ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಗೇಮ್‌ನಲ್ಲಿ ವರ್ಚುವಲ್‌ ರಿಯಾಲಿಟಿ

Last Updated 8 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವರ್ಚುವಲ್‌ ರಿಯಾಲಿಟಿ (Virtual reality) ಅಥವಾ ವಿಆರ್‌ (VR) ತಂತ್ರಜ್ಞಾನ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಕಾಲವಿದು. ಹೆಚ್ಚಾಗಿ ವಿಡಿಯೊಗೇಮ್‌ ಕ್ಷೇತ್ರದಲ್ಲಿ ವಿಆರ್‌ ತಂತ್ರಜ್ಞಾನ ಬಳಕೆಯಾಗುತ್ತಿದೆ. ವಿಡಿಯೊಗೇಮ್‌ ಆಡಲೆಂದೇ ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಸುತ್ತಲಿನ 360 ಡಿಗ್ರಿ ಕೋನದ ದೃಶ್ಯಗಳನ್ನು ನೋಡಲು, ಕೇಳಲು, ಸ್ಪರ್ಶಿಸಲು, ನಿರ್ವಹಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಇದು.

‘ಫೆಝ್‌’ ಎಂಬ ಜನಪ್ರಿಯ 3ಡಿ ವಿಡಿಯೊ ಗೇಮ್‌ ಅಭಿವೃದ್ಧಿಪಡಿಸಿದ ಫಿಲ್‌ಫಿಶ್‌ ಮತ್ತು ಅವರ ತಂಡ ಈಗ ವಿಆರ್ ತಂತ್ರಜ್ಞಾನ ಆಧರಿಸಿದ ಹೊಸತೊಂದು ವಿಡಿಯೊ ಗೇಮ್‌ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.

‘ಸೂಪರ್‌ ಹೈಪರ್‌ಕ್ಯೂಬ್‌’ ಎಂಬ ಹೆಸರಿನ ಈ ವಿಡಿಯೊ ಗೇಮ್‌ನ ಹೊಳಹು ಹೊಳೆದಿದ್ದು ದಶಕದ ಹಿಂದೆ. ಆಗಿನ್ನೂ ವರ್ಚುವಲ್‌ ರಿಯಾಲಿಟಿ ಹೆಡ್‌ಸೆಟ್‌ಗಳೇ ಅಭಿವೃದ್ಧಿಗೊಂಡಿರಲಿಲ್ಲ. ಹೀಗಾಗಿ ಗೇಮ್‌ ಅಭಿವೃದ್ಧಿಪಡಿಸಿದರೂ ಮನೆಯಲ್ಲಿ ಕುಳಿತು ಇದನ್ನು ಆಡಲು ಅಥವಾ 3ಡಿ ದೃಶ್ಯಗಳ ರೋಚಕ ಅನುಭವನ್ನು ಪಡೆದುಕೊಳ್ಳಲು ಅಸಾಧ್ಯ ಎಂಬ ಸ್ಥಿತಿ ಇತ್ತು.

ಇದೀಗ ಸೋನಿ ಕಂಪೆನಿ ಈ ತಂಡದ ಜತೆ ಕೈಜೋಡಿಸಿದ್ದು, ಇದನ್ನು ಆಡಲು, ನೋಡಲು ಸಾಧ್ಯವಾಗುವಂತಹ, ತಲೆಗೆ ಧರಿಸಿಕೊಳ್ಳಬಹುದಾದಂತ ವರ್ಚುವಲ್‌ ಹೆಡ್‌ಸೆಟ್‌ ಒಂದನ್ನು ಅಭಿವೃದ್ಧಿಪಡಿಸಿದೆ. ಇದರ ಜತೆಗೆ ಕಂಪೆನಿಯ ಹೋಮ್‌ ವಿಡಿಯೊ ಗೇಮ್‌ ಕನ್ಸೋಲ್‌ ಪ್ಲೇಸ್ಟೇಷನ್‌–4 ಅನ್ನೂ ಜೋಡಿಸಿದೆ. ಹೀಗಾಗಿ ಇದಕ್ಕೆ ಪ್ಲೇಸ್ಟೇಷನ್‌ ವಿಆರ್‌ ಎಂದೇ ಹೆಸರಿಟ್ಟಿದೆ.

ಸೋನಿ ಬಿಡುಗಡೆ ಮಾಡಿರುವ ಈ ಹೆಡ್‌ ಮೌಂಟೆಡ್‌ ಡಿಸ್‌ಪ್ಲೇ ಸೆಟ್‌ನ ಬೆಲೆ 399 ಡಾಲರ್‌. ಬಿಡುಗಡೆಯಾದ ಒಂದು ತಿಂಗಳಲ್ಲೇ 40 ದಶಲಕ್ಷ  ಹೆಡ್‌ಸೆಟ್‌ಗಳು ಮಾರಾಟವಾಗಿದೆಯೆಂದರೆ ವರ್ಚುವಲ್‌ ರಿಯಾಲಿಟಿ ಗೇಮ್‌ಗೆ ಇರುವ ಜನಪ್ರಿಯತೆ ಊಹಿಸಬಹುದು. ಈಗಾಗಲೇ ಮಾರುಕಟ್ಟೆಯಲ್ಲಿರುವ ಆಕ್ಯುಲಸ್‌ ರಿಫ್ಟ್‌ ಮತ್ತು ಎಚ್‌ಟಿಸಿ ಕಂಪೆನಿಯ ವೈವ್‌ ವಿಆರ್‌ ವರ್ಚುವಲ್‌ ಹೆಡ್‌ಸೆಟ್‌ಗಳಿಗೆ ಹೊಲೀಸಿದರೆ ಇದು ಅಗ್ಗ.

ಪ್ಲೇಸ್ಟೇಷನ್‌ ವಿಆರ್‌, 5.7 ಇಂಚಿನ ಒಎಲ್‌ಇಡಿ (ಆರ್ಗ್ಯಾನಿಕ್‌ ಲೈಟ್‌ ಎಮಿಟಿಂಗ್‌ ಡಯೋಡ್‌) ದೃಶ್ಯ ಪರದೆ ಹೊಂದಿದ್ದು, ಇದು ಸಂಪೂರ್ಣ ಎಚ್‌ಡಿ ಗುಣಮಟ್ಟ ಅಂದರೆ 1080ಪಿ ರೆಸಲ್ಯೂಷನ್‌ ಹೊಂದಿದೆ. ‘ಕಳೆದೊಂದು ದಶಕದಿಂದ ವರ್ಚುವಲ್‌ ರಿಯಾಲಿಟಿ ತಂತ್ರಜ್ಞಾನವನ್ನು ವಿಡಿಯೊ ಗೇಮ್‌ಗೆ ತರಲು ಪ್ರಯತ್ನಿಸಿದ್ದೆ. ಇದು ನನ್ನ ಕನಸಿನ ಯೋಜನೆಯೂ ಹೌದು’ ಎನ್ನುತ್ತಾರೆ ಫಿಲ್‌ ಫಿಶ್‌.

ಇದೊಂದು ಪಜಲ್‌ ಗೇಮ್‌. ‘ವರ್ಡ್ಸ್‌ ವಿತ್‌ ಪ್ರೆಂಡ್ಸ್‌’ ಎಂಬ ಜನಪ್ರಿಯ ಮೊಬೈಲ್‌ ಗೇಮ್‌ ಅಭಿವೃದ್ಧಿಪಡಿಸಿದ ಪೌಲ್‌ ಬೆಟ್ನರ್‌ ಅವರು, ಕಳೆದೊಂದು ದಶಕದಲ್ಲಿ  ಮನರಂಜನೆ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಬೆಳವಣಿಗೆಯೆಂದರೆ ವರ್ಚುವಲ್‌ ರಿಯಾಲಿಟಿ ತಂತ್ರಜ್ಞಾನ ಎನ್ನುತ್ತಾರೆ. ಈ ವರ್ಷ ಅವರು ‘ಲಕ್ಕೀಸ್‌ ಟೇಲ್‌’ ಎಂಬ ಹೆಸರಿನ ವರ್ಚುವಲ್‌ ವಿಡಿಯೊಗೇಮ್‌ ಬಿಡುಗಡೆ ಮಾಡಿದ್ದಾರೆ.

90ರ ದಶಕದಲ್ಲಿ ಜನಪ್ರಿಯವಾಗಿದ್ದ ಕಂಪ್ಯೂಟರ್‌ ಗೇಮ್‌ ‘ಮೈಸ್ಟ್‌’ ಮತ್ತು ಅಬ್ಡಕ್ಷನ್‌ನ ವಿಆರ್‌ ಆವೃತ್ತಿಗಳು ಬಿಡುಗಡೆಗೊಂಡಿವೆ. ಮೈಸ್ಟ್ ಗೇಮ್‌ ಅಭಿವೃದ್ಧಿಪಡಿಸಿದ ರ್‍ಯಾಂಡ್‌ ಮಿಲ್ಲರ್‌ ಪ್ರಕಾರ  ವರ್ಚುವಲ್‌ ರಿಯಾಟಿಲಿ ತಂತ್ರಜ್ಞಾನ ಹೊಸದೊಂದು ಜಗತ್ತಿಗೆ ಬಳಕೆದಾರರನ್ನು ಕೊಂಡೊಯ್ಯುತ್ತದೆ. ಡಿಜಿಟಲ್‌ ಜಗತ್ತಿನಲ್ಲಿ ಈಗ  ನಿರ್ಣಾಯಕ ಪಾತ್ರ ವಹಿಸುತ್ತಿರುವ ತಂತ್ರಜ್ಞಾನ ಎಂದರೆ  ಆಗ್ಮೆಂಟೆಡ್‌ ರಿಯಾಲಿಟಿ (augmented reality - AR) ಮತ್ತು  ವರ್ಚುವಲ್‌ ರಿಯಾಲಿಟಿ ಎನ್ನುತ್ತಾರೆ ಆ್ಯಪಲ್‌ ಕಂಪೆನಿಯ ಸಿಇಒ ಟಿಮ್‌ ಕುಕ್‌

 (ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT