ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಮುಖ್ಯ ಸುತ್ತಿಗೆ ಕಶ್ಯಪ್‌

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಸೋಲ್‌, ದಕ್ಷಿಣ ಕೊರಿಯಾ:  ಶ್ರೇಷ್ಠ ಆಟ ಆಡಿದ ಭಾರತದ ಪರುಪಳ್ಳಿ ಕಶ್ಯಪ್‌ ಅವರು ಮಂಗಳವಾರ ಇಲ್ಲಿ ಆರಂಭವಾದ ಕೊರಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ ಯಲ್ಲಿ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ.

ಸಿಯೊಂಗ್‌ ನಾಮ್‌ ಒಳಾಂಗಣ ಕ್ರೀಡಾಂಗಣದ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಕಶ್ಯಪ್‌ 15–21, 23–21, 21–19ರಲ್ಲಿ ದಕ್ಷಿಣ ಕೊರಿಯಾದ ಕೊ ಗ್ಯೂಂಗ್‌ ಬೊ ಅವರನ್ನು ಪರಾಭವಗೊಳಿಸಿದರು.

ಕಶ್ಯಪ್‌ ಉತ್ತಮ ಆರಂಭ ಪಡೆಯಲು ವಿಫಲರಾದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಕಣಕ್ಕಿಳಿದಿರುವ ಭಾರತದ ಆಟಗಾರನಿಗೆ ಮೊದಲ ಗೇಮ್‌ನಲ್ಲಿ ಎದುರಾಳಿಯ ಸವಾಲು ಮೀರಿ ನಿಲ್ಲಲು ಆಗಲಿಲ್ಲ.

ಇದರಿಂದ ಕಶ್ಯಪ್‌ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ಅವರು ಲಯ ಕಂಡುಕೊಂಡರು. ಆಕರ್ಷಕ ಸರ್ವ್‌ ಹಾಗೂ ಚುರುಕಿನ ಡ್ರಾಪ್‌ಗಳ ಮೂಲಕ ದಕ್ಷಿಣ ಕೊರಿಯಾದ ಆಟಗಾರನನ್ನು ಕಂಗೆಡಿಸಿದ ಅವರು ಗೇಮ್‌ ಗೆದ್ದು 1–1ರಲ್ಲಿ ಸಮಬಲ ಮಾಡಿಕೊಂಡರು.

ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಗೇಮ್‌ ಕುತೂಹಲ ಕೆರಳಿ ಸಿತ್ತು. ಈ  ಗೇಮ್‌ನಲ್ಲಿ ಕಶ್ಯಪ್‌ ಚುರುಕಾಗಿ ಆಡಿ ಪಂದ್ಯ ಗೆದ್ದುಕೊಂಡರು. ಕಶ್ಯಪ್‌ ಬುಧವಾರ ನಡೆಯುವ ಮುಖ್ಯ ಸುತ್ತಿನ ಪಂದ್ಯದಲ್ಲಿ ಚೀನಾದ   ತಿಯಾನ್‌ ಹೌವೀ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT