ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀನ್‌ ಎಂಜಿನಿಯರೋ, ದನ ಕಾಯೋನಾ’

ಇಇ ಜಾಧವ್‌– ಕಿರಿಯ ಎಂಜಿನಿಯರ್‌ ರಘುಕುಮಾರ್‌ ನಡುವೆ ನಡೆದ ಮೊಬೈಲ್‌ ಸಂಭಾಷಣೆ
Last Updated 28 ಸೆಪ್ಟೆಂಬರ್ 2016, 9:12 IST
ಅಕ್ಷರ ಗಾತ್ರ

ಮಡಿಕೇರಿ:  ‘ಸರಿಯಾಗಿ ಹೇಳ್ತೀಯಾ... ಜಾಡಿಸಿ ಒದಿಲಾ ನಿನಗೆ... ಸಹಿ ಆಗಿಲ್ಲ ಅಂಥ ಸುಳ್ಳು ಹೇಳಿದ್ದೀಯಾ... ನೀನ್‌ ಎಂಜಿನಿಯರೋ, ದನ ಕಾಯೋನಾ, ಬೋ... ಮಗನೆ...’

ಇದು ಕೊಡಗು ಜಿಲ್ಲೆಯ ಲೋಕೋಪಯೋಗಿ ಇಲಾಖೆ (ಎಂಜಿನಿಯರ್‌ ವಿಭಾಗ) ಕಾರ್ಯಪಾಲಕ ಎಂಜಿನಿಯರ್‌ ಜೆ.ಜಿ.ಜಾಧವ್‌ ಅವರು ಸೋಮವಾರಪೇಟೆ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಎಚ್‌.ಆರ್‌.ರಘುಕುಮಾರ್‌ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾದ ಮೊಬೈಲ್‌ ಸಂಭಾಷಣೆಯ ವಿವರ.

ಇಲಾಖೆ ಕೆಲಸ ನಿಮಿತ್ತ ಬೆಂಗಳೂರಿನ ಪ್ರವಾಸೋದ್ಯಮ ಹಾಗೂ ನಬಾರ್ಡ್‌ ಕಚೇರಿಗೆ ರಘುಕುಮಾರ್‌ ತೆರಳಿದ್ದ ವೇಳೆ ಇಇ ಜಾಧವ್‌ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಜಿಲ್ಲಾ ಎಂಜಿನಿಯರ್‌ ಸಂಘ ಪದಾಧಿಕಾರಿಗಳು ಶಾಸಕ ಅಪ್ಪಚ್ಚು ರಂಜನ್‌ ಅವರಿಗೆ ಮಂಗಳವಾರ ಲಿಖಿತ ದೂರು ಸಲ್ಲಿಸಿದ್ದಾರೆ. 7 ನಿಮಿಷ 42 ಸೆಕೆಂಡ್‌ಗಳ ಕಾಲ ನಡೆದ ಸಂಭಾಷಣೆಯನ್ನು ರಘುಕುಮಾರ್‌ ರೆಕಾರ್ಡ್‌ ಮಾಡಿಕೊಂಡಿದ್ದು ಅದರ ವಿವರ ಕೆಳಗಿನಂತಿದೆ.

ರಘುಕುಮಾರ್‌: ಸರ್‌...
ಜಾಧವ್‌: ‘ಎಲ್ಲಿದ್ದೀರಾ.. ಏನಾಯ್ತು ಅದು... ರಿಪೋರ್ಟ್‌್ ಆಯ್ತಾ’

ರಘು: ‘ಸರ್‌, ಲೆಟರ್‌ ಕೊಟ್ಟು ನಬಾರ್ಡ್‌ ಹತ್ರ ಬರ್ತಾ ಇದ್ದೀನಿ, ಪುರುಷೋತ್ತಮ ಅವರಿಂದ ಚಂದ್ರಶೇಖರಯ್ಯಗೆ ಫೋನ್‌ ಮಾಡಿಸಿದ್ದೇನೆ, ಅವರೂ ಮಾತನಾಡಿದ್ದಾರೆ. ಆಕ್ಷೇಪಣೆಗಳಿದ್ದರೆ ರೈಟಿಂಗ್‌ನಲ್ಲಿ ಕೊಡಿ... ಸ್ಪಿಲ್ಟ್‌ ಮಾಡಿದ್ರೆ ಸೈಟ್‌ಗೂ ಪ್ರಾಬ್ಲಂ ಆಗುತ್ತೆ ಅಂತಹ ಹೇಳಿದ್ದಾರೆ ಸಾಹೇಬ್ರು. ನಿನ್ನೆಯೇ ಕನ್ಸಲ್ಟ್‌ ಮಾಡಿದ್ದೇನೆ’
ಜಾಧವ್‌: ‘ಸರಿಯಾಗಿ ಹೇಳ್ತೀಯಾ ಜಾಡ್ಸಿ ಒದಿಲಾ ನಿನಗೆ. ಏನ್‌ ತಿಳ್ಕೋಂಡಿದ್ದೀಯಾ ನಾನ್‌ಸೆನ್ಸ್‌. ಸಹಿ ಆಗಿಲ್ಲ ಅಂಥ ಸುಳ್ಳು ಹೇಳಿದ್ದೀಯಾ, ಅವರು ಫೋನ್‌ ಮಾಡಿದ್ದರು.

ಬೊ... ನೀನ್‌ ಎಂಜಿನಿಯರೋ ದನ ಕಾಯೋನಾ’
ರಘು: ‘ಸರ್‌, ಸರ್‌ ಒಂದ್‌ ನಿಮಿಷ. ಸರಿಯಾಗಿ ಮಾತಾಡಿ, ಬೋ... ಅಂತ ಬೈಬೇಡಿ’

ಜಾಧವ್‌: ‘ಬೈಯ್ತಾ ಇರೋದ್‌ ಏನ್‌ ನನ್ನ ಸ್ವಾರ್ಥಕ್ಕಾ, ನೀನ್‌ ಮಾಡೋ ಕೆಲಸಕ್ಕೆ ಒದೀಬೇಕು’
ರಘು: ‘ನಾನೊಬ್ಬ ರೆಸ್ಪಾನ್ಸಿಬಲ್‌ ಸಿಟಿಜನ್‌, ಆ ರೀತಿ ಬೈಬೇಡಿ, ನನಗೂ ಟಾಪ್‌ ಲೆವೆಲ್‌ನಲ್ಲಿ ಎಲ್ಲರೂ ಗೊತ್ತಿದ್ದಾರೆ. ನಮ್ಮ ತಂದೆ–ತಾಯಿಯೇ ಆ ರೀತಿ ಬೈಯೋದಿಲ್ಲ’

ಜಾಧವ್‌: ‘ಉದ್ದೇಶ ಪೂರ್ವಕವಾಗಿ ಬೈಯ್ದಿಲ್ಲ, ಕೆಲಸ ಮಾಡ್ದೆ ಹೋದ್ರೆ ಮತ್ತೇನ್‌ ಮಾಡೋದ್‌. ಮಿಸ್‌ಗೈಡ್‌ ಮಾಡ್ತೀಯಾ. ಕಾರ್ಯದರ್ಶಿ ಬಾಯ್ಗೆ ಬಂದಂತೆ ಬೈಯ್ತಾ ಇದ್ದಾರೆ, ನನ್ನ ಟೆಸ್ಟ್‌ ಮಾಡೋದ್‌ ಬೇಡ’
ರಘು: ‘ಒಳ್ಳೆಯ ಮಾತಿನಿಂದ ಹೇಳಿ ಸರ್‌’

ಜಾಧವ್‌: ‘ತಿಂಗಳಿಂದ ಹೇಳಿದ್ದೀನಿ, ಆ ಕೆಲಸ ಮಾಡಿದ್ದೀಯಾ’
ರಘು: ‘ಕೆಲಸ ಮಾಡ್ತಾನೆ ಇದ್ದೀವಿ ಸರ್‌, ಇಲ್ಲ ಅಂಥ ಹೇಳಿ ನೋಡೋಣ. ನನ್ನ ರಿಲೀವ್‌ ಮಾಡಿ ಕೊಡಿ, ಹೋಗ್ತೀನಿ’

ಜಾಧವ್‌: ‘ರಿಲೀವ್‌ ಮಾಡೋಲ್ಲ, ಸುಮ್ಮನೆ ಬಿಡೋಲ್ಲ. ನಿನಗೆ ಗತಿ ಕಾಣಿಸ್ತೀನಿ. ಕಳ್ಳರ ರೀತಿ ಬರೋದು, ಹೋಗೋದಾ’
ರಘು: ‘ಕಳ್ಳರ ರೀತಿ ಯಾವ ಕೆಲ್ಸ ಮಾಡಿದ್ದೀನಿ ಹೇಳಿ ಸರ್‌’

ಜಾಧವ್‌: ‘ದನ ಕಾಯೋರ್‌ ಇಲಾಖೆಗೆ ಸೇರಿ ಇಲಾಖೆಯನ್ನೇ ಹಾಳ್‌ ಮಾಡ್ತಾ ಇದ್ದೀರಾ’
ರಘು: ‘ನೀವ್‌ ಮಾತನಾಡಿರೋದ್‌ ರೆಕಾರ್ಡ್‌ ಆಗಿದೆ. ಮಿನಿಸ್ಟ್ರಿಗೆ ಕೊಡ್ತೀನಿ’

ಜಾಧವ್‌: ‘ನಾಳೆ ಪೇಪರ್‌ಗೂ ಕೊಡು, ನಾನೇನು ಇದನ್ನೆಲ್ಲಾ ಪರ್ಸನಲ್‌ ಆಗಿ ಹೇಳಿಲ್ಲ’
ರಘು: ‘ಇಷ್ಟೊಂದು ಹೆದರಿಸೋದು ಬೇಡ. ನನ್ನ ಕೈಯಲ್ಲಿ ಎಷ್ಟು ಆಗುತ್ತೊ ಅಷ್ಟು ಮಾತ್ರ ಕೆಲಸ ಮಾಡಲು ಸಾಧ್ಯ’
ಜಾಧವ್‌: ‘ನಬಾರ್ಡ್‌ ಆಫೀಸ್‌ಗೆ ಹೋಗಿ ಫೋನ್‌ ಮಾಡು, ಆ ಮೇಲೆ ಮಾತನಾ ಡೋಣ’... ಎನ್ನುವುದರೊಂದಿಗೆ ಸಂಭಾಷಣೆ ಮುಕ್ತಾಯಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT