ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ

ಬುಧವಾರ, 7–12–1966
Last Updated 6 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸ್ಥಾನಬದ್ಧತೆ ಶಾಸನಕ್ಕೆ ರಾಜ್ಯಸಭೆ ಒಪ್ಪಿಗೆ: ವಿರೋಧ ಪಕ್ಷಗಳ ಎಲ್ಲರ ಸಭಾತ್ಯಾಗ
ನವದೆಹಲಿ, ಡಿ. 6–
ಮುನ್ನೆಚ್ಚರಿಕೆಯ ಸ್ಥಾನಬದ್ಧತೆ ಶಾಸನದ ಅವಧಿಯನ್ನು ಇನ್ನು ಮೂರು ವರ್ಷಗಳ ಕಾಲ (1969ರ ಕೊನೆಯವರೆಗೆ) ವಿಸ್ತರಿಸುವ ಮಸೂದೆಯನ್ನು ರಾಜ್ಯಸಭೆಯು ಇಂದು ಅಂಗೀಕರಿಸಿತು. ಇದರಿಂದ ಈ ಶಾಸನಕ್ಕೆ ಮತ್ತೆ ಮೂರು ವರ್ಷ ಕಾಲ ಜೀವದಾನ ನೀಡಲು ಪಾರ್ಲಿಮೆಂಟ್‌ ಅನುಮೋದನೆ ನೀಡಿದಂತಾಯಿತು.

ಲೋಕಸಭೆಯು ಅಂಗೀಕರಿಸಿರುವ ಈ ಮಸೂದೆಯನ್ನು ರಾಜ್ಯಸಭೆಯು ಅಂಗೀಕರಿಸುವುದಕ್ಕೆ ಮುಂಚೆ, ‘ಅತ್ಯಂತ ಕರಾಳವಾದ ಈ ಶಾಸನದ ವಿರುದ್ಧ ಪ್ರತಿಭಟನೆ ಸೂಚಿಸಲು’ ಇಡೀ ವಿರೋಧ ಪಕ್ಷವು ಸಭಾತ್ಯಾಗ ಮಾಡಿತು.

***
ಬೇಡಿಕೆ ಈಡೇರದೆ ಮುಷ್ಕರ ಅಂತ್ಯವಿಲ್ಲವೆಂದು ಐ.ಟಿ.ಐ. ಕಾರ್ಮಿಕರು
ಬೆಂಗಳೂರು, ಡಿ. 6–
ನಗರದ ಟೆಲಿಫೋನ್‌ ಕಾರ್ಖಾನೆಯ ಸುಮಾರು ಹತ್ತು ಸಾವಿರ ಮಂದಿ ಕಾರ್ಮಿಕರು ನಡೆಸುತ್ತಿರುವ ಶಾಂತಿಯುತ ಬೈಠಕ್‌ ಮುಷ್ಕರವು ಇಂದು ನಾಲ್ಕನೆಯ ದಿನವನ್ನು ತಲುಪಿತು. ‘ಬೇಡಿಕೆಗಳು ಈಡೇರದೆ ಮುಷ್ಕರ ಹಿಂತೆಗೆದುಕೊಳ್ಳುವಂತಿಲ್ಲ’ ಎನ್ನುವ ನಿಲುವಿಗೆ ಕಾರ್ಮಿಕರು ಅಂಟಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT