ಬೆಂಗಳೂರು: ‘ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದಲ್ಲಿ ಮಹಿಳೆಯರ ಪಾಲು ಶೇ 17ರಷ್ಟಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಹೇಳಿದರು.

ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ) ಹಾಗೂ ನಗರದ ಕಾನೂನು ಅಧ್ಯಯನ ಸಂಸ್ಥೆಯ (ಬಿಐಎಲ್‌ಎಸ್) ಆಶ್ರಯದಲ್ಲಿ ವಿಜಯಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಉದ್ಯೋಗದ ಸ್ಥಳಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳಿಂದ ಮಹಿಳೆಯರ ಮನೋಸ್ಥೈರ್ಯ ಕುಗ್ಗುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮಹಿಳೆಯರಿಗೆ ಸರಿಯಾದ ಉತ್ತೇಜನ ಸಿಗದೆ ಕೆಲಸ ಬಿಡುವ ಸಾಧ್ಯತೆ ಇರುತ್ತದೆ. ನಿರ್ಭಯವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ರೂಪಿಸಬೇಕು’ ಎಂದರು.

‘ಹೆಣ್ಣು ಜೋರು ಧ್ವನಿಯಲ್ಲಿ ಮಾತನಾಡಿದರೆ ಬಜಾರಿ ಎನ್ನುವ ಪಟ್ಟ ಕಟ್ಟಲಾಗುತ್ತದೆ. ಅದೇ ಗಂಡಸರಿಗೆ ಧೈರ್ಯವಂತರು ಎಂಬ ಬಿರುದು ನೀಡಲಾಗುತ್ತದೆ. ಗಂಡಸರು ಧೈರ್ಯವಂತರು, ಹೆಂಗಸರು ಧೈರ್ಯವಂತರಲ್ಲ ಎನ್ನುವುದಕ್ಕೆ ‘ಗಂಡಸರ ಥರ ಇರು’ ಎಂದು ಹೇಳುತ್ತಾರೆ. ಆದರೆ, ಇದು ಹೆಣ್ಣಿನ ಮನೋಸ್ಥೈರ್ಯವನ್ನು ಕುಗ್ಗುವಂತೆ ಮಾಡುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.