ಚೆನ್ನೈ: ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ರಾಜಾಜಿ ಹಾಲ್‍ನಲ್ಲಿ ಜಯಲಲಿತಾ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ನಿನ್ನೆ ವಿಧಿವಶರಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಚೆನ್ನೈನ ರಾಜಾಜಿ ಹಾಲ್‍ನಲ್ಲಿರಿಸಲಾಗಿದೆ.

ಜಯಾ ಅವರ ಅಂತಿಮ ದರ್ಶನ ಪಡೆದ ಮೋದಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮೋದಿಯವರನ್ನು ನೋಡಿದ ಕೂಡಲೇ ತಮಿಳುನಾಡಿನ ನೂತನ ಸಿಎಂ ಪನ್ನೀರ್ ಸೆಲ್ವಂ ಕಣ್ಣೀರಾಗಿದ್ದು. ಅವರಿಗೆ ಮೋದಿ ಸಾಂತ್ವನ ಹೇಳಿದ್ದಾರೆ.

ರಾಜಾಜಿ ಹಾಲ್ ಮುಂದೆ ಅಮ್ಮನ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ನೆರೆದಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಇಂದು ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 4.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.