ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
1) ವಿಶ್ವದಲ್ಲಿ ‘ಬೈಕಾಲ್’ ಆಳವಾದ ಸಿಹಿ ನೀರಿನ ಸರೋವರ ಎಂದು ಖ್ಯಾತಿಯಾಗಿದೆ. ಇದು ಈ ಕೆಳಕಂಡ ಯಾವ ದೇಶದಲ್ಲಿ ಹರಿಯುತ್ತದೆ?
a) ರಷ್ಯಾ      
b) ಜರ್ಮನಿ
c) ಅಮೆರಿಕ  
d) ದಕ್ಷಿಣ ಆಫ್ರಿಕಾ
 
**
2) ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವುದರಿಂದ ಈ ದೇಶವನ್ನು ‘ ಅತಿದೊಡ್ಡ ದ್ವೀಪಸಮೂಹ ದೇಶ’ ಎಂದು ಕರೆಯುತ್ತಾರೆ. ಆ ದೇಶ ಯಾವುದು?
a) ಜಪಾನ್  
b) ಇಂಡೋನೇಷ್ಯಾ
c) ಶ್ರೀಲಂಕಾ  
d) ಭಾರತ (ಲಕ್ಷದ್ವೀಪ)
 
**
3) ನ್ಯಾಯಕ್ಕೆ ಸಂಬಂಧಿಸಿದಂತೆ ಬ್ಯಾಬಿಲೋನಿಯನ್ನರ ದೊರೆ ಹಮ್ಮುರಬಿ ರೂಪಿಸಿದ ಕಾಯ್ದೆಗಳನ್ನು ಯಾವ ಹೆಸರಿನಿಂದ ಕರೆಯಲಾಗುತ್ತದೆ?
a) ಹಮ್ಮುರಬಿ ಶಾಸನ
b) ಹಮ್ಮುರಬಿ ಕಿತಾಬ್
c) ಹಮ್ಮುರಬಿ ಕೋಡ್
d) ಹಮ್ಮುರಬಿ ನ್ಯಾಯ
 
**
4) ಕ್ರಿ.ಶ. 1230ರಲ್ಲಿ ದೆಹಲಿ ಸಿಂಹಾಸನವನ್ನೇರಿದ ಮೊದಲ ಹಾಗೂ ಏಕೈಕ ಮುಸ್ಲಿಂ ರಾಣಿ ಯಾರು?
a) ಮುಮ್ತಾಜ್ ಬೇಗಂ
b) ಪಾತಿಮಾ ಬೀಬಿ
c) ಅಲ್ತೂನಿ ಸುಲ್ತಾನ    
d) ರಜಿಯಾ ಸುಲ್ತಾನ
 
**
5) ಭಾರತದ ರಾಷ್ಟ್ರಲಾಂಛನದಲ್ಲಿ ಈ  ಕೆಳಕಂಡ ಯಾವ ಪ್ರಾಣಿ ಕಾಣಸಿಗುವುದಿಲ್ಲ?
a) ಚಿರತೆ            
b) ಎತ್ತು
c) ಕುದುರೆ          
d) ಸಿಂಹ
 
**
6) ಸಾಹಿತಿ ಬೊಳುವಾರು ಮಹಮ್ಮದ್ ಕುಂಙ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕಾರ ಬಂದಿದೆ.?
a) ಓದಿರಿ            
b) ಸ್ವಾತಂತ್ರ್ಯದ ಓಟ
c) ಆಕಾಶದೀಪ    
d) ಅನಾಥ
 
**
7) ಭಾರತದಲ್ಲಿ ರೇಷ್ಮೆ ವಹಿವಾಟಿನ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಈ ಕೆಳಕಂಡ ಯಾವ ನಗರದಲ್ಲಿ ಇದೆ?
a) ವಿಜಯವಾಡ    
b) ಕಾಂಜೀವರಂ
c) ರಾಮನಗರ      
d) ಗುವಾಹಟಿ
 
**
8)  ರಾಜ್ಯದಲ್ಲಿ ನೆಲೆಸಿರುವ ಬುಡಕಟ್ಟು ಸೋಲಿಗ ಜನಾಂಗದವರ ಕುಲದೈವ ಯಾವುದು?
a) ಮಹದೇಶ್ವರ
b) ಮಂಟೇಸ್ವಾಮಿ
c) ಸಿದ್ಧಪಾಜಿ      
d) ಬಿಳಿಗಿರಿ ರಂಗನಾಥಸ್ವಾಮಿ
 
**
9)ರಾಜ್ಯಸಭೆಯು ಸಂಸತ್ತಿನ ಮೇಲ್ಮನೆಯಾದರೆ, ಸಂಸತ್ತಿನ ಕೆಳಮನೆ ಯಾವುದು?
a) ಲೋಕಸಭೆ    
b) ವಿಧಾನಸಭೆ
c) ಪರಿಷತ್ ಸಭೆ  
d) ಯಾವುದು ಇಲ್ಲ
 
**
10) ಹಸಿರು ಕ್ರಾಂತಿ ಮೊದಲು ಈ ಕೆಳಕಂಡ ಯಾವ ರಾಜ್ಯಗಳಲ್ಲಿ ಉಂಟಾಯಿತು?
a) ಪಂಜಾಬ್-ಹರಿಯಾಣ  
b) ಉತ್ತರ ಪ್ರದೇಶ-ದೆಹಲಿ
c) ತಮಿಳುನಾಡು-ಕರ್ನಾಟಕ  
d) ರಾಜಸ್ತಾನ-ಗುಜರಾತ್
 
*
ಉತ್ತರಗಳು 1-a, 2-b, 3-c, 4-d, 5-a, 6-b, 7-c, 8-d, 9-a, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT