ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಸಲಹೆಗಳು

Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ನಿರಂತರವಾಗಿ ಹಣಕಾಸಿನ ವಹಿವಾಟು ನಡೆಸುವವರಿಗೆ ಕ್ರೆಡಿಟ್‌ ಕಾರ್ಡ್‌ ಬಳಕೆ ಅನಿವಾರ್ಯ ಮತ್ತು ಅಗತ್ಯ ಎನ್ನುವಂತಾಗಿದೆ.
 
ಚಿಲ್ಲರೆ ಅಂಗಡಿಯಲ್ಲಿನ ವಹಿವಾಟಿಗೆ, ಆನ್‌ಲೈನ್‌ ಮೂಲಕ ಖರೀದಿಗೆ, ದೂರವಾಣಿ ಬಿಲ್‌ ಪಾವತಿಸಲು, ವಿದ್ಯುತ್‌ ಬಿಲ್‌, ವಿಮಾನದ ಟಿಕೆಟ್‌ಗೆ ಮತ್ತು ಹೋಟೆಲ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ಗಳನ್ನು ದೇಶದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಸಾಲದ ಇತಿಹಾಸ ಮತ್ತು ಸಾಲದ ಅಂಕಗಳಿಗೆ ಪರಿಗಣಿಸುವುದರಿಂದ ಕ್ರೆಡಿಟ್‌ ಕಾರ್ಡ್‌ ಬಳಕೆಯಲ್ಲಿ ಎಚ್ಚರಿಕೆಯೂ ಅಗತ್ಯ.
 
ಆದರೆ, ಜವಾಬ್ದಾರಿಯಿಂದ ಮತ್ತು ಜಾಣತನದಿಂದ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿದರೆ ಹೆಚ್ಚಿನ ಅನುಕೂಲಗಳಿವೆ. ಇದರಿಂದ ಗ್ರಾಹಕರ ಸಿಐಬಿಐಎಲ್‌ ವರದಿಯೂ ಉತ್ತಮವಾಗಿರುತ್ತದೆ. ಜತೆಗೆ ಹೆಚ್ಚಿನ ಅಂಕಗಳನ್ನು ಪಡೆಯಬಹುದು.
 
ಸುರಕ್ಷಿತ ಬಳಕೆ ಸಲಹೆ 
* ಕ್ರೆಡಿಟ್‌ ಕಾರ್ಡ್‌ ಬಳಸಿದಾಗ ವಿಧಿಸುವ ಬಡ್ಡಿ ದರದ ಬಗ್ಗೆ ಸಂಪೂರ್ಣ ವಿವರಗಳನ್ನು ಗ್ರಾಹಕರು ಪಡೆದುಕೊಳ್ಳಬೇಕು. ಯಾವ ಅವಧಿಯಲ್ಲಿ ಬಡ್ಡಿ ದರ ಅನ್ವಯವಾಗುತ್ತದೆ ಮತ್ತು ಹೆಚ್ಚುವರಿ ಶುಲ್ಕದ ಬಗ್ಗೆ ಮಾಹಿತಿ ಗೊತ್ತಿರಬೇಕು. 
 
ಬಡ್ಡಿ ದರಗಳನ್ನು ಕಡಿಮೆ ಮಾಡುವಂತೆ ಬ್ಯಾಂಕ್‌ಗಳ ಜತೆ ಸಂಧಾನ ನಡೆಸಲು ಅವಕಾಶವಿದೆ ಎನ್ನುವುದು  ಹಲವು ಗ್ರಾಹಕರಿಗೆ ಗೊತ್ತಿಲ್ಲ. ಹೀಗಾಗಿ ಕ್ರೆಡಿಟ್‌ ಕಾರ್ಡ್‌ ಪಡೆಯುವಾಗ ಸಮಗ್ರ ವಿವರಗಳನ್ನು ತಿಳಿದುಕೊಳ್ಳಬೇಕು.
 
* ಸಕಾಲಕ್ಕೆ ಕ್ರೆಡಿಟ್‌ ಕಾರ್ಡ್‌ಗೆ ಬಾಕಿ ಉಳಿದಿರುವ ಮೊತ್ತ ಪಾವತಿಸಬೇಕು. ಪ್ರತಿ ತಿಂಗಳು ಸಕಾಲಕ್ಕೆ ಕ್ರೆಡಿಟ್‌ ಕಾರ್ಡ್‌ನ ಬಾಕಿ ಉಳಿಯುವ ಮೊತ್ತವನ್ನು ಪಾವತಿಸಬೇಕು. ಇದರಿಂದ ಹೆಚ್ಚಿನ ಬಡ್ಡಿ ಪಾವತಿಸುವುದು ತಪ್ಪುತ್ತದೆ.
 
* ಅನಗತ್ಯವಾಗಿ ಹೆಚ್ಚಿನ ಕ್ರೆಡಿಟ್‌ ಕಾರ್ಡ್‌ಗಳನ್ನು ಪಡೆಯಬಾರದು. ಬ್ಯಾಂಕ್‌ಗಳಿಂದ ಅನಗತ್ಯವಾಗಿ ಹಲವು ಕ್ರೆಡಿಟ್‌ ಕಾರ್ಡ್‌ಗಳನ್ನು ಪಡೆದುಕೊಳ್ಳಬಾರದು. ಇದು ಕ್ರೆಡಿಟ್‌ ವರದಿಯ ‘ತನಿಖೆ’ ವಿಭಾಗದಲ್ಲಿ ನಮೂದಾಗುತ್ತದೆ. ಜತೆಗೆ ಹಲವು ಕಾರ್ಡ್‌ಗಳ ನಿರ್ವಹಣೆ ಕಷ್ಟಕರ. ಕೆಲವು ಕಾರ್ಡ್‌ಗಳ ಸಾಲಕ್ಕೆ ಹಣ ಪಾವತಿಸುವುದು ವಿಳಂಬವಾಗಬಹುದು. ಜತೆಗೆ ನಿಧಾನವಾಗಿ ಗ್ರಾಹಕರು ಸಾಲದ ಸುಳಿಯಲ್ಲಿ ಸಿಲುಕಬಹುದು.
 
ಸಾಲದ ಮಿತಿ ಬಗ್ಗೆ ಗಮನ ಇರಲಿ 
ಗ್ರಾಹಕರ ಖಾತೆಯಲ್ಲಿ ಸಾಕಷ್ಟು ಹಣವಿದ್ದರೆ ಕ್ರೆಡಿಟ್‌ ಕಾರ್ಡ್‌ನ ಅತಿ ಹೆಚ್ಚು ಬಳಕೆ  ಬಗ್ಗೆ ನಕಾರಾತ್ಮಕವಾಗಿ ಪರಿಣಾಮ ಬೀರುವುದಿಲ್ಲ. 
 
ಜಾಣತನದಿಂದ ಹಣಕಾಸಿನ ವಹಿವಾಟು ಕೈಗೊಳ್ಳಿ:
ವೈಯಕ್ತಿಕ ಹಣಕಾಸಿನ ವಹಿವಾಟನ್ನು ಜಾಣತನದಿಂದ ಹೇಗೆ ಮಾಡಬಹುದು ಎನ್ನುವ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳಿ. ಹಣವನ್ನು ಹೇಗೆ ಖರ್ಚು ಮಾಡಬೇಕು ಎನ್ನುವ ಬಗ್ಗೆ ಮುಂದಾಲೋಚನೆ ರೂಪಿಸಿಕೊಳ್ಳಿ.
 
ನಿರಂತರವಾಗಿ ಸಿಐಬಿಐಎಲ್‌ (ಸಿಬಿಲ್‌) ಸ್ಕೋರ್‌ ಮತ್ತು ವರದಿಯನ್ನು ನೋಡುತ್ತಿರಬೇಕು. ಇದರಿಂದ ಹಣಕಾಸಿನ ನಿರ್ವಹಣೆ ಹೇಗೆ ನಡೆಯುತ್ತಿದೆ ಎನ್ನುವುದು ತಿಳಿಯುತ್ತದೆ. ಜತೆಗೆ ನಿಮ್ಮ ಕಾರ್ಡ್‌ಗಳಿಂದ ಕಳ್ಳತನ ನಡೆಸುವ ಸಾಧ್ಯತೆ ಅಥವಾ ತಪ್ಪು ಮಾಹಿತಿ  ದಾಖಲಾಗುತ್ತಿರುವ ಬಗ್ಗೆಯೂ ತಿಳಿದುಕೊಳ್ಳಬಹುದು.
 
ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಗ್ರಾಹಕರು ಈ ಸರಳ ಅಂಶಗಳನ್ನು ಅನುಸರಿಸುವುದು ಉತ್ತಮ. ಇದರಿಂದ ಸಾಲದ ಸುಳಿಯಲ್ಲಿ ಸಿಲುಕುವುದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ.
– ಹರ್ಷಲಾ ಚಂದೊರ್ಕರ್‌
ಸಿಐಬಿಐಎಲ್‌ (ಸಿಬಿಲ್‌) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT