ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಕಾಂಗ್ರೆಸ್ ಗೆ ಗೆಲ್ಲುವ ವಿಶ್ವಾಸ

ಹೆಚ್ಚಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
Last Updated 5 ಜನವರಿ 2017, 10:55 IST
ಅಕ್ಷರ ಗಾತ್ರ

ದೇವನಹಳ್ಳಿ: ದೊಡ್ಡಬಳ್ಳಾಪುರ ಎಪಿಎಂಸಿಗೆ ನಡೆಯುವ ಚುನಾವಣೆಯಲ್ಲಿ ದೇವನಹಳ್ಳಿ ತಾಲ್ಲೂಕಿನಿಂದ ಸ್ಪರ್ಧಿಸಿರುವ ಮೂವರು ಕಾಂಗ್ರೆಸ್ ಬೆಂಬಲಿತರು ಗೆಲವು ಸಾಧಿಸಲಿದ್ದಾರೆ, ಎಂದು ಜಿ.ಪಂ ಸದಸ್ಯ ಲಕ್ಷ್ಮಿ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಮತಯಾಚನೆ ಕುರಿತು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ಜಿಲ್ಲೆ ಒಂದೆ ಎಪಿಎಂಸಿ ಕೇಂದ್ರವಾಗಿದ್ದ ಸಂದರ್ಭದಲ್ಲಿ 10 ವರ್ಷಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದರು, ಹೊಸಕೋಟೆ ತಾಲ್ಲೂಕು ನ್ಯಾಯಾಲಯದ ಮೆಟ್ಟಿಲು ಹತ್ತಿ ಪ್ರಸ್ತುತ ಪ್ರತ್ಯೇಕ ಎಪಿಎಂಸಿ ಕೇಂದ್ರ ಹೊಂದಿದೆ. ನ್ಯಾಯಾಲಯದಲ್ಲಿ ಪ್ರಕರಣ  ಇದ್ದ ಹಿನ್ನೆಲೆಯಲ್ಲಿ  ಐದು ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ, ಪ್ರಸ್ತುತ ಚುನಾವಣೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣ ಮತದಾರರಿಂದ ವ್ಯಕ್ತವಾಗುತ್ತಿದೆ ಎಂದರು.

ಕುಂದಾಣ ಕ್ಷೇತ್ರದಲ್ಲಿ 12 ಸಾವಿರ ಮತದಾರರಿದ್ದು ಕಾಂಗ್ರೆಸ್ ಬೆಂಬಲಿತ ಸಿ ವಿಜಯಕುಮಾರ್, ವಿಜಯಪುರ ಹೋಬಳಿ 11 ಸಾವಿರ ಮತದಾರರಿದ್ದು ಅಭ್ಯರ್ಥಿ ಸುಧಾಕರ್, ಚನ್ನರಾಯಪಟ್ಟಣದ ಹೋಬಳಿ ಕ್ಷೇತ್ರದಲ್ಲಿ 13 ಸಾವಿರ ಮತದಾರರಿದ್ದು ಇಲ್ಲಿ ಅಮರಾವತಿ ಲಕ್ಷ್ಮೀನಾರಾಯಣ್, ಕಾಂಗ್ರೆಸ್ ಬೆಂಬಲಿತರಿದ್ದಾರೆ. ತಾಲ್ಲೂಕಿನ ನಾಲ್ಕು ಜಿ.ಪಂ ಕ್ಷೇತ್ರ ಮತ್ತು 10 ತಾ.ಪಂ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿ ಜಗನ್ನಾಥ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ವಿ. ಸೋಮಣ್ಣ, ಜಿ.ಪಂ ಸದಸ್ಯ ಕೆ.ಸಿ ಮಂಜುನಾಥ್, ಪುರಸಭೆ ಸದಸ್ಯ ಎನ್. ರಘು, ಜಿ.ಎನ್ ವೇಣುಗೋಪಾಲ್, ಮಾಜಿ ಸದಸ್ಯ ಸೋಮಶೇಖರ್, ಮುಖಂಡರಾದ ನಂದಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT