳಿಯ ಕಂದಾಯ ಭವನದಲ್ಲಿ  ಇಬ್ಬರೂ   ಎಂದಿನಿಂತೆ ಬೆಳಿಗ್ಗೆ  10.30ಕ್ಕೆ ಕೋರ್ಟ್‌ಗೆ ಆಗಮಿಸಿದರು. ನೆಲ ಮಹಡಿಯಿಂದ ನಾಲ್ಕನೇ ಮಹಡಿಯಲ್ಲಿರುವ ಕೆಎಟಿ ಕೋರ್ಟ್‌ ಹಾಲ್‌ಗೆ ತೆರಳಲು ಲಿಫ್ಟ್‌ ಪ್ರವೇಶಿಸಿದರು. ಆದರೆ ಲಿಫ್ಟ್‌ ಮೇಲೇರುತ್ತಿದ್ದಂತೆ 2 ಮತ್ತು 3ನೇ ಮಹಡಿಯ ನಡುವೆ ಏಕಾಏಕಿ ಸಿಕ್ಕಿಹಾಕಿಕೊಂಡಿತು.

ಈ ಸಮಯದಲ್ಲಿ ಲಿಫ್ಟ್‌ನಲ್ಲಿ ಭಕ್ತವತ್ಸಲ, ಬಳಿಗಾರ್ ಮತ್ತು ಅವರ ಅಂಗರಕ್ಷಕರು, ಲಿಫ್ಟ್‌ ಚಾಲಕ ಸೇರಿದಂತೆ ಆರೇಳು ಜನರಿದ್ದರು. ಎಲ್ಲರೂ ಏನು ಮಾಡಬೇಕೆಂದು ತೋಚದೆ ಆತಂಕಕ್ಕೆ ಒಳಗಾದರು. ಅಂತಿಮವಾಗಿ ಲಿಫ್ಟ್‌ ಚಾಲಕ ಫೋನ್‌ ಮಾಡಿ ಸಿಬ್ಬಂದಿಗೆ ವಿಷಯ ತಿಳಿಸಿ ಎಲ್ಲರೂ ಸುರಕ್ಷಿತವಾಗಿ ಹೊರಗೆ ಬರಲು ನೆರವಾದರು. 

ಇವತ್ತು ನಿನ್ನೆಯ ಸಮಸ್ಯೆಯಲ್ಲ: ಕಂದಾಯ ಭವನ ಕಟ್ಟಡದಲ್ಲಿ ಒಟ್ಟು ಎಂಟು ಮಹಡಿಗಳಿವೆ. ಬೆಂಗಳೂರು ಉತ್ತರ, ತಹಶೀಲ್ದಾರ್‌  ಕಾರ್ಯಾಲಯ, ಜಿಲ್ಲಾ ಉಪ ನೋಂದಣಿ ಕಚೇರಿಗಳು, ಸರ್ವೇ ಕಚೇರಿಗಳು, ನಾನಾ ಪಿಂಚಣಿ ಯೋಜನೆ ಕಚೇರಿಗಳು,  4, 6 ಮತ್ತು 7ನೇ ಮಹಡಿಗಳಲ್ಲಿ ಕೆಎಟಿ  ಕೋರ್ಟ್ ಹಾಲ್‌, ರಿಜಿಸ್ಟ್ರಾರ್ ಕಚೇರಿಗಳು ಇವೆ.  ಇದೇ ಕಟ್ಟಡದಲ್ಲಿ ಸಿಎಟಿ ಕಚೇರಿಯೂ ಇದ್ದು  ಇನ್ನೂ ಕಾರ್ಯಾರಂಭ ಮಾಡಿಲ್ಲ.

‘ಕೆಎಟಿಯಲ್ಲಿ ಸರಿಸುಮಾರು 29 ಸಾವಿರ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಪ್ರತಿನಿತ್ಯ ಮೂರೂ ಕೋರ್ಟ್‌ ಗಳಲ್ಲಿ 60 ರಿಂದ 70 ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ.

*
ಪಾರ್ಕಿಂಗ್‌ ಸಮಸ್ಯೆ
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನ್ಯಾ.ಭಕ್ತವತ್ಸಲ ಅವರು, ‘1986ರಲ್ಲಿ ಆರಂಭವಾದ ಕೆಎಟಿಗೆ ಈತನಕ ಸ್ವಂತ ಕಟ್ಟಡವಿಲ್ಲ. ಹೈಕೋರ್ಟ್‌ ಕಟ್ಟಡದ ಪಕ್ಕದಲ್ಲೇ ಎಲ್ಲಾದರೂ ಕೆಎಟಿಗೆ ಒಂದು ಸ್ವಂತ ಕಟ್ಟಡ ನೀಡಿ ಎಂದು ಸರ್ಕಾರಕ್ಕೆ ಕೋರಲಾಗಿದೆ. 

ನೆಲಮಾಳಿಗೆಯಲ್ಲಿ ಪಾರ್ಕಿಂಗ್‌ಗೆ ಎಂದು ಮೀಸಲಾದ ಜಾಗದಲ್ಲಿ ಹೋಟೆಲ್‌ ನಡೆಸಲಾಗುತ್ತಿದೆ. ಹೀಗಾಗಿ ಇಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆಯೂ ಇದೆ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

***
ನಾನು ಮೂರನೇ ಬಾರಿಗೆ ಲಿಫ್ಟ್‌ನಲ್ಲಿ  ಸಿಲುಕಿದ್ದೇನೆ. ಕಂದಾಯ ಭವನದಲ್ಲಿ ಎಷ್ಟೊ ಬಾರಿ ವಿದ್ಯುತ್‌ ಇರುವುದೇ ಇಲ್ಲ. ಈ ಬಗ್ಗೆ ಡಿಸಿಗೆ ತಿಳಿಸಿದ್ದರೂ ಅವರ ನಿರ್ಲಕ್ಷ್ಯ ಮುಂದುವರಿದಿದೆ.
-ಕೆ.ಭಕ್ತವತ್ಸಲ, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT