ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಕನಸಿನ ಕುಡಿಯಾಗಿ

ನಿನ್ನಂಥ ಅಪ್ಪ ಇಲ್ಲ
Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನಾನು ತೊಟ್ಟಿಲಲ್ಲಿ ಮಲಗಿದ್ದಾಗಲೂ ಸಂಗೀತವನ್ನು ಆಲಿಸಬೇಕು ಎಂಬ ಕಾರಣಕ್ಕೆ ಟೇಪ್‌-ರೆಕಾರ್ಡರ್‌ನಲ್ಲಿ ಮೆಲುದನಿಯಲ್ಲಿ ಯಾವುದಾದರೊಂದು ಒಳ್ಳೆಯ ಹಾಡನ್ನು ಹಾಕಿ ಅಪ್ಪ ಕಚೇರಿಗೆ ಹೋಗುತ್ತಿದ್ದರು ಎಂದು ಅಮ್ಮ ಹೇಳುತ್ತಾರೆ. ನನ್ನ ಸುಪ್ತಮನಸ್ಸಿನಲ್ಲಿಯೂ ಸಂಗೀತವನ್ನು ಆವರಿಸಿಕೊಳ್ಳಬೇಕು ಎಂಬುದು ಅವರ ಹಂಬಲವಾಗಿತ್ತು.

ತಂದೆಯೇ ನನ್ನ ಮೊದಲ ಗುರು. ಸರಿಗಮಪದ ಜ್ಞಾನವನ್ನು ನನ್ನಲ್ಲಿ ತುಂಬಿದವರು ಅವರೇ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತಗಾರರು ಆಗಿರುವುದರಿಂದ ಸಹಜವಾಗಿಯೇ ನನ್ನಲ್ಲೂ ಆ ಕಲೆ ಬಂದಿರಬಹುದು. ಆದರೆ ಸಂಗೀತವೇ ನನ್ನ ಉಸಿರಾಗಬೇಕು ಎಂಬುದು ಅಪ್ಪನ ನಿರೀಕ್ಷೆಯಾಗಿತ್ತು.

ನನ್ನ ತಂದೆ ಶ್ರೀನಿವಾಸ ಉಡುಪ. ಸಂಗೀತವನ್ನೇ ಉಸಿರಾಗಿಸಿಕೊಂಡವರು. ನನ್ನಲ್ಲೂ ಸಂಗೀತದ ಘಮ ಹರಡಲು ಕಾರಣವಾದವರು. ಅಪ್ಪ ನನ್ನ ಬಾಲ್ಯವನ್ನು ಸಮೃದ್ಧಿಗೊಳಿಸಿದ್ದರು. ಸಾಮಾನ್ಯವಾಗಿ ಈಗಿನ ಮಕ್ಕಳಿಗೆ ಅಂತಹ ಬಾಲ್ಯ ಸಿಕ್ಕಿರಲಿಕ್ಕಿಲ್ಲ.

ಶಿವಮೊಗ್ಗ ಜಿಲ್ಲೆಯ ನಗರ ನನ್ನೂರು. ಎಷ್ಟೊಂದು ಸುಂದರವಾದ ಸ್ಥಳವೆಂದರೆ, ಇಂದಿಗೂ ಮಳೆಗಾಲದ ಸೇಚನವನ್ನು  ಸವಿಯಲು ಊರಿಗೆ ಹೋಗುತ್ತೇವೆ. ಮಲೆನಾಡಿನ ಪ್ರಕೃತಿ ಸೊಬಗು, ಮನೆ ಹಿಂದೆ ತೋಟ, ಸುತ್ತಲೂ ಬೆಟ್ಟಗುಡ್ಡ ಜೊತೆಗೆ ಬ್ಯಾಕ್‌–ವಾಟರ್‌ ಇಷ್ಟೆಲ್ಲ ಸುಂದರ ಪರಿಸರದ ಜೊತೆಗೆ ನನ್ನ ಬಾಲ್ಯದ ಸುಂದರ ಘಳಿಗೆಗಳು ಕಳೆದವು.

ನಾವು ಇಬ್ಬರು ಮಕ್ಕಳು. ನನಗೂ ತಮ್ಮನಿಗೂ ಎಂಟು ವರ್ಷಗಳ ವ್ಯತ್ಯಾಸ. ಅಪ್ಪನಿಗೆ ನಾನೆಂದರೆ ವಿಪರೀತ ಪ್ರೀತಿ. ನಾನು ಹಾಡುಗಾರ್ತಿಯಾಗಬೇಕೆಂಬುದು ಅವರ ಆಸೆ.ಅವರ ಕನಸಿನಲ್ಲಿಯೇ ನಾನು ಬದುಕುತ್ತಿದ್ದೇನೆ. ನನ್ನ ಕನಸನ್ನು ನನಸು ಮಾಡಿದ್ದೀಯ ಎಂದು ಅಪ್ಪ ಅಗಾಗ ಹೇಳುತ್ತಿರುತ್ತಾರೆ. ಅದನ್ನು ಕೇಳಿದಾಗ ನನಗೆ ಬದುಕು ಸಾರ್ಥಕ ಅನಿಸುತ್ತದೆ.

ಅಪ್ಪ ಹಳ್ಳಿಯವರಾದರೂ, ಆಧುನಿಕತೆಗೆ ತಕ್ಕಂತೆ ಜೀವಿಸಿದವರು. ಮಂಡಿವಂತಿಕೆಯಿಂದ ಎಂದಿಗೂ ದೂರವೇ ಇದ್ದರು. ನಮಗೂ ಸ್ವತಂತ್ರವಾಗಿ ಜೀವಿಸಲು ಅವಕಾಶ ಕೊಟ್ಟರು. ತಪ್ಪು ಮಾಡಲು ಅವಕಾಶವನ್ನೇ ನೀಡಲಿಲ್ಲ.

ತಾತ ತುಂಬಾ ಚೆನ್ನಾಗಿ ಹಾಡುತ್ತಿದ್ದರು. ಅವರ ಹೆಸರು ಸೀತಾರಾಮ ಉಡುಪ. ನನ್ನಪ್ಪನಿಗೆ ಒಬ್ಬ ಸಹೋದರಿ ಮತ್ತು ಒಬ್ಬ ಸಹೋದರ; ಒಟ್ಟು ಮೂರು ಮಕ್ಕಳು ಅವರು.ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಅಮ್ಮನ ಜೊತೆ ಹೆಚ್ಚು ಆಪ್ತತೆ ಇರುತ್ತದೆ ಎನ್ನುತ್ತಾರೆ. ಆದರೆ ನಾನು ಅಪ್ಪನನ್ನು ಹಚ್ಚಿಕೊಂಡಿದ್ದೇ ಹೆಚ್ಚು. ನಮ್ಮದು ತುಂಬ ದೊಡ್ಡ ಮನೆ. ಮನೆಯಲ್ಲಿ ಹದಿನೈದರಿಂದ ಇಪ್ಪತ್ತು ಹಸುಗಳಿತ್ತು. ಜೊತೆಗೆ ಮನೆಗೆ ಬರುವ ನಂಟರ ಸಂಖ್ಯೆಯೂ ಅಧಿಕ. ಅಮ್ಮನಿಗೆ ವಿಪರೀತ ಕೆಲಸ.

ನನಗೆ ತುಂಬಾ ಹೊತ್ತು ಕೂತು ಓದುವುದೆಂದರೆ ಆಗುತ್ತಿರಲಿಲ್ಲ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಓದಿದ್ದೆ. ಪ್ರೌಢಶಿಕ್ಷಣಕ್ಕೆಂದು ಇಂಗ್ಲಿಷ್‌ ಮಾಧ್ಯಮ ಸೇರಿದಾಗ ಓದುವುದು ಕಷ್ಟವಾಯಿತು. 

ಮೊದಲೆಲ್ಲ ಮೊದಲ ರ‍್ಯಾಂಕ್‌ನ್ನು ಯಾರಿಗೂ ಬಿಟ್ಟುಕೊಟ್ಟವಳಲ್ಲ ನಾನು. ಆದರೆ ಹೈಸ್ಕೂಲ್‌ನಲ್ಲಿ ಟೆಸ್ಟ್‌ನಲ್ಲಿ ಒಂದೆರಡು ಸಲ ಅನುತ್ತೀರ್ಣಳಾಗಿದ್ದೂ ಇದೆ. ಆದರೆ ಯಾವ ಸಮಯದಲ್ಲಿಯೂ ಅಪ್ಪ ನನಗೆ ಬೈದಿರಲಿಲ್ಲ. ಅಪ್ಪ ಓದುವ ವಿಷಯದಲ್ಲಿ ಎಂದಿಗೂ ಒತ್ತಡ ಹೇರಲಿಲ್ಲ. ಸಂಗೀತತರಗತಿಗೆ ಹೋಗದಿದ್ದರೆ ಮಾತ್ರವೇ ಗದರುತ್ತಿದ್ದರು.

ಮನೆಯಲ್ಲಿಯೂ ದಿನದಲ್ಲಿ ಎರಡು ಗಂಟೆ ಸಂಗೀತಾಭ್ಯಾಸ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದರು. ಅವರಿಗೆ ಸಂಗೀತದಲ್ಲಿ ನಾನು ದೊಡ್ಡ ಹೆಸರು ಮಾಡಬೇಕು ಎಂಬುದಷ್ಟೇ ಆಸೆಯಾಗಿತ್ತು.

ನಮ್ಮೂರಿನಲ್ಲಿ ಹಬ್ಬದ ದಿನಗಳಲ್ಲಿ ಕಾರ್ಯಕ್ರಮವಿದ್ದಾಗ ನನ್ನಿಂದ ಹಾಡಿಸುತ್ತಿದ್ದರು. ಒಂದು ಸಲ ಅಪ್ಪನಿಗೆ ದೆಹಲಿ ಮತ್ತು ಮುಂಬೈನಲ್ಲಿ ಕನ್ನಡ ಸಂಘದಿಂದ ಹಾಡಲಿಕ್ಕೆಂದು ಕರೆ ಬಂತು. ಊರು ನೋಡಿದ ಹಾಗಾಗುತ್ತದೆ ಎಂದು ನನ್ನನ್ನು ಮತ್ತು ಅಮ್ಮನನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು.

ವೇದಿಕೆಯಲ್ಲಿ ಅವರ ಬದಿಯಲ್ಲಿ ಕುಳಿತಿದ್ದೆ. ಅವರ ಹಾಡು ಮುಗಿಯಿತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಾನು ಜೋರಾಗಿ ಅಳಲು ಪ್ರಾರಂಭಿಸಿದೆ. ನನಗೆ ಹಾಡಲು ಅವಕಾಶ ನೀಡಿಲ್ಲ ಎಂದು. ಹೀಗೆ ನನಗೆ ಚಿಕ್ಕಂದಿನಿಂದಲೂ ಹಾಡಬೇಕು ಎಂಬ ಹುಚ್ಚು. ಅಪ್ಪ ‘ಯಾಕೆ ಅಳುತ್ತಿದ್ದೀಯಾ’ ಎಂದರು. ‘ನಾನು ಹಾಡಬೇಕು’ ಎಂದೆ. ‘ಅಯ್ಯೋ ಬಾ’ ಹಾಡು ಎಂದು ಅಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರ ಬಳಿ  ‘ನಿಮ್ಮ ಅಭ್ಯಂತರವಿ ಸ್ಸಾಗುತ್ತಿದ್ದಂತೆ ಅಪ್ಪ ಸಣ್ಣ ಮಗುವಿನ ರೀತಿಯಾಗುತ್ತಿದ್ದಾರೆ. ಅಪ್ಪ, ಅಮ್ಮ ಕೋಳಿ ಜಗಳವಾಡುತ್ತಿರುತ್ತಾರೆ. ನಾನು ಹೋಗಿ ಬಿಡಿಸುತ್ತೇನೆ. ಆದರೆ ಇದೇನೂ ಗಂಭೀರ ಜಗಳವಲ್ಲ; ತುಂಬ  ತಮಾಷೆಯಾಗಿರುತ್ತದೆ.

ಅಪ್ಪ, ಅಮ್ಮನದ್ದು ತುಂಬಮುದ್ದಾದ ಜೋಡಿ. ಇಂದಿಗೂ ಹೊಂದಾಣಿಕೆ ಮಾಡಿಕೊಂಡು ಬದುಕಿನ ಪಯಣವನ್ನು ಸಾಗಿಸುತ್ತಿದ್ದಾರೆ. ಅವರಿಬ್ಬರೂ, ಮೊದಲಿನಿಂದಲೂ ಸಂಬಂಧಿಕರು. ಅಪ್ಪನ ಬಳಿ ಅಮ್ಮ ಸಂಗೀತ ಕಲಿಯಲು ಬರುತ್ತಿದ್ದರು.  ಅಮ್ಮನನ್ನು ಮೆಚ್ಚಿಕೊಂಡ ಅಪ್ಪ ನನ್ನಜ್ಜಿಗೆ ‘ನಿಮ್ಮ ಮಗಳನ್ನು ನನಗೆ ಕೊಡಿ’ ಎಂದು ಪತ್ರ ಬರೆದಿದ್ದರು.ಹೀಗೆ ಪ್ರಾರಂಭವಾದ ಅವರ ಪ್ರೀತಿಯ ಪಯಣ ಇಲ್ಲಿಯವರೆಗೂ ಸುಗಮವಾಗಿ ಸಾಗಿದೆ.

ಅಪ್ಪನಿಗೆ ನಿವೃತ್ತಿಯಾಗಿದ್ದರೂ ಕೈಗೆ ಸಿಗದಷ್ಟು ಬ್ಯುಸಿಯಾಗಿದ್ದಾರೆ. ಮಲೆನಾಡು ವಿಪ್ರೊ ವೇದಿಕೆ ಅಧ್ಯಕ್ಷರು. ಆಮೇಲೆ ಸುಗಮ ಸಂಗೀತ ಪರಿಷತ್ತು ಕಾರ್ಯದರ್ಶಿಯಾಗಿದ್ದಾರೆ.ಸ್ವಲ್ಪ ಬಿಡುವು ಸಿಕ್ಕರೂ ಕಾರಂತರು, ಭೈರಪ್ಪ, ಕುವೆಂಪು ಅವರ ಕಾದಂಬರಿಗಳು ಅವರ ಕೈ ಸೇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT