ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ‘ಕೇಸರಿ ಶಾಲು’ ಪ್ರತಿಭಟನೆ

ಏಕರೂಪ ಸಮವಸ್ತ್ರ ಕಡ್ಡಾಯಕ್ಕೆ ವಿದ್ಯಾರ್ಥಿಗಳ ಆಗ್ರಹ
Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಹಿರೇಕೆರೂರ (ಹಾವೇರಿ ಜಿಲ್ಲೆ): ಏಕರೂಪ ಸಮವಸ್ತ್ರ ಜಾರಿಗೆ ತರಬೇಕೆಂದು ಆಗ್ರಹಿಸಿ ಪಟ್ಟಣದ ಬಿ.ಆರ್.ತಂಬಾಕದ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸೋಮವಾರವೂ ಕೇಸರಿ ಶಾಲು ಸಹಿತ ತರಾವರಿ ದಿರಿಸಿನಲ್ಲಿ ಕಾಲೇಜಿಗೆ ಬಂದಿದ್ದರು.

‘ನಮ್ಮ ಹೋರಾಟವನ್ನು ಸಹಿಸದ ಕೆಲವರು, ಕಡ್ಡಾಯ ಸಮವಸ್ತ್ರದ ಬೇಡಿಕೆಯನ್ನು ಧರ್ಮಯುದ್ಧ ಎಂದು ಬಿಂಬಿಸುತ್ತಿದ್ದಾರೆ. ಇದು ತಪ್ಪು. ನಮ್ಮದು ಸಮಾನತೆಯ ಕಡ್ಡಾಯ ಸಮವಸ್ತ್ರದ ಬೇಡಿಕೆ. ಅದು ಈಡೇರುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ’ ಎಂದು ಕಡ್ಡಾಯ ಸಮವಸ್ತ್ರದ ಪರ ವಿದ್ಯಾರ್ಥಿಗಳು ಹೇಳಿದರು.

‘ಎಲ್ಲ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ನಿರ್ಧರಿಸಿದಂತೆ, ಕಿರು ಪರೀಕ್ಷೆ ಬರೆಯಲು ಶನಿವಾರ ಮತ್ತು ಸೋಮವಾರ ಹಾಜರಾಗಿದ್ದೇವೆ. ಹಾಗೆಂದ ಮಾತ್ರಕ್ಕೆ ಹೋರಾಟದಿಂದ ಹಿಂದೆ ಸರಿದಿದ್ದೇವೆಂದು ತಿಳಿಯಬಾರದು. ಕಡ್ಡಾಯ ಸಮವಸ್ತ್ರ ಜಾರಿಗೆ ಬರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ’ ಎಂದು ಅವರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT