ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಾಲ ಪಡೆದವರಿಗೂ ಒಂದಿಷ್ಟು ಹಕ್ಕುಗಳಿವೆ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ

ಮನೆ ಸಾಲ ಕೊಡುವ ಹಣಕಾಸು ಸಂಸ್ಥೆ ಮತ್ತು ಗ್ರಾಹಕರ ನಡುವಿನ ಸಂಬಂಧ ಸೌಹಾರ್ದದಿಂದ ಕೂಡಿರುತ್ತದೆ. ಕನಸಿನ ಮನೆ ಖರೀದಿಸುವ ಗ್ರಾಹಕನ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕ ಆಸ್ತಿಯನ್ನು ಒದಗಿಸುವಲ್ಲಿ ಸಾಲದಾತನ ಪಾತ್ರ ಮುಖ್ಯ. ಇದೇ ರೀತಿ, ಗ್ರಾಹಕ ಕೂಡಾ ಗೃಹಸಾಲ ನೀಡುವವರಷ್ಟೇ ಮುಖ್ಯ.

ಬಹಳಷ್ಟು ಪ್ರಕರಣಗಳಲ್ಲಿ ಪ್ರತಿ ತಿಂಗಳು ಇಎಂಐ ಅನ್ನು ಗ್ರಾಹಕನು ಪಾವತಿಸುವ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ಮುಗಿಯುತ್ತದೆ. ಆದರೆ ಕೆಲವು ಪ್ರಸಂಗಗಳಲ್ಲಿ ಇಎಂಐ ಬಾಕಿ ಅಥವಾ ಒಂದು ಬಾರಿಯೂ ಸಾಲದ ಕಂತು ಪಾವತಿಸದಿರುವುದು ‘ಪಾವತಿ ಕೊರತೆ’ಗೆ (ಪೇಮೆಂಟ್ ಡಿಫಾಲ್ಟ್) ದಾರಿ ಮಾಡಿಕೊಡುತ್ತದೆ.

ಇದಕ್ಕೆ ಸಹಜ ಕಾರಣಗಳೂ ಇವೆ. ಸ್ಥಿರ ಆದಾಯ ನಿಂತುಹೋಗುವುದು; ಇದ್ದಕ್ಕಿದ್ದಂತೆ ಎದುರಾಗುವ ಹೆಚ್ಚುವರಿ ಖರ್ಚುಗಳು ಅಥವಾ ದೀರ್ಘಕಾಲೀನ ಅನಾರೋಗ್ಯ ಮೊದಲಾದ ಅನಿವಾರ್ಯ ಕಾರಣಗಳೂ ಹಣಕಾಸಿನ ಮುಗ್ಗಟ್ಟಿಗೆ ಕಾರಣವಾಗಬಹುದು.

ಅಪರೂಪದ ಪ್ರಸಂಗಗಳಲ್ಲಿ ಸಾಲ ಪಡೆದಾತ ಹಠಾತ್ ಆಗಿ ನಿಧನ ಹೊಂದಿದಾಗಲೂ ಪಾವತಿ    ಕೊರತೆ ಕಂಡು ಬರುತ್ತದೆ. ಆದರೆ ಹಣಕಾಸು ಸಂಸ್ಥೆಗಳು ಪ್ರತಿ ಪ್ರಕರಣದಲ್ಲೂ ಅಸಂಗತಗಳಾಗದಂತೆ ಜಾಗೃತೆಯಿಂದ ನಿಗಾ ವಹಿಸುತ್ತವೆ. ಒಂದು ವೇಳೆ ಬಾಕಿ ಪಾವತಿಯಾಗದಿದ್ದಲ್ಲಿ ಜಾಗೃತ ತಂಡವು ವಸೂಲಿ ವಿಭಾಗಕ್ಕೆ ಮಾಹಿತಿ ನೀಡುತ್ತದೆ.

ತನ್ನ ನೀತಿಗಳಿಗೆ ಅನುಗುಣವಾಗಿ ಬ್ಯಾಂಕ್‌ಗಳು ಬಾಕಿ ಉಳಿಸಿಕೊಂಡವರನ್ನು ತಕ್ಷಣವೇ ಸಂಪರ್ಕಿಸಬಹುದು ಅಥವಾ ಮುಂದಿನ ತಿಂಗಳವರೆಗೆ ಕಾಯಬಹುದು. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ, ಸಾಮಾನ್ಯ ಪ್ರಕರಣಗಳಲ್ಲಿ ಪಾವತಿ ಕೊರತೆ ಆಗದಂತೆ ನಿರ್ವಹಿಸಲು ಕೆಲವು ಕ್ರಮಗಳನ್ನು ಪಾಲಿಸುವುದು ಒಳಿತು.

ಸೂಕ್ತ ನಿರ್ವಹಣಾ ಕ್ರಮಗಳು
*ಮೊದಲಿಗೆ ಗೃಹಸಾಲ ಕಂಪೆನಿಗೆ ಪಾವತಿ ಕೊರತೆ ಆಗಿರುವ ಬಗ್ಗೆ ಮಾಹಿತಿ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ನಿಮಗೆ ಆಗಿರುವ ತೊಂದರೆ ಬಗ್ಗೆ ಚರ್ಚಿಸಿ.

*ಸಾಲದಾತ ಕಂಪೆನಿ ಜತೆಗಿನ ಸಂಪರ್ಕವನ್ನು ಕಡಿದುಕೊಳ್ಳಲು ಯತ್ನಿಸಬೇಡಿ. ಅವರಿಂದ ಕರೆ ಬಂದರೆ ತಪ್ಪಿಸಿಕೊಳ್ಳಲು ಯತ್ನಿಸಬೇಡಿ. ಇದು ನೀವು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಯಿಂದ ಹಿಂದೆ ಸರಿಯುತ್ತಿದ್ದೀರಿ ಎಂಬ ಭಾವ ಮೂಡಿಸುವ ಅಪಾಯವಿರುತ್ತದೆ.

*ನೀವು ಸಾಲದಾತನಿಗೆ ಬದ್ಧರಾಗಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ. ಒಬ್ಬ ಗ್ರಾಹಕರಾಗಿ ಸಾಲವನ್ನು ಬಡ್ಡಿಯ ಜತೆ ನಿಗದಿತ ಸಮಯದಲ್ಲಿ ಮರು ಪಾವತಿಸುವುದು ನೈತಿಕ ಹಾಗೂ ನ್ಯಾಯಸಮ್ಮತ ಕರ್ತವ್ಯ.

*ಅಷ್ಟೇ ಅಲ್ಲದೆ ಅಪನಂಬಿಕೆ ಮೂಡಿ ಗೃಹಸಾಲ ಕಂಪೆನಿಯು ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇರುತ್ತದೆ.

*ನಿಜವಾಗಿಯೂ ತೊಂದರೆಗೊಳಗಾಗಿರುವ ಗ್ರಾಹಕರ ಸಮಸ್ಯೆ ಪರಿಹರಿಸಲು ಸಾಧ್ಯವಾದಷ್ಟು ಮಟ್ಟಿಗೆ ಯತ್ನಿಸುತ್ತವೆ. ಸಾಲದಾತ ಕಂಪೆನಿಗಳನ್ನು ಸಂಪರ್ಕಿಸಿ ನಿಮ್ಮ ನೈಜ ಪರಿಸ್ಥಿತಿಯನ್ನು ವಿವರಿಸಿದಲ್ಲಿ, ಅವು ಸಾಲವನ್ನು ಮರು ಹೊಂದಾಣಿಕೆ ಮಾಡಿ ಪರಿಷ್ಕೃತ ಇಎಂಐ ಪಾವತಿಸಲು ಸಹಾಯ ಮಾಡುತ್ತವೆ.

*ದೀರ್ಘಕಾಲೀನ ಸಮಸ್ಯೆಗಳಿಂದಾಗಿ ನಿಮ್ಮಿಂದ ಮರುಪಾವತಿ ಸಾಧ್ಯವಾಗದಿದ್ದಲ್ಲಿ, ಸಮಸ್ಯೆ ಬಗೆಹೆಗರಿಸಲು ಹಣಕಾಸು ಸಂಸ್ಥೆಗೆ ಸಾಧ್ಯವಾಗುವುದಿಲ್ಲ. ಅವು ಪರ್ಯಾಯ ಕ್ರಮಗಳನ್ನು ಚಾಲ್ತಿಗೆ ತರುತ್ತವೆ.

ಗ್ರಾಹಕರ ಹಕ್ಕುಗಳು
*ಒಟ್ಟು ಸಾಲ, ಅವಧಿ, ಬಾಕಿ, ಒಟ್ಟು ಬಾಕಿ, ಮರು ಪಾವತಿ ವಿಧಾನ ಮೊದಲಾದವುಗಳ ಬಗ್ಗೆ ಕಂಪೆನಿಯು ಮೊದಲೇ ವಿವರವಾಗಿ ತಿಳಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

*ಸಾಲ ಮರುಪಾವತಿಯಲ್ಲಿ ಸಮಸ್ಯೆ ಕಂಡು ಬಂದರೆ ಗೃಹ ಸಾಲ ಕಂಪೆನಿಗಳು ಮೊದಲಿಗೆ ನೋಟಿಸ್ ಕಳುಹಿಸುವ ಅಥವಾ ನೇರವಾಗಿ ಗ್ರಾಹಕರನ್ನು ಭೇಟಿಯಾಗುವ ಮೂಲಕ ನೆನಪಿಸುವ ಕೆಲಸಕ್ಕೆ ಮೊದಲಾಗತ್ತವೆ.

*ಸಾಲ ಮರುಪಾವತಿಯನ್ನು ನೆನಪಿಸುವ ಉದ್ದೇಶದಿಂದ ಬರುವ ಕಂಪೆನಿ ಪ್ರತಿನಿಧಿಗಳ ಗುರುತಿನ ಪತ್ರ ಅಥವಾ ದಾಖಲೆಯನ್ನು ಕೇಳುವ ಹಕ್ಕು ಗ್ರಾಹಕರಿಗೆ ಇರುತ್ತದೆ.

*ಬೆಳಿಗ್ಗೆ 7ರಿಂದ ರಾತ್ರಿ 7ರ ಒಳಗೆ ಸಾಲದಾತ ಕಂಪೆನಿಗಳ ಪ್ರತಿನಿಧಿಗಳು ನಿಮ್ಮನ್ನು ಭೇಟಿಯಾಗಬಹುದು.

*ನಿಗದಿತ ಸಮಯ ಹಾಗೂ ಸ್ಥಳದಲ್ಲಿದ್ದಾಗ ಕರೆ ಮಾಡದಂತೆ ನೀವು ಸಾಲದಾತ ಕಂಪೆನಿಗೆ ಮನವಿ ಸಲ್ಲಿಸಬಹುದು. ಕಂಪೆನಿಯನ್ನು ನೀವು ಸ್ವತಃ ನಿಯಮಿತವಾಗಿ ಸಂಪರ್ಕಿಸುತ್ತಿದ್ದಲ್ಲಿ ಮತ್ತು ಅವರ ಕರೆಗಳಿಗೆ ಸ್ಪಂದಿಸುತ್ತಿದ್ದಲ್ಲಿ ಮಾತ್ರ ಈ ಮನವಿಯನ್ನು ಪುರಸ್ಕರಿಸಲಾಗುತ್ತದೆ.

*ಕುಟುಂಬದಲ್ಲಿ ಯಾರಾದರೂ ಮೃತಪಟ್ಟ ಸಂದರ್ಭ ಅಥವಾ ಬೇರೆ ಯಾವುದೇ ತುರ್ತು ಸಂದರ್ಭದಲ್ಲಿ ಸಾಲದಾತ ಕಂಪೆನಿಯ ಸಂಪರ್ಕ ಅಧಿಕಾರಿಗೆ ಮಾಹಿತಿ ಕೊಟ್ಟಿರಿ. ಅವರು ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಾರೆ.

*
ಸಾಲವನ್ನು ಉದ್ದೇಶಪೂರ್ವಕ ಬಾಕಿ ಉಳಿಸಿಕೊಳ್ಳದೆ ನೀವು ಎಲ್ಲಿಯವರೆಗೆ ಪಾರದರ್ಶಕವಾಗಿ ನಡೆದುಕೊಳ್ಳುತ್ತೀರೋ ಅಷ್ಟು ಕಾಲ ಹಣಕಾಸು ಸಂಸ್ಥೆಗಳು ನಿಮ್ಮ ಪರವಾಗಿಯೇ ಇರುತ್ತವೆ.
-ಅಜಯ್ ಗುಪ್ತ
(ಪಿಎನ್‌ಬಿ ಹೌಸಿಂಗ್ ಫಿನಾನ್ಸ್‌ನಲ್ಲಿ ಚೀಫ್ ರಿಸ್ಕ್ ಆಫೀಸರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT