ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ ಭಾಗದಲ್ಲಿ ನಿವೇಶನಗಳಿಗೆ ಭರ್ಜರಿ ಬೇಡಿಕೆ

ಉದ್ಯಮಿ ಮನದಾಳ
Last Updated 10 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಗ್ರೇಟರ್ ನೋಯ್ಡಾ ಮಾದರಿಯಲ್ಲಿ ಗ್ರೇಟರ್ ಪೀಣ್ಯಾ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದರಿಂದ ನೆಲಮಂಗಲ ಭಾಗದಲ್ಲಿ ರಿಯಲ್ ಎಸ್ಟೆಟ್ ಉದ್ಯಮಕ್ಕೆ ಭಾರೀ ಬೇಡಿಕೆ ಇದೆ.

ಇದರ ಜತೆಗೆ ನೆಲಮಂಗಲದಿಂದ ದೊಡ್ಡಬಳ್ಳಾಪುರ ರಸ್ತೆ ಮೂಲಕವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿರುವುದರಿಂದ ರಿಯಾಲ್ಟಿ ಉದ್ಯಮದಲ್ಲಿ ಗರಿಗೆದರಿದ ಚಟುವಟಿಕೆಗಳು ನಡೆಯುತ್ತಿವೆ ಎಂದು ಶ್ರೀಸಾಯಿ ಡೈಮಂಡ್ ಪ್ರಾಪರ್ಟೀಸ್ ಕಂಪೆನಿಯ ಮುಖ್ಯಸ್ಥರಾದ ಎನ್. ಎಸ್. ಶಾಂತಕುಮಾರ್ ಹೇಳುತ್ತಾರೆ.

ನೆಲಮಂಗಲ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ರಿಯಾಲ್ಟಿ ಉದ್ಯಮದಲ್ಲಿ ತೊಡಗಿರುವ ಶ್ರೀಸಾಯಿ ಡೈಮಂಡ್ ಕಂಪೆನಿ ಗ್ರಾಹಕರ ವಿಶ್ವಾರ್ಸತೆಗಳಿಸಿಕೊಂಡು ಉತ್ತಮ ವಹಿವಾಟು ನಡೆಸುತ್ತಿದೆ.

ಪ್ರಸ್ತುತ ರಿಯಾಲ್ಟಿ ಉದ್ಯಮದ ಸ್ಥಿತಿಗಳು, ಗ್ರಾಹಕರ ಬೇಡಿಕೆ, ಹೂಡಿಕೆ, ಮಾರುಕಟ್ಟೆ, ಹೊಸ ಯೋಜನೆಗಳು, ರೂಪಾಯಿ ಅಪಮೌಲ್ಯ ಸೇರಿದಂತೆ ಉದ್ಯಮದ ಆಗುಹೋಗುಗಳ ಕುರಿತಂತೆ ಶಾಂತಕುಮಾರ್ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

*ಸಾಯಿ ಡೈಮಂಡ್ ಕಂಪೆನಿ ಎಷ್ಟು ವರ್ಷಗಳಿಂದ ರಿಯಾಲ್ಟಿ ಉದ್ಯಮದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಹಾಗು ನಿಮ್ಮ ಕಂಪೆನಿಯ  ಕಾರ್ಯವೈಖರಿ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ?
ನೆಲಮಂಗಲ ಪಟ್ಟಣ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹತ್ತು ವರ್ಷಗಳಿಂದ ರಿಯಾಲ್ಟಿ ಉದ್ಯಮದಲ್ಲಿ ತೊಡಗಿಕೊಂಡಿದ್ದು ಇಲ್ಲಿಯವರೆಗೂ ನಾನಾ ಯೋಜನೆಗಳ ಮೂಲಕ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರ ವಿಶ್ವಾಸರ್ಹತೆಯನ್ನು ಗಳಿಸಿಕೊಂಡಿದೆ. ನಮ್ಮ ಕಂಪೆನಿ ನಿವೇಶನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಹಕರ ಮನೆಗಳನ್ನು ನಿರ್ಮಾಣ ಮಾಡಿ ಕೊಡಿ ಎಂದು ಕೇಳಿದರೆ ಮಾತ್ರ ನಿರ್ಮಾಣಕ್ಕೆ ಕೈಹಾಕುತ್ತೇವೆ. ಸದ್ಯಕ್ಕೆ ಅಪಾರ್ಟ್‌ಮೆಂಟ್ ಮತ್ತು ವಿಲ್ಲಾಗಳನ್ನು ನಿರ್ಮಾಣ ಮಾಡುತ್ತಿಲ್ಲ.

*ಯಾವ ವರ್ಗದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿವೇಶನಗಳನ್ನು ರೂಪಿಸುತ್ತಿದ್ದೀರಿ?
ಬಡವರು ಮತ್ತು ಮಧ್ಯಮ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿವೇಶನಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ದುರ್ಬಲ ವರ್ಗದವರಿಗೆ ರಿಯಾಯಿತಿ ದರದಲ್ಲೂ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ. ಇದರ ಜತೆಗೆ ನಿವೇಶನ ಕೊಳ್ಳ ಬಯಸುವ ಗ್ರಾಹಕರಿಗೆ ಬ್ಯಾಂಕ್ ಸಾಲದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು.

*ನೆಲಮಂಗಲ ಭಾಗದಲ್ಲಿ ಹೂಡಿಕೆ ಮಾಡಿದರೆ ಲಾಭ ಬರುವುದೇ?
ಖಂಡಿತವಾಗಿಯೂ ಈ ಭಾಗದಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗಲಿದೆ. ಏಕೆಂದರೆ ಸುಮಾರು 20 ಜಿಲ್ಲೆಗಳಿಗೆ ನೆಲಮಂಗಲ ರಸ್ತೆ ರಾಜ ಮಾರ್ಗವಾಗಿದೆ. ಜನರು ವಸತಿಗಾಗಿ ಈ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ನಗರದಲ್ಲಿರುವ ಉದ್ದಿಮೆಗಳು ಕೂಡ ಇತ್ತ ಕಡೆ ಮುಖ ಮಾಡುತ್ತಿವೆ. ಹಾಗಾಗಿ ವಾಣಿಜ್ಯ ಮತ್ತು ವಸತಿ ಭೂಮಿಗೆ ನೆಲಮಂಗಲದಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ.

*ನೀವು ಅಭಿವೃದ್ಧಿಪಡಿಸಿರುವ ಲೇಔಟ್‌ನಲ್ಲಿ ಯಾವ ರೀತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ?
ಶ್ರೀಸಾಯಿ ಡೈಮಂಡ್ ಸಂಸ್ಥೆಯು ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಲೇಔಟ್‌ಗಳನ್ನು ವಿನ್ಯಾಸ ಮಾಡುತ್ತದೆ. ಮುಖ್ಯವಾಗಿ ಕುಡಿಯುವ ನೀರು, ಚರಂಡಿ, ರಸ್ತೆ, ಪಾರ್ಕ್, ದೇವಸ್ಥಾನ, ದಿನದ 24 ಗಂಟೆ ಭದ್ರತೆ, ಬೇಲಿ ವ್ಯವಸ್ಥೆ,  ಆಟದ ಮೈದಾನವನ್ನು ನಿರ್ಮಾಣ ಮಾಡಿಯೇ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಸಾಯಿಕೃಷ್ಣಾ ಗ್ರೀನ್ ಸಿಟಿ ಲೇಔಟ್ ಕೂಡ ನಿರ್ಮಾಣ ವಾಗುತ್ತಿದೆ.

*ಸಕಾಲದಲ್ಲಿ ನೋಂದಣಿ ಮಾಡಿಕೊಡುತ್ತೀರಾ?
ಇಲ್ಲಿಯವರೆಗೂ ಸಾವಿರಕ್ಕೂ ಹೆಚ್ಚು ನಿವೇಶಗಳನ್ನು ಮಾರಾಟ ಮಾಡಲಾಗಿದ್ದು ಎಲ್ಲ ಗ್ರಾಹಕರು ಸಂತೃಪ್ತರಾಗಿದ್ದಾರೆ. ಕಾನೂನು ರೀತಿಯ ಪಕ್ಕಾ ದಾಖಲೆಗಳನ್ನು ನೀಡಿ ಗ್ರಾಹಕರಿಗೆ ಸಕಾಲದಲ್ಲಿ ನೋಂದಾಣಿ ಮಾಡಿ ಕೊಡಲಾಗುತ್ತದೆ.

*ಸಾಯಿ ಡೈಮಂಡ್ ಪ್ರಾಪರ್ಟೀಸ್ ಕಂಪೆನಿಯ ಮುಂದಿನ ಯೋಜನೆಗಳು ಏನು?
ಪ್ರಸ್ತುತ ಸಾಯಿಕೃಷ್ಣ ಗ್ರೀನ್ ಸಿಟಿ ಯೋಜನೆ ಚಾಲ್ತಿಯಲ್ಲಿದೆ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನಗಳನ್ನು ಒದಗಿಸಿಕೊಡುವುದು ನಮ್ಮ ಸದ್ಯದ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಫ್ಲ್ಯಾಟ್ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುವ ಯೋಜನೆಗಳನ್ನು ರೂಪಿಸುತ್ತಿದ್ದೇವೆ.

ಮಾಹಿತಿಗೆ ಗ್ರಾಹಕರು ಎನ್. ಎಸ್.ಶಾಂತಕುಮಾರ್ ಅವರನ್ನು ಸಂಪರ್ಕಿಸಬಹುದು. ಮೊ. ಸಂಖ್ಯೆ: 9900056888, 9481555500 

* ₹500 ಮತ್ತು  ₹1000 ಮುಖಬೆಲೆಯ ನೋಟುಗಳು ಅಪಮೌಲ್ಯಗೊಂಡಿರುವುದು ರಿಯಾಲ್ಟಿ ಉದ್ಯಮದ ಮೇಲೆ ಯಾವ ಪರಿಣಾಮ ಬೀರಲಿದೆ?
ಬ್ಯಾಂಕ್ ಮೂಲಕ ವಹಿವಾಟು ನಡೆಸುವ ಮತ್ತು ಸಮರ್ಪಕವಾಗಿ ತೆರಿಗೆ ಪಾವತಿಸುವ ಕಂಪೆನಿಗಳ ಮೇಲೆ ಈ ಕ್ರಮ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ತೆರಿಗೆ ವಂಚಿಸಿ ಕಪ್ಪು ಹಣದ ಮೇಲೆ ವಹಿವಾಟು ನಡೆಸುವವರಿಗೆ ಇದರಿಂದ ಸಹಜವಾಗಿಯೇ ನಷ್ಟವಾಗುತ್ತದೆ. ನಮ್ಮ ಸಂಸ್ಥೆ ಬ್ಯಾಂಕ್ ಮೂಲಕ ವಹಿವಾಟು ನಡೆಸುವುದರಿಂದ ಗ್ರಾಹಕರಿಗೆ ಮತ್ತು ಕಂಪೆನಿಗೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ.

*
ಗ್ರಾಹಕರು ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು. ನಮ್ಮ ಕಂಪೆನಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.
–ಶಾಂತಕುಮಾರ್,
ಮುಖ್ಯಸ್ಥರು, ಶ್ರೀ ಸಾಯಿ ಡೈಮಂಡ್ ಪ್ರಾಪರ್ಟಿಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT