ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಟ್‌: 1.95 ಲಕ್ಷ ಅಭ್ಯರ್ಥಿಗಳು ಹಾಜರು

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ 20 ಪ್ರತಿಷ್ಠಿತ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳು (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌–ಐಐಎಂ) ಹಾಗೂ ಇತರ ಬಿ–ಸ್ಕೂಲ್‌ಗಳ ಪ್ರವೇಶಾತಿಗಾಗಿ ದೇಶದಾದ್ಯಂತ ಭಾನುವಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್‌) ನಡೆಯಿತು.

ದೇಶದ ವಿವಿಧ ನಗರಗಳ 138 ಕೇಂದ್ರಗಳಲ್ಲಿ ಭಾನುವಾರ ಎರಡು ಅವಧಿಯಲ್ಲಿ (ಬೆಳಿಗ್ಗೆ 9ರಿಂದ 12 ಮತ್ತು ಮಧ್ಯಾಹ್ನ 2.30ರಿಂದ 5.50)  ಪರೀಕ್ಷೆಗಳು ನಡೆದವು. ಈ ಬಾರಿ ಪರೀಕ್ಷೆ ನಡೆಸುವ ಜವಾಬ್ದಾರಿ ಬೆಂಗಳೂರಿನ ಐಐಎಂ ಹೆಗಲಿಗೆ ಬಿದ್ದಿತ್ತು.

ರಾಷ್ಟ್ರದಾದ್ಯಂತ 2,32,434 ಮಂದಿ ಕ್ಯಾಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1.95 ಲಕ್ಷ ಅಭ್ಯರ್ಥಿಗಳು (ಶೇ 83.6ರಷ್ಟು) ಪರೀಕ್ಷೆ ಬರೆದಿದ್ದಾರೆ ಎಂದು ಕ್ಯಾಟ್‌–2016ರ ಸಮನ್ವಯ ಅಧಿಕಾರಿ ಪ್ರೊ. ರಾಜೇಂದ್ರ ಕೆ. ಬಂಡಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಪೈಕಿ ಶೇ 82 ಮಂದಿ ಪರೀಕ್ಷೆ  ಬರೆದಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ ಬೆಳಗಾವಿ, ಬೆಂಗ ಳೂರು, ಬೀದರ್‌, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮಂಗಳೂರು, ಮೈಸೂರು, ರಾಮನಗರ ಶಿವಮೊಗ್ಗ, ತುಮಕೂರು ಮತ್ತು ಉಡುಪಿ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT