ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಂಖೆ -2’ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬಿ–ಟೌನ್‌ನ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅಭಿನಯಿಸುತ್ತಿರುವ ‘ಆಂಖೆ 2’ ಚಿತ್ರವನ್ನು ಅನೀಸ್‌ ಬಾಜ್ಮಿ ನಿರ್ದೇಶಿಸಲಿದ್ದಾರೆ. 2002ರಲ್ಲಿ ತೆರೆಕಂಡಿದ್ದ ‘ಆಂಖೆ’ ಚಿತ್ರದ ಸೀಕ್ವಲ್‌ ಇದು.

‘73 ವರ್ಷವಾದರೂ ಅಮಿತಾಬ್ ಅವರಲ್ಲಿರುವ ವೃತ್ತಿಪರತೆಯಿಂದ ಪ್ರಭಾವಿತನಾಗಿದ್ದೇನೆ. ದಶಕಗಳ ಹಿಂದೆ ಅವರಲ್ಲಿದ್ದ ಇದ್ದ ಉತ್ಸಾಹ ಈಗ ಇನ್ನೂ ಹೆಚ್ಚಾಗಿದೆ. ಅಮಿತಾಬ್‌ ಅವರೊಂದಿಗೆ ಇದು ನನ್ನ ಮೊದಲ ಚಿತ್ರ. ನಾನು ಸಾಕಷ್ಟು ಕಥೆಗಳನ್ನು ಬರೆದಿದ್ದೇನೆ. ಆದರೆ ಅವರಿಗಾಗಿ ಸಿನಿಮಾ ಬರೆಯುವ ಅವಕಾಶ ದೊರೆತಿರಲಿಲ್ಲ.’ ಎಂದು ಐಎಎನ್‌ಎಸ್‌ ಸುದ್ದಿ ಸಂಸ್ಥೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಬಾಜ್ಮಿ.

‘ಅದೃಷ್ಟದಿಂದ ನನಗೆ ಈ ಅವಕಾಶ ದೊರೆತಿದೆ. ನಾನು ಬರಹಗಾರನಾಗಿದ್ದರೂ ಅವರನ್ನು ಹೊಗಳಲು ನನಗೆ ಪದಗಳೇ ಸಿಗುತ್ತಿಲ್ಲ. ಜಯಪ್ರಿಯ ವ್ಯಕ್ತಿಯಾಗಿದ್ದರೂ ತುಂಬಾ ಸಾಮಾನ್ಯರಂತೆ ನಡೆದುಕೊಳ್ಳುತ್ತಾರೆ. ಅವರನ್ನು ಭೇಟಿ ಮಾಡಿದಾಗ ತುಂಬಾ ವಿನಮ್ರವಾಗಿ ನಡೆದುಕೊಂಡರು’ ಎಂದು ಅಮಿತಾಬ್ ಅವರನ್ನು ಕೊಂಡಾಡಿದ್ದಾರೆ ಬಾಜ್ಮಿ.

‘‘ಆಂಖೆ 2’ ಚಿತ್ರ ಮುಂದಿನ ವರ್ಷದ ದೀಪಾವಳಿ ವೇಳೆಗೆ ತೆರೆಕಾಣಲಿದ್ದು, ಭಾಗವೊಂದರಲ್ಲಿ ಕೊನೆಗೊಂಡಿಗಿನಿಂದಲೇ ಚಿತ್ರದ ಎರಡನೇ ಭಾಗ ಪ್ರಾರಂಭವಾಗಲಿದೆ. ‘ಆಂಖೆ’ ಚಿತ್ರ ಬ್ಯಾಂಕ್‌ ದರೋಡೆ ಮಾಡುವ ಕಥೆಯ ಸುತ್ತಲೇ ನಡೆಯುತ್ತದೆ. ಆ ಚಿತ್ರದ ಕೊನೆಯಲ್ಲಿ ಅಮಿತಾಬ್‌ ಜೈಲು ಸೇರುತ್ತಾರೆ. ಅಲ್ಲಿಂದಲೇ ‘ಆಂಖೆ 2’ ಚಿತ್ರ ಆಂಭವಾಗಲಿದೆ.

ಈ ಚಿತ್ರದಲ್ಲೂ ಅಮಿತಾಬ್ ಅವರ ಹೆಸರನ್ನು ಭಾಗ ಒಂದರಲ್ಲಿರುವಂತೆ ವಿಜಯ್‌ ಸಿಂಗ್‌ ರಾಜ್‌ಪೂತ್‌ ಎಂದೇ ಮುಂದುವರಸಲಾಗುವುದು. ಇದರಲ್ಲೂ ದೊಡ್ಡ ತಾರಾ ಬಳಗವೇ ಇದೆ. ಎಲ್ಲರ ಪಾತ್ರಗಳಿಗೂ ಅದರದ್ದೇ ಆದ ಅಮಹತ್ವವಿದೆ’ ಎಂದು ಚಿತ್ರದ ಕುರಿತು ವಿವರಿಸಿದ್ದಾರೆ ನಿರ್ದೇಶಕ ಬಾಜ್ಮಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT