ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದಿಂದ ಯುವ ಶಕ್ತಿ ಅನಾವರಣ

ವೈಭವದಿಂದ ನಡೆದ ಹನುಮನಾಳ ಸಾಂಸ್ಕೃತಿಕ ಉತ್ಸವದಲ್ಲಿ ಶಾಸಕ ಹೇಳಿಕೆ
Last Updated 3 ಜನವರಿ 2017, 8:36 IST
ಅಕ್ಷರ ಗಾತ್ರ

ಹನುಮಸಾಗರ: ಪ್ರತಿಯೊಬ್ಬ ವ್ಯಕ್ತಿಯನ್ನು ಆಕರ್ಷಿಸುವ, ಮಾದರಿ ಕಾರ್ಯಕ್ರಮಗಳು ನಡೆದರೆ ಮಾತ್ರ ಜನಮನದಲ್ಲಿ ಉಳಿಯಲು ಸಾಧ್ಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಭಾನುವಾರ ಹನುಮನಾಳ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುರು ಗಂಗಾಧರಸ್ವಾಮಿ ಸಂಗೀತ ಶಾಲೆ ಹಾಗೂ  ವಿವಿಧ ಸಂಘ ಸಂಸ್ಥೆಗಳ  ಆಶ್ರಯದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ‘ಹನುಮನಾಳ ಉತ್ಸವ-–2017’ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಲ್ಲಿ ಎಂತಹ ಶಕ್ತಿ ಇದೆ ಎಂಬುದಕ್ಕೆ ಈ ಉತ್ಸವವೇ ಸಾಕ್ಷಿಯಾಗಿದೆ. ಉತ್ಸವದ ನೆಪದಲ್ಲಿ ತಮ್ಮೂರು ಸ್ವಚ್ಛತೆಗೆ ಟೊಂಕಕಟ್ಟಿ ಆರು ದಿನಗಳ ಕಾಲ ಗ್ರಾಮದ ಬೀದಿಗಳನ್ನು ಸ್ವಚ್ಛ ಮಾಡಿದ ಯುವಕರ ಸಾಧನೆ ಶ್ಲಾಘನೀಯವಾದುದು ಎಂದರು.

ಹಂಪಿ, ಪಟ್ಟದಕಲ್‌ಗಳಲ್ಲಿ ನಡೆಯುವ ಉತ್ಸವಗಳಲ್ಲಿ ಅವಕಾಶ ದೊರೆಯದ ಸ್ಥಳೀಯ ಕಲಾವಿದರಿಗೆ ವೇದಿಕೆ  ದೊರೆತಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ರಿ ಮಾತನಾಡಿ, ಹನುಮನಾಳ ಗ್ರಾಮದಲ್ಲಿ ಎಷ್ಟೆಲ್ಲ ಕಲಾ ಪ್ರಕಾರಗಳು ಹಾಗೂ ಕಲಾ ಪ್ರತಿಭೆಗಳು ಇವೆ ಎಂಬುದು ಈ ಉತ್ಸವದಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ವಿನಾಯಕ ನಾಯಕ ಮಾತನಾಡಿ,  ಸ್ವಶಕ್ತಿ ಸಂಘದ ಮಹಿಳೆಯರು ಗ್ರಾಮ ಸ್ವಚ್ಛತೆಯಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು. ಬಾಗಲಕೋಟೆಯ ಸೀತಾರ ವಾದಕ ವಿ.ಜಿ. ಮಹಾಪುರುಷ ಮಾತನಾಡಿ, ಹನುಮನಾಳ ಉತ್ಸವ ಜಿಲ್ಲೆಯನ್ನು ಪ್ರತಿನಿಧಿಸಬೇಕು ಎಂದರು. ಮುಖಂಡರಾದ ನಾಗರಾಜ ತಟ್ಟಿ, ವೀರಣ್ಣ ಗಜೇಂದ್ರಗಡ ಮಾತನಾಡಿದರು.

ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ದಾಸ ಸಂಕೀರ್ತನೆಗೆ ನಿವೃತ್ತ ಪ್ರಾಚಾರ್ಯ ಕೆ.ಬಿ.ತಳವಾರ ಚಾಲನೆ ನೀಡಿದರು. ವಿವಿಧ ನೃತ್ಯಗಳು, ಸೀತಾರ ಜುಗಲಬಂದಿ, ಮಂಗಲವಾದ್ಯ, ಜಾನಪದ ನೃತ್ಯ, ಭಕ್ತಿ ಗೀತೆ, ಲಾವಣಿ, ರಸಮಂಜರಿಗಳಲ್ಲಿ 28 ಕಲಾ ತಂಡಗಳು ಭಾಗಿಯಾಗಿದ್ದವು.

ಮಳೆ ರಾಜೇಂದ್ರಮಠದ ತಾರನಾಥ ಶ್ರೀಗಳು ಸಾನಿಧ್ಯವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಶ್ರೀ ಒಂದಕುದರಿ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಅಂದಪ್ಪ ತಳವಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದು ರೊಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಪೊಲೀಸಪಾಟೀಲ, ಸಂಗೀತ ಶಿಕ್ಷಕ ಗುರುನಾಥ ಪತ್ತಾರ, ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಾ ಪೊಲೀಸ್ ಪಾಟೀಲ, ಸುರೇಶ ಬೇನಾಳ, ಯಲ್ಲಪ್ಪ ಭಜಂತ್ರಿ, ಯಮನೂರಪ್ಪ ಭಜಂತ್ರಿ, ಯಮನೂರರಡ್ಡಿ ಮುಷ್ಠಿಗೇರಿ, ಶರಣಪ್ಪ ಅರಳಿ, ಶರಣಪ್ಪ ಗೌಡ್ರ, ಮುಖಂಡರಾದ  ಕೆ.ಆರ್.ಕುಲಕರ್ಣಿ, ಭೀಮಣ್ಣ ತಳವಾರ, ಚಂದ್ರಶೇಖರ ಉಪ್ಪಿನ, ಮುತ್ತಯ್ಯ ಘಂಟಿಮಠ, ವೀರಣ್ಣ ಬಡಿಗೇರ, ಬಸಪ್ಪ ಮಾಸ್ತರ, ಪರಸಪ್ಪ ಪ್ಯಾಟಿ, ಮಹಾಂತೇಶ ಬಾಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT