ಚೆನ್ನೈ: ಡಿಸೆಂಬರ್ 5ರಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿಧನರಾದ ಸುದ್ದಿ ಕೇಳಿ ಆಘಾತದಿಂದ ಮೃತಪಟ್ಟ 203 ಮಂದಿಯ ಮಾಹಿತಿಯನ್ನು ಎಐಎಡಿಎಂಕೆ ಶನಿವಾರ ಪ್ರಕಟಿಸಿದೆ.

ತಮಿಳುನಾಡಿನ ಚೆನ್ನೈ, ವೆಲ್ಲೂರ್, ತಿರುವಲ್ಲೂರ್, ತಿರುವಣ್ಣಾಮಲೈ, ಕಡಲೂರ್, ಕೃಷ್ಣಗಿರಿ, ಈರೋಡ್ ಮತ್ತು ತಿರುಪೂರ್ ಮೊದಲಾದ ಜಿಲ್ಲೆಗಳಲ್ಲಿ ಮೃತಪಟ್ಟ ಜನರ ಹೆಸರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಹಿರಂಗ ಪಡಿಸಲಾಗಿದೆ.

ಪಕ್ಷದ ಕಚೇರಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದ ನಂತರ ಮೃತರ ಕುಟುಂಬಗಳಿಗೆ ತಲಾ ₹3 ಲಕ್ಷ ಪರಿಹಾರ ಧನ ಘೋಷಿಸಲಾಗಿದೆ.

ಜಯಲಲಿತಾ ಅವರ ನಿಧನ ಸುದ್ದಿ ಕೇಳಿ ಮೃತಪಟ್ಟಿದ್ದ 77 ಮಂದಿಯ ಕುಟುಂಬಕ್ಕೆ ಈಗಾಗಲೇ ಪರಿಹಾರ ಧನ ನೀಡಲಾಗಿದೆ ಎಂದು ಎಐಎಡಿಎಂಕೆ ಪಕ್ಷದ ಮೂಲಗಳು ಹೇಳಿವೆ.

ಇಲ್ಲಿಯವರೆಗೆ ಜಯಾ ನಿಧನದ ಆಘಾತದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 280 ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.