ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 20 ನವೆಂಬರ್ 2016, 19:30 IST
ಅಕ್ಷರ ಗಾತ್ರ

1. ಪ್ರಸಿದ್ಧ ಸೂರ್ಯ ದೇವಾಲಯ ಇರುವ ಸ್ಥಳ ಮತ್ತು ರಾಜ್ಯವನ್ನು ಈ ಕೆಳಗೆ ನೀಡಲಾಗಿದೆ. ಇವುಗಳಲ್ಲಿ ಸರಿಯಾದುದನ್ನು ಗುರುತಿಸಿ?
a) ಶ್ರೀಶೈಲ- ಆಂಧ್ರಪ್ರದೇಶ 
b) ಉಜೈನಿ-ಮಧ್ಯಪ್ರದೇಶ
c) ಕಂಚಿ-ತಮಿಳುನಾಡು 
d) ಮೊಥೇರಾ-ಗುಜರಾತ್

2. ಅಧಿಕಾರದಲ್ಲಿ ಇರುವಾಗಲೇ ಮೃತಪಟ್ಟ ಭಾರತದ ರಾಷ್ಟ್ರಪತಿ ಯಾರು?
a) ಬಾಬು ರಾಜೇಂದ್ರ ಪ್ರಸಾದ್   b) ಎಸ್. ರಾಧಾಕೃಷ್ಣನ್‌
c) ಜಾಕೀರ್ ಹುಸೇನ್  d)  ಬಿ.ಡಿ. ಜತ್ತಿ

3. ಹಗಲಿಗಿಂತ ರಾತ್ರಿ ಸಮಯದಲ್ಲಿ ರೇಡಿಯೊ ಪ್ರಸಾರಗಳು ಸ್ಪಷ್ಟವಾಗಿ ಕೇಳಿ ಬರಲು ಕಾರಣ ಏನು?
a) ಹಗಲಿನಲ್ಲಿ ಶಬ್ದಮಾಲಿನ್ಯ ಹೆಚ್ಚಾಗಿರುತ್ತದೆ. 
b) ಹಗಲಿನಲ್ಲಿ ಸೂರ್ಯನ ಕಿರಣಗಳು ರೇಡಿಯೊ ತರಂಗಗಳಿಗೆ ಅಡ್ಡಿ ಮಾಡುವುದರಿಂದ.
c) ರಾತ್ರಿಯಲ್ಲಿ ಭೂಮಿಯ ಆಯಸ್ಕಾಂತೀಯ ಶಕ್ತಿ ಹೆಚ್ಚುವುದರಿಂದ
d) ಮೇಲಿನ ಯಾವುದೂ ಅಲ್ಲ.

4. ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷತೆ ವಹಿಸಿದ್ದ ಮೊದಲ ಭಾರತೀಯ ಮಹಿಳೆ ಯಾರು?
a) ಸರೋಜಿನಿ ನಾಯ್ಡು   b) ಇಂದಿರಾ ಗಾಂಧಿ
c) ಸುಚೇತಾ ಕೃಪಲಾನಿ  d) ಕಸ್ತೂರ ಬಾ ಗಾಂಧಿ

5. ಇತ್ತೀಚೆಗೆ ಸಿಂಧೂ ನಾಗರಿಕತೆಯ ಕಾಲಕ್ಕೆ ಸೇರಿದ ಯಜ್ಞಕುಂಡಗಳ ಅವಶೇಷಗಳು ಉತ್ಖನನದಲ್ಲಿ ದೊರೆತಿವೆ.  ಈ ಕೆಳಕಂಡ ಯಾವ ಪ್ರಾಂತ್ಯದಲ್ಲಿ  ಅವು ಸಿಕ್ಕಿವೆ?
a) ಕಾಲಿಬಂಗನ್   b) ದಯಾಮಾಬಾದ್
c) ಮೊಹೆಂಜೊದಾರೊ  d) ಮಥುರಾ

6. ಮಾನವನ ದೇಹದಲ್ಲಿರುವ ಯಾವ ಕಣಗಳಿಗೆ ಪ್ರೊಟೀನ್ ಕಾರ್ಖಾನೆಗಳೆಂದು ಕರೆಯುತ್ತಾರೆ?
a) ಮೈಟೋಕಾಂಡ್ರಿಯಾ    b) ರೈಬೋಸೋಮ್‌ಗಳು
c) ಲೈಸೋಸೋಮ್‌ಗಳು d)  ಲಾಲಾ ರಸ

7. ಮುಂಬರುವ ದಿನಗಳಲ್ಲಿ ಅಮೆರಿಕದ  ನೂತನ ಅಧ್ಯಕ್ಷರಾಗಿ ಯಾರು ಅಧಿಕಾರವನ್ನು ಸ್ವೀಕರಿಸಲಿದ್ದಾರೆ?
a) ಹಿಲರಿ ಕ್ಲಿಂಟನ್   b) ಬರಾಕ್ ಒಬಾಮಾ
c) ಡೊನಾಲ್ಡ್ ಟ್ರಂಪ್   d) ಬಿಲ್ ಕ್ಲಿಂಟನ್

8. ಸಂಗಮ, ಸಾಳ್ವ, ತುಳು ಮತ್ತು ಅರವೀಡು ಸಂತತಿಗಳು ಈ ಕೆಳಕಂಡ ಯಾವ ರಾಜವಂಶಕ್ಕೆ  ಸೇರಿವೆ?
a) ಮೈಸೂರು ಅರಸರು  b) ಶಾತವಾಹನ ಅರಸರು
c) ಚಾಲುಕ್ಯ ಅರಸರು   d) ವಿಜಯನಗರ ಅರಸರು

9. ಭಾರತೀಯ ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಅಂಶಗಳನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
a) ಅಮೆರಿಕ     b) ಬ್ರಿಟನ್
c) ಫ್ರಾನ್ಸ್    d) ರಷ್ಯಾ

10. ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ದಯಾಮರಣ (ಯುಥಿನೇಸಿಯಾ)ವನ್ನು ಜಾರಿಗೆ ತಂದ ದೇಶ ಯಾವುದು?
a) ನೆದರ್‌ಲೆಂಡ್‌  b) ಗ್ರೀಸ್
c) ಸ್ವಿಟ್ಜರ್ಲೆಂಡ್‌   d) ಬೋಸ್ನಿಯಾ

ಉತ್ತರಗಳು 1-d, 2-c, 3-b, 4-a, 5-a,6-b, 7-c, 8-d, 9-c, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT