ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಢ ಆರೋಗ್ಯಕ್ಕೆ ಸರಳ ಪೇಯಗಳು

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ
 ಹೃದಯ ಮತ್ತು ಶ್ವಾಸಕೋಶ
* ಇಡೀ ದೇಹಕ್ಕೆ ರಕ್ತ ಹಾಗೂ ಆಮ್ಲಜನಕವನ್ನು ಪೂರೈಸುವುದು ಹೃದಯ. ವಿಶ್ವದಾದ್ಯಂತ ಹೃದಯಸಂಬಂಧಿ ಕಾಯಿಲೆಗಳು ಈಗೀಗ ಹೆಚ್ಚಿದೆ ಎಂಬುದನ್ನು ಗಮನಿಸಬೇಕು.
 
* ಹೃದಯ ಸಮಸ್ಯೆಗಳ ಲಕ್ಷಣಗಳು: ಉಸಿರಾಟದಲ್ಲಿ ಏರುಪೇರು, ತಲೆ ಸುತ್ತು, ಶಕ್ತಿಹೀನತೆ, ಬೆವರುವುದು, ವಾಕರಿಕೆ.
 
* ಶ್ವಾಸಕೋಶ: ಆಮ್ಲಜನಕವನ್ನು ದೇಹಕ್ಕೆ ಪೂರೈಸಿ, ಇಂಗಾಲದ ಡೈ ಆಕ್ಸೈಡ್‌ ಅನ್ನು ಹೊರಕಳಿಸುವುದು ಶ್ವಾಸಕೋಶದ ಪ್ರಮುಖ ಕೆಲಸ. ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಂಡರೆ  ಶಕ್ತಿಯುತವಾಗಿ ಇರಲು ಸಾಧ್ಯವಾಗುತ್ತದೆ.
 
* ಶ್ವಾಸಕೋಶ ಸಮಸ್ಯೆಯ ಲಕ್ಷಣಗಳು: ಕೆಮ್ಮುವಾಗ ನೋವಾಗುವುದು, ನೋವಿನಿಂದ ಕೂಡಿದ ಸಿಂಬಳ, ರಕ್ತದ ಕೆಮ್ಮು, ಎದೆ ನೋವು.
 
**
ಯಕೃತ್ತು ಮತ್ತು ಕಿಡ್ನಿ
ಯಕೃತ್ತು ದೇಹದಲ್ಲಿನ ಎರಡನೇ ದೊಡ್ಡ ಅಂಗ. ಹೀಗೆನ್ನಲೂ ಒಂದು ಕಾರಣವಿದೆ. ಜೀರ್ಣಕ್ರಿಯೆ, ಚಯಾಪಚಯ ಶಕ್ತಿಗೆ ಸಂಬಂಧಿಸಿದ ಅತಿ ಮುಖ್ಯ ಕಾರ್ಯವನ್ನು ಇದು ನಿರ್ವಹಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳವೂ ಯಕೃತ್ತಿನ ಕಾರ್ಯ ಚಟುವಟಿಕೆ ಅವಲಂಬಿಸಿದೆ.
 
* ಯಕೃತ್ತು ಹಾನಿಗೊಳಗಾದ ಲಕ್ಷಣ: ಜೀರ್ಣಕ್ರಿಯೆ ಸಮಸ್ಯೆ, ರಕ್ತದಲ್ಲಿನ ಸಕ್ಕರೆ ಅಂಶದ ಏರುಪೇರು, ನರಮಂಡಲದ ಸಮಸ್ಯೆ, ರೋಗ ನಿರೋಧಕ ಶಕ್ತಿ ಕುಂದುವುದು.
 
* ಮೂತ್ರಪಿಂಡ: ನಮ್ಮ ದೇಹ ಸಮತೋಲನದಲ್ಲಿ ಸಾಗಬೇಕಾದರೆ ಕಿಡ್ನಿಗಳೇ ಅತಿ ಮುಖ್ಯ. ಅದಕ್ಕೆ ಹೆಚ್ಚು ಜವಾಬ್ದಾರಿಗಳಿದ್ದು , ಅದರಲ್ಲಿ, ರಕ್ತದಿಂದ ಕಲ್ಮಶವನ್ನು ಹೊರಗೆ ಹಾಕುವುದು ಪ್ರಮುಖವಾದುದು. ಕೆಟ್ಟದ್ರವಗಳನ್ನು ಹೊರಗೆ ಹಾಕುವ, ಆ್ಯಸಿಡಿಟಿ ನಿಯಂತ್ರಿಸುವ, ರಕ್ತದ ಏರೊತ್ತಡದ ನಿಯಂತ್ರಣ ಇದರಿಂದ ಸಾಧ್ಯ.
 
* ಕಿಡ್ನಿ ಸಮಸ್ಯೆಯ ಲಕ್ಷಣಗಳು: ಆಯಾಸ, ವಾಕರಿಕೆ, ವಾಂತಿ, ಉಸಿರಾಟದಲ್ಲಿ ತೊಂದರೆ, ಶೀತ.
 
**
ಚರ್ಮ
ಸಂಪೂರ್ಣ ದೇಹವನ್ನು ಕಾಪಾಡುವುದು ಚರ್ಮದ ಆದ್ಯ ಕೆಲಸ.  ಸೂಕ್ಷ್ಮ ಜೀವಿಗಳಿಂದ, ಸೂರ್ಯನಿಂದ ಹಾಗೂ ಇನ್ನಿತರ ಹಾನಿಗಳಿಂದ  ಇದು ದೇಹವನ್ನು ರಕ್ಷಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.  
 
ಅನಾರೋಗ್ಯಕರ ಚರ್ಮದ ಲಕ್ಷಣಗಳು: ಮೊಡವೆ, ಕಪ್ಪು ವರ್ತುಲ, ವಯಸ್ಸಿಗೆ ಮುನ್ನ ಸುಕ್ಕು, ಅತಿಯಾದ ಮಚ್ಚೆಗಳು, ಗಂಟು, ನರವಲಿಗಳು ಉಂಟಾಗುತ್ತವೆ.
 
*
ಆರೋಗ್ಯಕ್ಕೆ ಪಾನೀಯಗಳು
ತರಕಾರಿ ಹಾಗೂ ಹಣ್ಣುಗಳನ್ನು ಹಾಗೇ ತಿನ್ನಲು ಎಷ್ಟೋ ಮಂದಿಗೆ ಬೇಜಾರು. ಆದ್ದರಿಂದ ಜ್ಯೂಸ್‌ ಮಾಡಿ ಕುಡಿಯುವುದು ಒಳ್ಳೆಯದು. ನಿರ್ದಿಷ್ಟ ಅಂಗಗಳಿಗೆ ಉಪಯೋಗವಾಗುವ ಕೆಲವು ಜ್ಯೂಸ್‌ಗಳ ಮಾಹಿತಿಯನ್ನು ನೀಡಲಾಗಿದೆ.
 
ಇಲ್ಲಿ ಹೇಳಿರುವ ಹಣ್ಣು , ತರಕಾರಿಗಳನ್ನು ಸೇರಿಸಿ ಪಾನೀಯ ತಯಾರಿಸಿಕೊಂಡು ಸೇವಿಸಬಹುದು.

*

-ಮೂಲ: ಹೆಲ್ತ್‌ ಆ್ಯಂಬಿಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT