ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಯುತ್ತಿರಲಿ ಟೈಲ್ಸ್‌

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಮನೆಗಳಲ್ಲಿ ಸಿಮೆಂಟ್‌ ನೆಲ ಮಾಯವಾಗಿ ಟೈಲ್ಸ್‌ಗಳು ಬಂದು ಕೂತಿವೆ. ಚೆಂದದ ನೋಟ ನೀಡುವ ಈ ಟೈಲ್ಸ್‌ಗಳ ನಿರ್ವಹಣೆಯನ್ನೂ ತುಂಬಾ ನಾಜೂಕಿನಿಂದ ಮಾಡಬೇಕು. ಇಲ್ಲವಾದಲ್ಲಿ ಅವು ಬೇಗನೆ ತಮ್ಮ ಹೊಳವೆ ಗುಣ ಕಳೆದುಕೊಳ್ಳುತ್ತವೆ. ಇಲ್ಲಿ ಪಟ್ಟಿ ಮಾಡಿದ ಕೆಲ ನಿರ್ವಹಣೆ ತಂತ್ರಗಳನ್ನು ಅನುಸರಿಸಿದರೆ ಎಷ್ಟು ವರ್ಷ ಕಳೆದರೂ ಅವು ಹೊಸತರಂತೆಯೇ ಕಾಣಿಸುವಂತೆ ಮಾಡಬಹುದು.

*ನಿತ್ಯ ನೆಲವನ್ನು ಗುಡಿಸಬೇಕು ಇಲ್ಲವೇ ವ್ಯಾಕ್ಯೂಮ್‌ ಕ್ಲೀನರ್‌ನಿಂದ ಸ್ವಚ್ಛಗೊಳಿಸಬೇಕು.

*ಕಸ ಗುಡಿಸದೆ ನೆಲ ಒರೆಸಬಾರದು

*ಹೆಚ್ಚು ಗಲೀಜಾಗಿದೆ ಎನಿಸಿದರೆ ತುಸು ಬಿಸಿ ನೀರನ್ನು ಬಳಸಿ ನೆಲ ಒರೆಸಿ.

*ಒದ್ದೆ ಬಟ್ಟೆಯಿಂದ ನೆಲ ಒರೆಸಿದ ನಂತರ ಅದು ಒಣಗುವವರೆಗೂ ಹಾಗೆಬಿಡಿ. ಇಲ್ಲವೆ ಒಣಗಿದ ಬಟ್ಟೆಯಿಂದ ಒರೆಸಿ.

*ತತ್‌ಕ್ಷಣ ಸ್ವಚ್ಛಗೊಳಿಸುವುದು ಉತ್ತಮ: ನೆಲದ ಮೇಲೆ ಜ್ಯೂಸ್‌ ಅಥವಾ ಎನಾದರೂ ಚೆಲ್ಲಿದರೆ ಆಗಿಂದಾಗಲೇ ಸ್ವಚ್ಛಗೊಳಿಸಿ. ತಡವಾದಷ್ಟೂ ಕಲೆ ನೆಲದ ಮೇಲೆ ಗಟ್ಟಿಯಾಗಿ ಉಳಿಯುತ್ತದೆ.

*ದುರ್ಬಲ ಡಿಟರ್ಜೆಂಟ್‌ಗಳನ್ನು ಬಳಸಿ. ಸ್ಟ್ರಾಂಗ್‌ ಡಿಟರ್ಜೆಂಟ್‌ಗಳು ಟೈಲ್ಸ್‌ಗಳ ಹೊಳಪಿಗೆ ಧಕ್ಕೆ ಉಂಟು ಮಾಡಬಹುದು.

*ನೆಲ ಒರೆಸುವ ನೀರಿಗೆ ವಿನೆಗಾರ್‌ ಹಾಕಿಯೂ ಸ್ವಚ್ಛಗೊಳಿಸಬಹುದು. ಮಾರ್ಬಲ್‌ ಫ್ಲೋರ್‌ ಆದರೆ ವಿನೆಗಾರ್‌ ಬಳಕೆ ಬೇಡ.

*ಟೈಲ್ಸ್‌ನಲ್ಲಿ ಕಲೆ ಉಳಿದಿದ್ದರೆ ಸ್ಕೌರಿಂಗ್‌ ಪೌಡರ್‌ಗೆ ( ಸ್ವಚ್ಛತೆಗೆ ಬಳಸಲಾಗುವ ಪುಡಿ) ಬೆಚ್ಚಗಿನ ನೀರು ಬೆರೆಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಕಲೆ ಇರುವ ಜಾಗದ ಮೇಲೆ ಹಚ್ಚಿ, ಸ್ವಚ್ಛ ಬಟ್ಟೆಯಿಂದ ಉಜ್ಜಿ. 5ರಿಂದ 10 ನಿಮಿಷ ಹಾಗೆಬಿಡಿ. ಮೃದು ಬ್ರಶ್‌ನಿಂದ ಉಜ್ಜಿ. ನಂತರ ಬೆಚ್ಚಗಿನ ನೀರಿನಿಂದ ತೊಳೆದು ಒರೆಸಿ.

*ಬೇಕಿಂಗ್‌ ಸೋಡಾ ಪೇಸ್ಟ್‌ ಬಳಕೆ, ಬೆಚ್ಚಗಿನ ನೀರಿನಿಂದ ತೊಳೆಯುವುದೂ ಕಲೆ ತೊಲಗಿಸಲು ಸಹಕಾರಿ.

*ಎರಡು ಟೈಲ್ಸ್‌ಗಳ ಮಧ್ಯಭಾಗದಲ್ಲಿ ಕಪ್ಪು ಕಲೆ ಅತಿ ಎನಿಸುವಂತೆ ಆಗಿದ್ದರೆ ಆಲೂಗಡ್ಡೆ ಕತ್ತರಿಸಿ, ಕಲೆಯ ಮೆಲೆ ಉಜ್ಜಿ.

*ಬೇಕಿಂಗ್‌ ಸೋಡಾ, ಲಿಕ್ವಿಡ್ ಸೋಪ್, ಹೈಡ್ರೊಜೆನ್‌ ಪಾರಾಕ್ಸೈಡ್‌ ಬಳಸಿಯೂ ಟೈಲ್ಸ್‌ಗಳ ಮಧ್ಯೆ ಇರುವ ಕಪ್ಪು ಕಲೆ ತೆಗೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT