ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ನಾಯಕನಿಂದ ಪ್ರಜಾಪ್ರಭುತ್ವ ಸ್ಥಾಪನೆ

ಕೋರೆಗಾಂವ್ ಕದನ 199 ನೇ ವಿಜಯ ಸಂಭ್ರಮಾಚರಣೆ
Last Updated 2 ಜನವರಿ 2017, 7:10 IST
ಅಕ್ಷರ ಗಾತ್ರ

ಕೋಲಾರ: ‘ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯವಾಗಿದ್ದು ದಲಿತ ನಾಯಕ ಅಂಬೇಡ್ಕರ್‌ ಅವರಿಂದ’ ಎಂದು ಮಾನಸ ಗಂಗೋತ್ರಿಯ ಷಣ್ಮುಗಂ ಅಭಿಪ್ರಾಯಪಟ್ಟರು.ನಗರದ ನಚಿಕೇತ ನಿಲಯದ ಆವರಣದಲ್ಲಿ ಕರ್ನಾಟಕ ಭೀಮಸೇನೆಯಿಂದ ಭಾನುವಾರ ನಡೆದ ಕೋರೆಗಾಂವ್ ಯುದ್ದದ 199ನೇ ವಿಜಯ ಸಂಭ್ರಮಾಚರಣೆ ಮತ್ತು ಯುದ್ಧದಲ್ಲಿ ವೀರ ಮರಣವನ್ನಪ್ಪಿದ 22 ಮಹರ್ ವೀರರಿಗೆ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಅಂಬೇಡ್ಕರ್ ಪ್ರತಿವರ್ಷ ಕೊರೆಗಾಂವ್ ವಿಜಯ ಸ್ಥಂಭಕ್ಕೆ ಹೋಗಿಬರುತ್ತಿದ್ದರು. ಹಾಗಾಗಿ ಸಾವಿರಾರು ದಲಿತರು ಪ್ರತಿವರ್ಷ ಅಲ್ಲಿಗೆ ಹೋಗಿ ಬರುತ್ತಿದ್ದಾರೆ. ಅಂಬೇಡ್ಕರ್ ರಾಷ್ಟ್ರ ನಿರ್ಮಾಪಕರು’ ಎಂದು ತಿಳಿಸಿದರು.

‘ದಲಿತ ಹೆಂಗಸರು ರವಿಕೆ ಹಾಕಿದರೆ ಮತ್ತು ಗಂಡಸರು ಮೀಸೆ ಬಿಟ್ಟರೆ ತೆರಿಗೆ ಕಟ್ಟಬೇಕಾಗಿತ್ತು. ಆಸ್ತಿಹಕ್ಕು ಇರಲಿಲ್ಲ ಇದರಿಂದ ದಲಿತರು ಸಿಟ್ಟಿಗೆದ್ದು ಪೇಶ್ವೆಗಳ ವಿರುದ್ಧ ಹೋರಾಡಿದರು. ಇದು ಸ್ವಾಭಿಮಾನದ ಕದನ 1818ರ ಜನವರಿ 1ರಂದು ಯುದ್ಧವಾಯಿತು. ಬಿಟ್ರಿಷರು ಅಧಿಕಾರಕ್ಕೆ ಬಂದ ಮೇಲೆ ದಲಿತರಿಗೂ ಶಿಕ್ಷಣ ಸಿಕ್ಕಿತು’ ಎಂದು ತಿಳಿಸಿದರು.

ಇತಿಹಾಸ ಉಪನ್ಯಾಸಕ ಡಾ.ಜಿ.ಶಿವಪ್ಪ ಅರಿವು ಮಾತನಾಡಿ, ‘1818 ಜನವರಿ 1ರಂದು ನಡೆದ ಕೋರೆಗಾಂವ್ ಕದನವು ದಲಿತರ ಸ್ವಾಭಿಮಾನದ ಸಂಕೇತವಾಗಿದೆ. ಅಸ್ಪೃಶ್ಯರೆಂದ ಕಾರಣಕ್ಕೆ ದಲಿತರನ್ನು ಮರಾಠ ಪೇಶ್ವೆಗಳು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಬ್ರಿಟೀಷರು ಅದೇ ದಲಿತ ಮಹರ್ ಜನರನ್ನು ಸೈನ್ಯಕ್ಕೆ ಸೇರಿಸಿಕೊಂಡು ಮರಾಠಿ ಪೇಶ್ವೇಗಳನ್ನು ಸೋಲಿಸಿದರು’ ಎಂದು ತಿಳಿಸಿದರು.

ಕರ್ನಾಟಕ ಭೀಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಮುಖಂಡರಾದ ಸೈಯದ್ ಸುಲ್ತಾನ್, ಮುಜೀಬ್ ಪಾಷ, ಓಂಪ್ರಕಾಶ್, ಎಂ.ಜಯಪ್ರಸಾದ್, ಜಗನ್ನಾಥ್, ಕೆಂಚಪ್ಪ, ಚನ್ನಪ್ಪ, ಬಿ.ವೆಂಕಟಾಚಲಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT