ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬಿಗಳಾಗಿ; ಯುವಜನತೆಗೆ ಸಲಹೆ

Last Updated 28 ಡಿಸೆಂಬರ್ 2016, 5:01 IST
ಅಕ್ಷರ ಗಾತ್ರ

ಭಾರತೀನಗರ: ಯುವಜನರು ಇತರರಿಗೆ ಅವಲಂಬಿತರಾಗದೆ ಸ್ವಸಾಮರ್ಥ್ಯದಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ದೊಡ್ಡ ಬೋರಯ್ಯ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ನೇಹಜೀವಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನೆ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಸ್ಥಿರ ಬದುಕು ರೂಪಿಸಿಕೊಳ್ಳಲು ಆರ್ಥಿಕ ಸ್ವಾವಲಂಬನೆ ಮುಖ್ಯ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಂಬುದಿಲ್ಲ. ಕೆಲಸ ಮಾಡುವವನಿಗೆ ಬೇಕಾದಷ್ಟು ಅವಕಾಶಗಳು ಇವೆ. ಅವುಗಳನ್ನು ಹುಡುಕಿ ಮಾಡುವ ತಾಳ್ಮೆ ಯನ್ನು ಯುವಜನರು ಬೆಳೆಸಿ ಕೊಳ್ಳಬೇಕು. ದೈಹಿಕ ಹಾಗೂ ಮಾನಸಿಕ ಆಲಸ್ಯದಿಂದ ಹೊರಬರಬೇಕು ಎಂದರು.

ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಯುವಜನರು ಪ್ರಯತ್ನಿಸಬೇಕು. ಗುರು ಹಿರಿಯರು, ಮಹಿಳೆಯರನ್ನು ಗೌರವ ಭಾವನೆಯಿಂದ ಕಾಣಬೇಕು. ಅವಿದ್ಯಾವಂತರಿಗೆ ಮಾಹಿತಿ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಜೈಭೀಮ್ ದಲಿತ ಜಾಗೃತಿ ಸಮಿತಿ ಅಧ್ಯಕ್ಷ ಚಿಕ್ಕರಸಿನಕೆರೆ ಸಿ. ಶಿವಲಿಂಗಯ್ಯ ಮಾತನಾಡಿ, ಸಾಮಾಜಿಕ ಬದಲಾವಣೆ ಯುವಜನರಿಂದ ಮಾತ್ರ ಸಾಧ್ಯ. ದ್ವೇಷ ಅಸೂಯೆಗಳನ್ನು ಬದಿಗಿಟ್ಟು, ಪ್ರೀತಿ ಕರುಣೆ ಅಳವಡಿಸಿಕೊಂಡು ದಮನಿತರ ಕಲ್ಯಾಣಕ್ಕೆ ಮುಂದಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಯಕ ರಾಮನಗರ ಜೆ.ಕೆ.ಗಂಗಾಧರಯ್ಯ ಅವರು ಗೀತಗಾಯನ ನಡೆಸಿಕೊಟ್ಟರು. ಗ್ರಾ.ಪಂ ಸದಸ್ಯ ಜೆಸಿಬಿ ಶಿವಲಿಂಗ, ಮರಿಸ್ವಾಮಿ, ಮಲ್ಲಯ್ಯ, ಎಸ್.ಎನ್.ಶಿವಲಿಂಗಯ್ಯ, ರಾಮಚಂದ್ರ, ಎಸ್.ಪಿ.ರಮೇಶ್, ಎಸ್. ಮಹದೇವಸ್ವಾಮಿ, ವಸಂತಕುಮಾರ, ಎಸ್.ಎನ್.ನಂಜುಂಡಸ್ವಾಮಿ, ಎಸ್. ಎನ್.ಪ್ರಕಾಶ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT