ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ 2–1–1967

50 ವರ್ಷಗಳ ಹಿಂದೆ
Last Updated 1 ಜನವರಿ 2017, 19:30 IST
ಅಕ್ಷರ ಗಾತ್ರ
ಕಲ್ಕತ್ತೆಯಲ್ಲಿ ಉದ್ರಿಕ್ತ ಕ್ರೀಡಾಸಕ್ತರಿಂದ ಗಲಭೆ
ಕಲ್ಕತ್ತ, ಜ. 1– ಸ್ಥಳಾವಕಾಶಕ್ಕಿಂತ ಹೆಚ್ಚು ಟಿಕೆಟ್‌ ಮಾರಾಟ, ಕೋಪೋದ್ರಿಕ್ತ ಜನಸ್ತೋಮದಿಂದ ಈಡನ್‌ ಗಾರ್ಡನ್‌್ಸ ಕ್ರೀಡಾಂಗಣಕ್ಕೆ ಅಗ್ನಿಸ್ಪರ್ಶ, ಲಾಠಿಪ್ರಹಾರ, ಅಶ್ರುವಾಯು ಪ್ರಯೋಗ, ಭಾರತ–ವೆಸ್ಟ್‌ಇಂಡೀಸ್‌ ಟೀಮುಗಳ ನಡುವಣ ಟೆಸ್‌್ಟ ಪಂದ್ಯದ ಎರಡನೇ ದಿನದ ಆಟ ರದ್ದು, ಮಿಲಿಟರಿ ನೆರವಿನಿಂದ ಪರಿಸ್ಥಿತಿಯ ಹತೋಟಿ– ಒಟ್ಟಾರೆ ಭಾರತದ ಕ್ರಿಕೆಟ್‌ ಕ್ರೀಡೆಯ ಪಾಲಿಗೆ ಹೊಸ ವರ್ಷ ಶುಭಪ್ರದವಾಗಿ ಆರಂಭವಾಗಲಿಲ್ಲ.
 
 **
ಲಲನೆಯರ ಸಂಖ್ಯೆ ರಾಜ್ಯದಲ್ಲಿ ಇಳಿಮುಖ
ಬೆಂಗಳೂರು, ಜ. 1– ಮೈಸೂರು ರಾಜ್ಯದಲ್ಲಿ ಸ್ತ್ರೀಯರ ಸಂಖ್ಯೆ ಇಳಿಮುಖವಾಗುತ್ತಿರುವುದು 1961ರ ಜನಗಣತಿಯಿಂದ ವ್ಯಕ್ತಪಟ್ಟಿದೆ. ಪ್ರತಿ ಸಾವಿರ ಪುರುಷರಿಗೆ 1951ರಲ್ಲಿ 966ರಷ್ಟಿದ್ದ ಲಲನೆಯರ ಸಂಖ್ಯೆ 10 ವರ್ಷಗಳಲ್ಲಿ 959ಕ್ಕೆ ಇಳಿದಿದೆ.
 
**
 ಸಿಖ್ಖಿಸ್ಥಾನ ರಚನೆಗೆ ತಾರಾಸಿಂಗರ ಅಕಾಲಿದಳದ ಆಗ್ರಹ
ನವದೆಹಲಿ, ಜ. 1– ಭಾರತದ ಒಕ್ಕೂಟದೊಳಗೇ ಸಿಖ್ಖಿಸ್ಥಾನ ಅಥವಾ ಸಿಖ್ಖರ ಮಾತೃಭೂಮಿಯೊಂದನ್ನು ಸ್ಥಾಪಿಸಬೇಕೆಂದು ಶಿರೋಮಣಿ ಅಕಾಲಿ ದಳವು (ಮಾಸ್ಟರ್‌ ತಾರಾಸಿಂಗರ ಗುಂಪು) ಪ್ರಣಾಳಿಕೆಯೊಂದರಲ್ಲಿ ಇಂದು ಒತ್ತಾಯಪಡಿಸಿದೆ.
ಜನತೆಗೆ ಪ್ರಧಾನಿಯ 
 
**
ಹೊಸ ವರ್ಷದ ಸಂದೇಶ
ರಾಯ್‌ ಬರೀಲಿ, ಜ. 1– ರಾಷ್ಟ್ರದ ಪುನರ್‌ ನಿರ್ಮಾಣಕ್ಕಾಗಿ ದುಡಿಯಲು ಜನರು ಮತ್ತೆ ಪ್ರತಿಜ್ಞೆ ಸ್ವೀಕರಿಸಿ ತಮ್ಮನ್ನು ದೇಶಸೇವೆಗಾಗಿ ಅರ್ಪಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಜನತೆಗೆ ನೀಡಿದ ಹೊಸ ವರ್ಷದ ಶುಭಾಶಯ ಸಂದೇಶದಲ್ಲಿ ತಿಳಿಸಿದರು.
 
**
ಮತದಾರರಿಗೆ ಏಳು ರಾಷ್ಟ್ರೀಯ ಪಕ್ಷಗಳ ವಿಭಿನ್ನ ಆಶ್ವಾಸನೆಗಳು
ನವದೆಹಲಿ, ಜ. 1– ಫೆಬ್ರವರಿ 15 ರಿಂದ ಆರಂಭವಾಗಲಿರುವ ಸಾರ್ವತ್ರಿಕ ಚುನಾವನಾ ಕಣದಲ್ಲಿ ಕುಸ್ತಿಗಿಳಿದಿರುವ ಏಳು ರಾಷ್ಟ್ರೀಯ ಪಕ್ಷಗಳು ಮತದಾರರಿಗೆ ಬ್ಯಾಂಕುಗಳ ಮತ್ತು ಕೈಗಾರಿಕೆಗಳ ರಾಷ್ಟ್ರೀಕರಣದಿಂದ ಹಿಡಿದು, ಸ್ವತಂತ್ರ ಅರ್ಥವ್ಯವಸ್ಥೆಯೇ ಮೊದಲಾಗಿ ಅನೇಕ ವಿಭಿನ್ನ ಆಶ್ವಾಸನೆಗಳನ್ನು ನೀಡಿವೆ.
ಈ ವಿಭಿನ್ನ ಹಾಗೂ ವಿಪರೀತ ಆಶ್ವಾಸನೆಗಳ ನಡುವೆ ಕೆಲವು ಸಮತೂಕವಾದ ಹಾಗೂ ವಾಸ್ತವಿಕವಾದ ಆಶ್ವಾಸನೆಗಳ ಛಾಯೆಯೂ ಇಲ್ಲದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT