, ಇನ್‍ಸ್ಟಾಗ್ರಾಂ ಜಾಹೀರಾತಿನಲ್ಲಿ ಮೊಳಗಿದ 'ಕನ್ನಡ ಡಿಂಡಿಮ' | ಪ್ರಜಾವಾಣಿ
ಫ್ರಾನ್ಸ್ ನಲ್ಲಿ ಕನ್ನಡ

ಇನ್‍ಸ್ಟಾಗ್ರಾಂ ಜಾಹೀರಾತಿನಲ್ಲಿ ಮೊಳಗಿದ 'ಕನ್ನಡ ಡಿಂಡಿಮ'

ರಾಕಿ ರೋಕ್ (Rocky Rock) ಎಂಬ ಬ್ಯಾಂಡ್ ಕುವೆಂಪು ರಚಿಸಿದ 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ಮೂರು ವರ್ಷಗಳ ಹಿಂದೆ ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಿ ಗಮನ ಸೆಳೆದಿತ್ತು.

ಬೆಂಗಳೂರು: 'ಬಾರಿಸು ಕನ್ನಡ ಡಿಂಡಿಮವ' ಹಾಡು ಕೇಳುವಾಗ ಮೈ ನವಿರೇಳದೇ ಇರುವ ಕನ್ನಡಿಗರು ಇರಲಾರರು. ಅದೂ ವಿದೇಶಿ ನೆಲದಲ್ಲಿ ಕನ್ನಡದ ಪದಗಳನ್ನು ಕೇಳಿದರೆ ಖುಷಿ ಒಂದು ಪಟ್ಟು ಜಾಸ್ತಿಯೇ ಆಗುತ್ತದೆ. ವಿಷಯ ಏನೆಂದರೆ ಇದೀಗ ಫ್ರಾನ್ಸ್ ನಲ್ಲಿ ಇನ್‍ಸ್ಟಾಗ್ರಾಂ ಟಿವಿ ಜಾಹೀರಾತಿನಲ್ಲಿ 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ಬಳಸಲಾಗಿದೆ.

ರಾಕಿ ರೋಕ್ (Rocky Rock) ಎಂಬ ಬ್ಯಾಂಡ್ ಕುವೆಂಪು ರಚಿಸಿದ 'ಬಾರಿಸು ಕನ್ನಡ ಡಿಂಡಿಮವ' ಹಾಡನ್ನು ಮೂರು ವರ್ಷಗಳ ಹಿಂದೆ ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಿ ಗಮನ ಸೆಳೆದಿತ್ತು. ಇದಾದನಂತರ ಫ್ರಾನ್ಸ್ ನಲ್ಲೀಗ ಇನ್‍ಸ್ಟಾಗ್ರಾಂ ಟಿವಿ ಜಾಹೀರಾತಿಗಾಗಿ 'ರಾಕಿ ರಾಕ್' ಸಂಯೋಜನೆ ಮಾಡಿದ ಆ ಕನ್ನಡ ಹಾಡನ್ನು ಬಳಸಲಾಗಿದೆ.

ಸೆ.22ಕ್ಕೆ ಈ ಜಾಹೀರಾತಿನ ವಿಡಿಯೊ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿದ್ದು, ಇನ್‍ಸ್ಟಾಗ್ರಾಂನ ಈ ಹೊಸ ಜಾಹೀರಾತು ನೆಟಿಜನ್‍ಗಳ ಪ್ರಶಂಸೆಗೆ ಪಾತ್ರವಾಗಿದೆ.

Comments