ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಲ್ವೆ ಮೇಲ್ಸೇತುವೆಗೆ ಕಪಿಲೇಶ್ವರ ಹೆಸರೇ ಅಂತಿಮ’

ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ; ಜಿಲ್ಲಾಧಿಕಾರಿ ಪಾಲಿಕೆಯ ಆಯುಕ್ತರಿಗೆ ತಿಳಿಸಲು ನಿರ್ಧಾರ
Last Updated 31 ಡಿಸೆಂಬರ್ 2016, 4:37 IST
ಅಕ್ಷರ ಗಾತ್ರ

ಬೆಳಗಾವಿ: ಇತ್ತೀಚೆಗೆ ಉದ್ಘಾಟನೆ ಯಾಗಿರುವ ನಗರದ ಕಪಿಲೇಶ್ವರ ರೇಲ್ವೆ ಮೇಲ್ಸೇತುವೆಯ ನಾಮಕರಣವನ್ನು ಇದೇ ಹೆಸರಿನಲ್ಲಿ ಮಾಡಬೇಕೆಂದು ಕನ್ನಡ ಪರ ಸಂಘಟನೆಯ ಕಾರ್ಯ ಕರ್ತರು ಒತ್ತಾಯಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹಲವು ಜನ ಕನ್ನಡ ಪರ ಸಂಘಟಕರು ಭಾಗವಹಿಸಿದ್ದರು. ತಮ್ಮ ತೀರ್ಮಾನ ವನ್ನು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೋಮವಾರ ತಿಳಿಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು.

ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ  ಮಹಾದೇವ ತಳವಾರ ಮಾತನಾಡಿ,  ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತು ನೀಡಿದ ಸಂಸದ ಸುರೇಶ ಅಂಗಡಿಯವರಿಗೆ ಧನ್ಯವಾದ ಸಲ್ಲಿಸಿದರು.

‘ಬೆಳಗಾವಿಯ ಅಭಿವೃಧ್ಧಿಗೆ ಸದಾ ಅಡ್ಡಗಾಲು ಹಾಕುವ ಎಂ.ಇ.ಎಸ್ ಕಾರ್ಯಕರ್ತರು ಆ ಸೇತುವೆಗೆ ಶಿವಾಜಿ ಮಹಾರಾಜರ ಹೆಸರಿಡಲು ಹೊರಟಿ ರುವುದು ಖಂಡನೀಯ. ಈ ರಸ್ತೆಗೆ ಮೊದಲಿನಿಂದಲೂ ಇದ್ದ ಕಪಿಲೇಶ್ವರ ರಸ್ತೆಯ ಹೆಸರನ್ನೇ ಮೇಲ್ಸೇತುವೆಗೆ ಇಡಬೇಕು’ ಎಂದು ಹೇಳಿದರು.

ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಯ.ರು. ಪಾಟೀಲ ಮಾತನಾಡಿ, ‘ನಮ್ಮೆಲ್ಲರಿಗೂ ಶಿವಾಜಿಯವರ ಬಗ್ಗೆ ಗೌರವವಿದೆ. ಆದರೆ ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ನಗರದಲ್ಲಿ ಅಶಾಂತ ವಾತಾವರಣ ಸೃಷ್ಟಿ ಮಾಡಲು ಶಿವಾಜಿಯವರ ಹೆಸರು ಬಳಸಿ ಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಪಿಲೇಶ್ವರ ರಸ್ತೆ ಸೂಕ್ತವಾಗಿದೆ. ಕನ್ನಡ ಸಂಘಟನೆಗಳೆಲ್ಲ ಸೇರಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಬೇಕು’ ಎಂದರು.
ಕನ್ನಡ ಹೋರಾಟಗಾರರಾದ ರಾಘ ವೇಂದ್ರ ಜೋಷಿ ಮಾತನಾಡಿ, ‘ಈ ಹಿಂದೆ ಮಹಾತ್ಮಾ ಗಾಂಧೀಯವರ ಪ್ರತಿಮೆ ಸ್ಥಾಪಿಸಿ ಉದ್ಯಾನ ಮಾಡ ಬೇಕೆಂದು ಬಿಟ್ಟ ಜಾಗದಲ್ಲಿ ರಾತೋರಾತ್ರಿ ಶಿವಾಜಿಯವರ ಮೂರ್ತಿ ತಂದು ಕೂರಿಸಲಾಗಿತ್ತು. ಇದನ್ನು ವಿರೋಧಿಸಿ ಸರ್ವೋದಯ ಸಂಘದ ಸದಸ್ಯರು ಉಪವಾಸ ಸತ್ಯಾಗ್ರಹ ಮಾಡಿದ್ದರು’ ಎಂದು ನೆನಪಿಸಿದರು.

‘ಈಗಾಗಲೇ ವಡಗಾಂವ ಪ್ರದೇಶದ ಒಂದು ಪ್ರಮುಖ ರಸ್ತೆಗೆ ಶಿವಾಜಿಯವರ ಹೆಸರು ಇಟ್ಟು ಬೋರ್ಡ್‌ ಹಾಕಿದ್ದಾರೆ. ನಗರಸೇವಕರೆಲ್ಲ ಸೇರಿ ಅಭಿವೃಧ್ಧಿಯ ಬಗ್ಗೆ ಗಮನ ಹರಿಸಿ’ ಎಂದರು.

ಮಹಾನಗರ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ‘ಕಪಿಲೇಶ್ವರ ಹೆಸರಿಡುವುದೇ ಸೂಕ್ತ. ಹಾಗೇನಾದರೂ ಒಂದು ವೇಳೆ ಮೇಯರ್‌ ಉದ್ಧಟತನ ಪ್ರದರ್ಶಿಸಿ ಶಿವಾಜಿ ಹೆಸರಿಡಲು ಮುಂದಾದರೆ ನಾವು ಅವಕಾಶ ನೀಡುವುದಿಲ್ಲ’ ಎಂದರು.

ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತ ನಾಡಿ, ಮಹಾನಗರ ಪಾಲಿಕೆ ಯನ್ನು ಸೂಪರ್‌ಸೀಡ್‌ ಮಾಡಲಿಲ್ಲ. ಏಕೆಂದರೆ ಅಭಿವೃಧ್ಧಿ ಮಾಡುವೆವು ಎಂದು ಎಲ್ಲ ಸದಸ್ಯರು ಮಂತ್ರಿಗಳಿಗೆ ಮನವಿ ಮಾಡಿದ್ದರು. ಆದರೆ ಈಗ ಅಭಿವೃದ್ಧಿ ಮರೆತು ಇಂತಹ ಕೆಲಸಕ್ಕೆ ಕೈಹಾಕಲು ಮುಂದಾಗಿದ್ದಾರೆ. ಕನ್ನಡ ಸಂಘಟನೆಗಳು ಸುಮ್ಮನೆ ಕೂರುವುದಿಲ್ಲ, ಹೋರಾಟ ಅನಿವಾರ್ಯವಾಗುತ್ತದೆ’ ಎಂದರು.

ಮಾಜಿ ಮೇಯರ್‌ ಸಿದ್ದನಗೌಡ ಪಾಟೀಲ ಮಾತನಾಡಿ, ‘ಈ ರಸ್ತೆಯ ಹೆಸರು ಕಪಿಲೇಶ್ವರ ಎನ್ನುವುದು ಪಾಲಿಕೆಯ ದಾಖಲೆಗಳಲ್ಲಿ ಈಗಾಗಲೇ ಇದೆ’ ಎಂದರು.
ಪಾಲಿಕೆಯ ಸದಸ್ಯ ದೀಪಕ ಜಮಖಂಡಿ, ವಿವಿಧ ಮುಖಂಡರಾದ ರಾಮಚಂದ್ರ ಢವಳಿ, ಬಸವರಾಜ ಸಸಾಲಟ್ಟಿ, ವೀರೇಶ ಪಂಚಾಕ್ಷರಿಮಠ, ಬಾಬು ಸಂಗೋಡಿ, ಸಂಜಯ ರಜಪೂತ, ಬಾಳು ಜಡಗಿ, ಬಲರಾಮ ಮೂಶಾನಟ್ಟಿ, ಸುರೇಶ ಕೇರಾಯಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT