ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಸರಕು ಹುಡುಕಲು ‘ಟ್ರ್ಯಾಕ್‌ ಆರ್‌’

Last Updated 20 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಹಾನಗರಗಳಲ್ಲಿ ಕಾರು ಓಡಿಸುವುದು ಎಷ್ಟರಮಟ್ಟಿಗೆ ಕಷ್ಟವೊ ಅದೇ ರೀತಿ ಪಾರ್ಕಿಂಗ್‌ ಮಾಡುವುದೂ  ದೊಡ್ಡ ಸಾಹಸವೆ. ಬೇಕೆಂದ ಜಾಗದಲ್ಲಿ ಬೇಕೆಂದ ಸಮಯದಲ್ಲಿ ಕಾರು ನಿಲ್ಲಿಸಲು  ಸಾಧ್ಯವಾಗದಷ್ಟು ವಾಹನಗಳ ಸಾಲು ಅಲ್ಲಿರುತ್ತವೆ. ಇನ್ನು ಬಹುತೇಕ ನಗರದಲ್ಲಿ  ಕಾರುಗಳಿಗೆಂದು ಪ್ರತ್ಯೇಕ ಜಾಗವೂ ಇರುವುದಿಲ್ಲ.

ಎಲ್ಲೊ ಒಂದರೆಡು ಮಾಲ್‌ಗಳಲ್ಲಿ ಪಾರ್ಕಿಂಗ್ ಜಾಗ ಸಿಗಬಹುದು. ಆದರೆ ಇಲ್ಲದ ಕಡೆ ಎಲ್ಲಿ ನಿಲ್ಲಿಸುವುದು. ಅಂತಹ ಸಂದರ್ಭದಲ್ಲಿ ರಸ್ತೆಯ ಮೇಲೊ ಇಲ್ಲವೇ ಎಲ್ಲಿ ಜಾಗ ಸಿಗುತ್ತದೊ ಅಲ್ಲಿ ನಿಲುಗಡೆ ಮಾಡುವುದು ಅನಿವಾರ್ಯ. ಹೀಗೆ ಸುರಕ್ಷತೆ ಇಲ್ಲದ ಕಡೆ ಕಾರು ನಿಲುಗಡೆ ಮಾಡಿದರೆ ಕಾಡುವ ಮೊದಲ ಭಯ ಕಳವಿನದ್ದು. ಕೆಲವು ಮಾಲ್‌, ಹೋಟೆಲ್‌, ಶಾಪಿಂಗ್ ಕಾಂಪ್ಲೆಕ್ಸ್‌, ರೆಸ್ಟೋರೆಂಟ್‌, ಸಿನಿಮಾ ಥಿಯೇಟರ್‌ಗಳಲ್ಲಿ ಕಾರುಗಳ ಕೀ ನೀಡಿದರೆ ಅವರೇ ನಿಲುಗಡೆ ಮಾಡಿ ಕೀ ಅನ್ನು ನಿಗದಿತ ಜಾಗದಲ್ಲಿ  ಇಟ್ಟಿರುತ್ತಾರೆ. ಆದರೆ ವಾಪಸ್‌ ಬಂದಾಗ ನಿಮ್ಮ ಕಾರು ಎಲ್ಲಿದೆ ಎಂದು ತಿಳಿಯುವುದು ಕಷ್ಟದ ಕೆಲಸ.

ಹೀಗೆ ನಿಲ್ಲಿಸಿದ ಕಾರು ಎಲ್ಲಿದೆ ಎಂದು ಕಂಡು ಹಿಡಿಯಲು, ಕಳ್ಳರ ಪಾಲಾದ ಕಾರು ಎಲ್ಲಿದೆ ಎಂದು ತಿಳಿಯಲು ಹೊಸ ಉಪಕರಣವೊಂದು ಬಳಕೆಗೆ ಬಂದಿದೆ. ಅದರ ಹೆಸರೇ ‘ಟ್ರ್ಯಾಕಿಂಗ್‌ ಆರ್‌’. ಇದನ್ನು ಅಳವಡಿಸಿಕೊಂಡರೆ  ನಿರಾತಂಕ ವಾಗಿ ಸಿನಿಮಾ ನೋಡಬಹುದು, ಶಾಪಿಂಗ್ ಮಾಡಬಹುದು.

ಕ್ಯಾಲಿಫೋರ್ನಿಯಾ ಮೂಲದ ಸ್ಟಾರ್ಟ್‌ಅಪ್‌ ಕಂಡುಹಿಡಿದಿರುವ  ಸಣ್ಣ  ಉಪಕರಣ  ಇದಾಗಿದ್ದು,  ಸ್ಮಾರ್ಟ್‌ಫೋನ್‌ ಮೂಲಕ ಕಾರ್ಯನಿರ್ವಹಿಸುತ್ತದೆ.  ಇದಕ್ಕೆ  ಪ್ಲೇಸ್ಟೋರ್‌ನಲ್ಲಿ TrackR ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.   ಟ್ರ್ಯಾಕರ್‌ ಡಿವೈಸ್‌ ಖರೀದಿಸಿ ಅದಕ್ಕೆ ಈ ಅಪ್ಲಿಕೇಷನ್ ಸಂಪರ್ಕಿಸಬೇಕು.  

ಟ್ರ್ಯಾಕ್ ಆರ್ ಅಪ್ಲಿಕೇಶನ್ ತೆರೆದು  ಸ್ಕ್ರೀನ್‌ನಲ್ಲಿ ‘ಫೈಂಡ್ ಡಿವೈಸ್’ ಬಟನ್ ಟ್ಯಾಪ್ ಮಾಡಿದರೆ  ಕಾರು ಇರುವ ಸ್ಥಳ ತೋರಿಸುತ್ತದೆ.  ಟ್ರ್ಯಾಕರ್‌ ಡಿವೈಸ್‌ ಮತ್ತು ಆ್ಯಪ್‌ ಮಧ್ಯೆ ಸಂಪರ್ಕ ಇರುವುದರಿಂದ ಕಳೆದು ಹೋದ ಸರಕನ್ನು ಸುಲಭವಾಗಿ ಶೋಧಿಸಬಹುದು. ಪ್ಲೇಸ್ಟೋರ್‌ನಲ್ಲಿ ಟ್ರ್ಯಾಕ್‌ ಆರ್‌ ಬಳಕೆ  ಬಗ್ಗೆ  ಒಂದು 1 ನಿಮಿಷ 58 ಸೆಕೆಂಡ್‌ನ ವಿಡಿಯೊ ಸಹ ಲಭ್ಯವಿದೆ.

ಕೇವಲ ಕಾರ್‌ಗಳಿಗಷ್ಟೇ ಅಲ್ಲ:  ಟ್ರ್ಯಾಕ್‌ ಆರ್‌ ಉಪಕರಣವನ್ನು ಕೇವಲ ಕಾರ್‌ಗಳಿಗಲ್ಲದೆ ಬ್ರೀಫ್‌ಕೇಸ್, ಕೀ, ದುಬಾರಿ ಗ್ಯಾಜೆಟ್‌ಗಳು, ವಾಲೆಟ್ ಹೀಗೆ ಯಾವುದಕ್ಕೆ ಬೇಕಾದರೂ  ಜೋಡಿಸಿಕೊಂಡು ನಿಶ್ಚಿಂತರಾಗಿ ಇರಬಹುದು. 

ಜಿಪಿಎಸ್‌ಗಿಂತ ಕಡಿಮೆ ವೆಚ್ಚ: ಜಿಪಿಎಸ್ ಅಳವಡಿಸಿಕೊಂಡು ಕೂಡ ಕಾರುಗಳನ್ನು ಹುಡುಕಬಹುದು. ಇದರಲ್ಲಿ ಹಲವಾರು ವಿಧಗಳಿವೆ. ಆದರೆ ಕೆಲವು ರೀತಿಗಳಲ್ಲಿ ಪ್ರತಿ ತಿಂಗಳು ಹಣ ಪಾವತಿ ಮಾಡುತ್ತಿರಬೇಕು. ಆದರೆ ಟ್ರ್ಯಾಕ್‌ ಆರ್‌ ಇದಕ್ಕಿಂತ ಕಡಿಮೆ ವೆಚ್ಚದ್ದು. ಟ್ರ್ಯಾಕ್‌ ಆರ್‌ ಉಪಕರಣ ಆನ್‌ಲೈನ್‌ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ವಿವಿಧ ದರದಲ್ಲಿ ಇದು ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT