ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ‘ಎ’ ತಂಡಕ್ಕೆ ಪಾಂಡೆ ಆಸರೆ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಪ್ರಮುಖ ಬ್ಯಾಟ್ಸ್‌ ಮನ್‌ಗಳನ್ನು ಬೇಗನೆ ಕಳೆದುಕೊಂಡು ಪರದಾಡಿದ ಭಾರತ ‘ಎ’ ತಂಡಕ್ಕೆ ಕರ್ನಾಟಕದ ಮನೀಷ್‌ ಪಾಂಡೆ ಆಸರೆ ಯಾದರು. ಇದರಿಂದ ಪ್ರವಾಸಿ ತಂಡ ಇಲ್ಲಿ ಆರಂಭವಾದ ನಾಲ್ಕು ದಿನಗಳ ‘ಅನಧಿಕೃತ’ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿದೆ.

ಇಲ್ಲಿನ ಅಲನ್ ಬಾರ್ಡರ್‌ ಫೀಲ್ಡ್‌ನಲ್ಲಿ ನಡೆಯುತ್ತಿರುವ ಪ್ರಥಮ ದರ್ಜೆಯ ಮಾದರಿಯ ಪಂದ್ಯದಲ್ಲಿ ಟಾಸ್‌ ಜಯಿಸಿದ ಭಾರತ ‘ಎ’ ಮೊದಲ ಇನಿಂಗ್ಸ್‌ನಲ್ಲಿ 81.3 ಓವರ್‌ಗಳಲ್ಲಿ 230 ರನ್ ಕಲೆ ಹಾಕಿ ಆಲೌಟ್‌ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಆತಿಥೇಯರು ದಿನದಾಟದ ಅಂತ್ಯಕ್ಕೆ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದ್ದಾರೆ.

ಪ್ರವಾಸಿ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಖಿಲ್‌ ಹೆರ್ವಾಡ್ಕರ್‌ (34) ಮತ್ತು ಫಯಾಜ್ ಫಜಲ್‌ (48) ಮೊದಲ ವಿಕೆಟ್‌ಗೆ 74 ರನ್ ಕಲೆ ಹಾಕಿ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಶ್ರೇಯಸ್‌ ಅಯ್ಯರ್, ನಮನ್‌ ಓಜಾ ಮತ್ತು ಕರ್ನಾಟಕದ ಕರುಣ್ ನಾಯರ್ ಅವರು  ಬೇಗನೆ ವಿಕೆಟ್ ಒಪ್ಪಿಸಿದ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಆಪದ್ಭಾಂಧವಂತೆ ಬಂದಿದ್ದು ಮನೀಷ್‌.

ವೇಗದ ಆಟಕ್ಕೆ ಹೆಸರಾಗಿರುವ ಬಲಗೈ ಬ್ಯಾಟ್ಸ್‌ಮನ್‌ ಮನೀಷ್ 76 ಎಸೆತಗಳನ್ನು ಎದುರಿಸಿ 77 ರನ್ ಗಳಿಸಿದರು. 13 ಬೌಂಡರಿ ಮತ್ತು ಒಂದು ಸಿಕ್ಸರ್‌ ಕೂಡ ಸಿಡಿಸಿದರು. ಇದರಿಂದ ಭಾರತಕ್ಕೆ 200ಕ್ಕಿಂತಲೂ ಹೆಚ್ಚು ರನ್ ಕಲೆ ಹಾಕಲು ಸಾಧ್ಯವಾಯಿತು.

ಭಾರತ ‘ಎ ತಂಡ ಮೊದಲ ಐದು ವಿಕೆಟ್‌ಗಳನ್ನು ಕಳೆದುಕೊಂಡಾಗ 197 ರನ್ ಕಲೆ ಹಾಕಿತ್ತು. ಆದರೆ ಕೊನೆಯ 33 ರನ್ ಗಳಿಸುವಷ್ಟರಲ್ಲಿ ಮತ್ತೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಪ್ರವಾಸಿ ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿ.

ಸಂಕ್ಷಿಪ್ತ ಸ್ಕೋರು: ಭಾರತ ‘ಎ’ ತಂಡ 81.3 ಓವರ್‌ಗಳಲ್ಲಿ 230 (ಅಖಿಲ್‌ ಹೆರ್ವಾಡ್ಕರ್‌ 34, ಫಯಾಜ್‌ ಫಜಲ್ 48, ಶ್ರೇಯಸ್‌ ಅಯ್ಯರ್‌ 19, ಮನೀಷ್‌ ಪಾಂಡೆ 77, ಕರುಣ್‌ ನಾಯರ್‌ 15, ಶಾರ್ದೂಲ್‌ ಠಾಕೂರ್‌ 17; ಚಡ್‌ ಸಯೆರ್ಸ್‌ 41ಕ್ಕೆ2, ಡೇವಿಡ್‌ ಮೂಡಿ 26ಕ್ಕೆ3, ಮೈಕಲ್‌ ಸ್ವೀಪನ್ಸ್‌ 78ಕ್ಕೆ4). ಆಸ್ಟ್ರೇಲಿಯಾ ‘ಎ’ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 25  (ಕ್ಯಾಮರೂನ್‌ ಬೆನ್‌ಕ್ರಾಫ್ಟ್‌ ಬ್ಯಾಟಿಂಗ್ 10, ಜೋಯ್‌ ಬರ್ನ್ಸ್‌ ಬ್ಯಾಟಿಂಗ್ 12).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT