ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಿಂದ ಸಹೋದರತ್ವ ವೃದ್ಧಿ: ಐಜಿಪಿ

ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ; ದಾಸರ, ಎ.ಎಸ್.ಪಾಟೀಲಗೆ ವೈಯಕ್ತಿಕ ಚಾಂಪಿಯನ್
Last Updated 28 ಡಿಸೆಂಬರ್ 2016, 5:48 IST
ಅಕ್ಷರ ಗಾತ್ರ

ಬಾಗಲಕೋಟೆ:  ‘ವಾರ್ಷಿಕ ಕ್ರೀಡಾಕೂಟ ಪೊಲೀಸರ ಪಾಲಿಗೆ ಹಬ್ಬವಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂಬ ಬೇಧವಿಲ್ಲದೇ ಎಲ್ಲರೂ ಸೇರಿ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸಹೋದರ ಭಾವನೆ ಬೆಳೆಯುತ್ತದೆ’ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಕೆ.ರಾಮಚಂದ್ರರಾವ್ ಅಭಿಪ್ರಾಯಪಟ್ಟರು.

ಇಲ್ಲಿನ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂದೋಬಸ್ತ್ ಕಾರ್ಯಗಳ ಒತ್ತಡದ ಕಾರಣ ಪೊಲೀಸರು ಸಾಮಾನ್ಯವಾಗಿ ಬೇರೆ ಹಬ್ಬಗಳನ್ನು ಆಚರಣೆ ಮಾಡುವುದಿಲ್ಲ ಹಾಗಾಗಿ ಅವರಿಗೆ ವಾರ್ಷಿಕ ಕ್ರೀಡಾಕೂಟವೇ ದೊಡ್ಡ ಹಬ್ಬ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆಗೆ 2016ನೇ ವರ್ಷ ಅತ್ಯಂತ ಶುಭದಾಯಕ ಎಂಬಂತಾಗಿದೆ. ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ, ದೊಡ್ಡ ಪ್ರಮಾಣದ ಅಪರಾಧ ಚಟುವಟಿಕೆಗಳು ಹಾಗೂ ಅವಘಡಗಳು ನಡೆದಿಲ್ಲ. ಸಣ್ಣಪುಟ್ಟ ಅಪರಾಧ ಚಟುವಟಿಕೆಗಳು ನಡೆದಿದ್ದರೂ ಅವುಗಳನ್ನು ಪತ್ತೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ತೋರಿದ ಎಸ್‌ಪಿ ಎಂ.ಎನ್.ನಾಗರಾಜ್ ಹಾಗೂ  ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಎಸ್‌ಪಿ ನಾಗರಾಜ ಅವರಿಗೆ ಡಿಐಜಿ ಹುದ್ದೆಗೆ ಬಡ್ತಿ ದೊರೆತಿದೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭಾಶಯ ಕೋರಿದರು. ಮುಕ್ತಾಯ ಸಮಾರಂಭಕ್ಕೆ ಮುನ್ನ ಪೊಲೀಸರು ಮತ್ತು ಪತ್ರಕರ್ತರ ಆಟೋಟ ಚಟುವಟಿಕೆಗಳನ್ನು ಐಜಿಪಿ ವೀಕ್ಷಿಸಿದರು. ಕ್ರೀಡಾಕೂಟದಲ್ಲಿ ಸಾಧನೆ ತೋರಿದವರಿಗೆ ಬಹುಮಾನ ವಿತರಣೆ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ನಾಗರಾಜ, ಎಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎನ್.ರುದ್ರೇಶ ಮತ್ತಿತರರು ಪಾಲ್ಗೊಂಡಿದ್ದರು.

ಕೊನೆಯ ದಿನದ ಫಲಿತಾಂಶ ವಿವರ: ಪುರುಷರ ವಿಭಾಗ: 100 ಮೀಟರ್ ಓಟ: ರಾಜು ಡಿ.ದಾಸರ (ಡಿಎಆರ್ ಕಾನ್‌ಸ್ಟೆಬಲ್)–1, ಎಂ.ಎನ್.ಕೊಡೆಶಿ (ಅಪರಾಧ ವಿಭಾಗ)–2, ಎಸ್.ಎನ್.ಮೊರಬದ (ಡಿಎಆರ್)–3.

400 ಮೀಟರ್ ಓಟ: ರಾಜು ಡಿ.ದಾಸರ (ಡಿಎಆರ್)–1, ಪಿ.ಡಿ.ಕಂಬಾರ (ಡಿಎಆರ್)–2, ಎಸ್.ಎಸ್.ಪಾಟೀಲ (ಡಿಎಆರ್)–3.

1500 ಮೀಟರ್ ಓಟ:  ಎಸ್.ಎನ್.ಮರಬದ (ಡಿಎಆರ್)–1, ಎಸ್.ಎಸ್.ಪಾಟೀಲ (ಡಿಎಆರ್)–2, ಬಿ.ವೈ.ಗುರಿಕಾರ–3. 4x100 ಮೀಟರ್ ರಿಲೇ: ಡಿಎಆರ್ ತಂಡ –1, ಬಾಗಲಕೋಟೆ ಶಹರ–2, ಬಾದಾಮಿ–3. 4x400ಮೀಟರ್ ರಿಲೇ:  ಡಿಎಆರ್ ತಂಡ–1, ಹುನಗುಂದ ವೃತ್ತ–2, ಬಾಗಲಕೋಟೆ

ಶಹರ–3. ಟ್ರಿಪಲ್ ಜಂಪ್:  ರಾಜು ದಾಸರ (ಡಿಎಆರ್)–1, ವಿ.ಎಸ್.ಒಡೆಯರ (ಸಂಚಾರ ವಿಭಾಗ–ಬಾಗಲಕೋಟೆ)–2, ಮೌಲಾ ಎಸ್.ನದಾಫ

(ಡಿಎಆರ್)–3. ಜಾವೆಲಿನ್ ಥ್ರೋ:  ಮೌಲಾ ಎಸ್.ನದಾಫ (ಡಿಎಆರ್)–1, ವಿ.ಎಸ್.ಒಡೆಯರ (ಅಪರಾಧ ವಿಭಾಗ– ಬಾಗಲಕೋಟೆ)–2, ವೈ,ಬಿ.ಗೋಸರವಾಡ (ಮುಧೋಳ ಠಾಣೆ)–3. ವಾಲಿಬಾಲ್: ಬಾಗಲಕೋಟೆ ಶಹರ ಮತ್ತು ಗ್ರಾಮೀಣ ವೃತ್ತ–1, ಡಿಎಆರ್–2. ಹಗ್ಗಜಗ್ಗಾಟ: 
ಬಾಗಲಕೋಟೆ–1, ಜಮಖಂಡಿ–2. ಪೊಲೀಸ್ ಅಧಿಕಾರಿಗಳ ವಿಭಾಗ (40 ವರ್ಷ ಮೇಲ್ಪಟ್ಟವರು): 100 ಮೀಟರ್ ಓಟ: ಎಸ್.ಎನ್.ಅಂಬಿಗೇರ (ಪಿಎಸ್ಐ–ಲೋಕಾಪುರ)–1,ಯು.ಬಿ.ಚಿಕ್ಕಮಠ (ಪಿಐ–ಡಿಸಿಬಿ)–2, ಸಿ.ಬಿ.ಕಿರಶ್ಯಾಳ (ಪಿಎಸ್ಐ–ಬಾದಾಮಿ)–3. 200 ಮೀಟರ್ ಓಟ (40 ವರ್ಷ ಒಳಗಿನವರು): ಬಿ.ಎಂ.ಲಕ್ಷ್ಮೀಪ್ರಸಾದ್ (ಎಎಸ್‌ಪಿ)–1, ಜೆ.ಎಚ್.ಶೇಖ್ (ಆರ್‌ಪಿಐ–ಡಿಎಆರ್)–2, ಎಸ್.ಎಂ.ಅವಜಿ (ಪಿಎಸ್‌ಐ–ಕೆರೂರ)–3.

ಬ್ಯಾಡ್ಮಿಂಟನ್ (ಸಿಂಗಲ್ಸ್):  ಚಿದಂಬರ (ಪಿಐ–ಡಿಎಸ್‌ಬಿ)–1, ಎಸ್.ಬಿ.ಗಿರೀಶ (ಪಿಐ–ಡಿಎಸ್‌ಬಿ)–2. ಬ್ಯಾಡ್ಮಿಂಟನ್ (ಡಬಲ್ಸ್):  ಎಸ್.ಬಿ.ಗಿರೀಶ ಹಾಗೂ ವಿ.ಎನ್.ಖಡಿ–1, ತುಳಸಿಗೇರಿ ಹಾಗೂ ಜೆ.ಎಚ್.ಶೇಖ್–2. ಬ್ಯಾಡ್ಮಿಂಟನ್ (ಸಿಂಗಲ್ಸ್–ಪಿಎಸ್‌ಐ): ಲಕ್ಷ್ಮೀಕಾಂತ ಬಾನಿಕೋಲ (ಸಾವಳಗಿ)–1, ಐ.ಆರ್.ಪಟ್ಟಣಶೆಟ್ಟಿ (ಬಾಗಲಕೋಟೆ ಶಹರ)–2. ಬ್ಯಾಡ್ಮಿಂಟನ್ (ಡಬಲ್ಸ್):  ಐ.ಆರ್.ಪಟ್ಟಣಶೆಟ್ಟಿ ಹಾಗೂ ಲಕ್ಷ್ಮೀಕಾಂತ ಬಾನಿಕೋಲ–1, ಪ್ರಭು ಗಂಗನಹಳ್ಳಿ ಹಾಗೂ ಪ್ರದೀಪ ತಳ್ಳಿಕೇರಿ–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT