ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸಭೆಗೆ ಮೊಬೈಲ್ ನಿಷೇಧ

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ಸಂಪರ್ಕ ಸಾಧನಗಳಿಗೆ ಕನ್ನ ಹಾಕುವ ಮೂಲಕ ಮಾಹಿತಿ ಸೋರಿಕೆ ಆಗುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಕೇಂದ್ರ ಸಚಿವ ಸಂಪುಟದ ಸಭೆ ಮತ್ತು ಸಂಪುಟ ಉಪ ಸಮಿತಿಗಳ ಸಭೆಗೆ ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ಫೋನ್‌ಗಳನ್ನು ನಿಷೇಧಿಸಲಾಗಿದೆ.

ಸಂಪುಟ ಕಾರ್ಯದರ್ಶಿ ಅವರು ಇತ್ತೀಚೆಗೆ ಎಲ್ಲಾ ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಈ ಕುರಿತು ನಿರ್ದೇಶನ ಕಳುಹಿಸಿದ್ದಾರೆ.

ಸಂಪುಟ ಸಭೆ ಮತ್ತು ಸಂಪುಟ ಉಪ ಸಮಿತಿಗಳ ಸಭೆ ನಡೆಯುವ ಸ್ಥಳಕ್ಕೆ ಸಚಿವರು ಮೊಬೈಲ್ ಫೋನ್ ಒಯ್ಯಬಾರದು ಎಂದು ಸೂಚಿಸಲಾಗಿದೆ.

ಮೊಬೈಲ್ ಸಾಧನಗಳ ಮೂಲಕ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳು ಇವೆ ಎಂದು ಭದ್ರತಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸಂಪುಟ ಸಭೆ ಮತ್ತು ಸಂಪುಟ ಉಪ ಸಮಿತಿಗಳ ಸಭೆಯಲ್ಲಿ ನಡೆಯುವ ಚರ್ಚೆಗಳು ಬಹಳ ಮಹತ್ವ ಮತ್ತು ಸೂಕ್ಷ್ಮದ್ದಾಗಿರುವುದರಿಂದ ಮಾಹಿತಿ ಸೋರಿಕೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಇದುವರೆಗೆ ಮೊಬೈಲ್ ಫೋನ್‌ಗಳನ್ನು ಸಭೆಗೆ ಒಯ್ಯುಬಹುದಾಗಿತ್ತು. ಆದರೆ ಅವುಗಳನ್ನು ‘ಸೈಲೆಂಟ್ ಮೋಡ್‌’ನಲ್ಲಿ ಅಥವಾ ‘ಸ್ವಿಚ್ ಆಫ್’ ಮಾಡಿ ಇಡಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT