ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಜಿಗಳ ರಹಸ್ಯ ನೆಲೆ ಪತ್ತೆ

Last Updated 23 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಾಸ್ಕೊ: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಆದೇಶದ ಮೇರೆಗೆ ನಿರ್ಮಿಸಲಾಗಿದ್ದ ನಾಜಿ ನೆಲೆಯೊಂದನ್ನು ರಷ್ಯಾದ ಆರ್ಕ್ಟಿಕ್ ರಾಷ್ಟ್ರೀಯ ಉದ್ಯಾನವನದ ಸಂಶೋಧಕರು ಪತ್ತೆಹಚ್ಚಿದ್ದಾರೆ. ಇದು ಉತ್ತರ ಧ್ರುವ ಪ್ರದೇಶದಿಂದ ಸಾವಿರ ಕಿ.ಮೀ. ದೂರದಲ್ಲಿರುವ ಅಲೆಕ್ಸಾಂಡ್ರಾ ಲ್ಯಾಂಡ್‌ನ ದ್ವೀಪದಲ್ಲಿ ಪತ್ತೆಯಾಗಿದೆ. ಸದ್ಯ ಈ ಭೂಪ್ರದೇಶ ರಷ್ಯಾದ ವ್ಯಾಪ್ತಿಯಲ್ಲಿದೆ.

ಬಂಕರ್‌ಗಳ, ಪೆಟ್ರೋಲ್ ಬಾಂಬ್‌ಗಳ ಮತ್ತು ಕಾಗದಪತ್ರಗಳ 500ರಷ್ಟು ಅವಶೇಷಗಳೂ ನಾಜಿ ನೆಲೆಯಲ್ಲಿ ಕಂಡುಬಂದಿವೆ. ದ್ವೀಪದಲ್ಲಿ ಚಳಿ ಹೆಚ್ಚಿರುವುದು ಅವಶೇಷಗಳು ಈವರೆಗೂ ಉಳಿದಿರಲು ಕಾರಣವಾಗಿದೆ. 1942ರಲ್ಲಿ ಈ ನೆಲೆ ನಿರ್ಮಾಣಗೊಂಡಿರಬಹುದು. 1943ರಿಂದ 1944ರವರೆಗೆ ಕಾರ್ಯಾಚರಣೆ ನಡೆಸಿರುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT