ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್

Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
1) ಚಾಲುಕ್ಯುತ್ಸವ ಬಾಗಲಕೋಟೆ ಸಮೀಪದ ಬಾದಾಮಿಯಲ್ಲಿ ನಡೆಯುತ್ತದೆ. ಹಾಗಾದರೆ ಕದಂಬೋತ್ಸವ ಎಲ್ಲಿ ನಡೆಯುತ್ತದೆ? 
a) ಶಿರಸಿಯ ಬನವಾಸಿ
b) ಹಾಸನದ ಬೇಲೂರು
c) ಕೋಲಾರದ ಚಿಂತಾಮಣಿ 
d) ಬೀದರ್‌ನ ಬಸವ ಕಲ್ಯಾಣ
 
**
2) ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?
a) ಪಶ್ಚಿಮಘಟ್ಟದ ಮೊದಲ ವರದಿ ನೀಡಿದವರು ಗಾಡ್ಗಿಲ್  
b) ಪಶ್ಚಿಮ ಘಟ್ಟ 5 ರಾಜ್ಯಗಳಲ್ಲಿ ಹರಡಿದೆ
c) ಕಸ್ತೂರಿರಂಗನ್ ವರದಿ ಕೂಡ ಪಶ್ಚಿಮಘಟ್ಟಕೆ ಸಂಬಂಧಿಸಿದೆ
d) ಪಶ್ಚಿಮಘಟ್ಟ ಕರ್ನಾಟಕದಲ್ಲೂ ಹರಡಿದೆ
 
**
3) ಕೇಂದ್ರ ಸರ್ಕಾರ ಕಪ್ಪು ಹಣದ ತನಿಖೆಗಾಗಿ  ನೇಮಿಸಲಾದ ವಿಶೇಷ ಸಮಿತಿಯ ಅಧ್ಯಕ್ಷರು ಯಾರು?
a) ದೀರಜ್ ಪಾಟೀಲ್  
b) ಎಂ.ಕೆ. ಶರ್ಮಾ
c) ಎಂ.ಬಿ. ಶಾ
d) ಕಮಲಾಕರನ್
 
**
4) ದೇಶದಲ್ಲಿ ಅತಿ ಹೆಚ್ಚು ಅಡುಗೆ ಉಪ್ಪನ್ನು ಈ ಕೆಳಕಂಡ ಯಾವ ರಾಜ್ಯದಲ್ಲಿ ತಯಾರಿಸಲಾಗುತ್ತದೆ?
a) ಉತ್ತರಖಂಡ
 b) ಕೇರಳ
c) ಪಶ್ಚಿಮ ಬಂಗಾಳ
d) ಗುಜರಾತ್
 
**
5) ಕಲುಷಿತ ಅನಿಲ ಗಂದಕದ ಡೈ ಆಕ್ಸೈಡ್‌ನಿಂದ ವಾತಾವರಣದಲ್ಲಿ ಯಾವ ಕೆಟ್ಟ ಪರಿಣಾಮ ಉಂಟಾಗುತ್ತದೆ ?
a) ಮಂಜುಗಡ್ಡೆ ಕರಗುವುದು
 b) ಕೆಟ್ಟಗಾಳಿ ಬೀಸುವುದು
c) ಆಮ್ಲಮಳೆ ಸುರಿಯುವುದು
d) ಮೇಘಸ್ಫೋಟ
 
**
6) ಈ ಕೆಳಗೆ ನಾಲ್ಕು ನದಿಗಳನ್ನು ಹೆಸರಿಸಲಾಗಿದೆ. ಇವುಗಳಲ್ಲಿ ಅತ್ಯಂತ ದೊಡ್ಡ ನದಿ ಯಾವುದು?
a) ಗೋದಾವರಿ
b) ತುಂಗಭದ್ರಾ
c) ಯಮುನಾ
d)  ನರ್ಮದಾ
 
**
7) ಕರ್ನಾಟಕದ ಯಾವ ಜಿಲ್ಲೆಯಲ್ಲಿ ‘ದೋ ಮಿನಾರ್’ (ಚಾರ್ ಮಿನಾರ್ ಮಾದರಿಯ) ಸ್ಮಾರಕ ಇದೆ?
a) ಬಿಜಾಪುರ
 b) ಕಲಬುರಗಿ 
c) ಶ್ರೀರಂಗಪಟ್ಟಣ
d) ಬೀದರ್
 
**
8) ಮಾನವನಲ್ಲಿರುವ ಡಿಎನ್ಎ ಅಂಶದ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದಿದ್ದ ವಿಜ್ಞಾನಿಯೊಬ್ಬರು ನೊಬೆಲ್ ಪದಕವನ್ನು ಹರಾಜಿಗಿಟ್ಟಿದ್ದರು; ಅವರು ಯಾರು?
a) ಜೆಮ್ಸ್ ವ್ಯಾಟ್ಸನ್
b) ಫ್ರಾನ್ಸಿಸ್ ಕುಕ್
c) ಕೆರೋಲಿನಾ ಡಿಸೋಜಾ
d) ಮೋರಿಸ್ ಮಿಲ್ಕನ್
 
*
9)ಕಪ್ಪುರಂಧ್ರಗಳ ಅಧ್ಯಯನಕ್ಕಾಗಿ ನಾಸಾ ಅಭಿವೃದ್ಧಿಪಡಿಸಿರುವ ಎಕ್ಸರೇ ಟೆಲಿಸ್ಕೋಪ್ ಯಾವುದು?
a) ನ್ಯೂಬ್ಲಾಕ್
b) ನಾಸಾ ಟೆಲಿಸ್ಕೋಪ್
c) ನ್ಯೂಸ್ಟಾರ್
d) ಯುಎಸ್ ಟೆಲಿಸ್ಕೋಪ್
 
**
10) ಇ-ಮೇಲ್ ಮಾದರಿಯಲ್ಲಿ ಹಾಟ್ ಮೇಲ್ ಅನ್ನು ಕಂಡುಹಿಡಿದವರು ಯಾರು?
a) ಜುಕೇನ್ ಬರ್ಗ್
b) ನವೋಲಿನ್ ಗೂಗಲ್
c) ಮಾರ್ಕ್ ಅನ್್ಬರ್ಗ್
d) ಸಬೀರ್ ಭಾಟಿಯಾ
 
ಉತ್ತರಗಳು 1-a, 2-b, 3-c, 4-d, 5-c, 6-a, 7-b, 8-a, 9-c, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT