ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ವೆಚ್ಚ ಹೆಚ್ಚಳಕ್ಕೆ ಸಲಹೆ

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ : ದೊಡ್ಡ ಮೌಲ್ಯದ  ನೋಟುಗಳ ರದ್ದಾದ ನಂತರ ಎದುರಾದ ನಗದು ಅಭಾವದಿಂದ ಗ್ರಾಹಕರ ವಸ್ತುಗಳ ಖರೀದಿ ಪ್ರಮಾಣ ತೀವ್ರ ಕುಸಿದಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ಬಳಕೆ  ವಲಯಕ್ಕೆ ತೀವ್ರ ಏಟು ಬೀಳಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಭಿಪ್ರಾಯಪಟ್ಟಿದೆ.

ಎರಡು ತ್ರೈಮಾಸಿಕದಲ್ಲಿ ಗ್ರಾಹಕರ ಬಳಕೆ ಪ್ರಮಾಣ ಕಡಿಮೆಯಾಗಲಿದ್ದು, ಸರ್ಕಾರ 2016–17ನೇ ಸಾಲಿನಲ್ಲಿ ಸಾರ್ವಜನಿಕ ವೆಚ್ಚ ಪ್ರಮಾಣ ಹೆಚ್ಚಿಸಲು ಮುಂದಾಗಬೇಕು ಎಂದು ಅಸೋಚಾಂ ಸಲಹೆ ಮಾಡಿದೆ.

‘ಎರಡನೇ ತ್ರೈಮಾಸಿಕದಲ್ಲಿಯ ₹5.15 ಲಕ್ಷ ಕೋಟಿ ವೆಚ್ಚವನ್ನು ಸರ್ಕಾರ ಮುಂದಿನ ಎರಡು ತ್ರೈಮಾಸಿಕದಲ್ಲಿ ₹7 ಲಕ್ಷ ಕೋಟಿಗೆ ಹೆಚ್ಚಿಸಬೇಕು’  ಎಂದು ಹೇಳಿದೆ. ರಸ್ತೆ, ಹೆದ್ದಾರಿ, ಮೂಲಸೌಕರ್ಯ, ಬಂದರು, ರೈಲು, ನೀರಾವರಿ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಲ್ಲಿ ಸರ್ಕಾರ ಹೆಚ್ಚಿನ ಹಣ ತೊಡಗಿಸಬೇಕು ಎಂದು ಮನವಿ ಮಾಡಿದೆ. ಖಾಸಗಿ ಬಳಕೆ ಮತ್ತು ವೆಚ್ಚದ  ಪ್ರಮಾಣ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 60ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT