ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬ್ಬರ್‌ ಸಸಿ ನಾಟಿ ಹೀಗಿರಲಿ...

ಕೃಷಿ ಟಿಪ್ಸ್‌
Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ರಬ್ಬರ್ ಬೆಳೆಯಬೇಕಾದರೆ ಸ್ವಲ್ಪ ಕಾಡು ಕಡಿದು ಗಿಡಗಳ ಮೇಲೆ ಬಿಸಿಲು ಬೀಳುವಂತೆ ಮಾಡಬೇಕು. ಸಾಧ್ಯವಾದ ಕಡೆಗಳಲ್ಲಿ ಭೂಮಿ ಸಮತಟ್ಟು ಮಾಡಿ. 20/20 ಅಡಿ ಅಂತರದಲ್ಲಿ ಸುಮಾರು ಎರಡೂವರೆ ಅಡಿ ಚೌಕಾಕಾರ ಅಳತೆ ಗುಂಡಿ ತೆಗೆಯಿರಿ. ಈ ಗುಂಡಿಗಳಿಗೆ ಕೊಟ್ಟಿಗೆ ಗೊಬ್ಬರ, ಹೊಸ ಮಣ್ಣು ಹಾಕಿ. ಜೂನ್ ತಿಂಗಳಲ್ಲಿ ಬೇಕಾದ ತಳಿ ಆಯ್ಕೆ ಮಾಡಿ ನಾಟಿ ಮಾಡಿ. ಆರ್‌ಆರ್‌ಐಐ-105 ಮತ್ತು ಜಿಟಿ-1 ಕಸಿ ಕಟ್ಟಿದ ರಬ್ಬರ್ ಸಸಿ ಉತ್ತಮ.

ಒಂದು ಎಕರೆಗೆ ಸುಮಾರು 200 ಗಿಡಗಳನ್ನು ನಾಟಿ ಮಾಡಬಹುದು. ಗಿಣ್ಣು ಕಟ್ಟಿದ ಸಸಿಗಳನ್ನು ನಾಟಿ ಮಾಡುವುದಾದರೆ ಅವನ್ನು ನರ್ಸರಿಯಿಂದ ತಂದ ಮೇಲೆ ಪಾಲಿಥೀನ್ ಚೀಲಗಳಲ್ಲಿ ಬೆಳೆಸಿಕೊಳ್ಳಿ. ತುಂಬ ಫಲವತ್ತಾದ ಜಮೀನಾಗಿದ್ದರೆ 15/15 ಅಡಿ ಅಂತರ ಸಾಕು.  ರಬ್ಬರ್ ಗಿಡಗಳಿಗೆ ನೀರು ಪೂರೈಸುವುದು ಕಷ್ಟ.

ಆದ್ದರಿಂದ ರಬ್ಬರ್ ಗಿಡಗಳನ್ನು ನೆಟ್ಟಿರುವ ಜಾಗದಲ್ಲಿ ಮಳೆ ನೀರನ್ನು ಇಂಗಿಸಿ, ಭೂಮಿಯ ನೀರಿನ ಮಟ್ಟವನ್ನು ಹೆಚ್ಚಿಸಬೇಕಾಗುತ್ತದೆ. ರಬ್ಬರ್ ತೋಟದಲ್ಲಿ ಪ್ರಾರಂಭದ ವರ್ಷದಲ್ಲಿ ನೆಲದ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಹಬ್ಬುವ ಅಲಸಂದೆ ಜಾತಿಯ ಬಳ್ಳಿಗಳನ್ನು ಅಥವಾ ಬೇರೆ ಯಾವುದಾದರೂ ಬಳ್ಳಿಗಳನ್ನು ಬೆಳೆಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT