ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೋಪಿಕ್ ಈಗ ಮರಿಯಪ್ಪನ್ ಸರದಿ!

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಕ್ರೀಡಾಪಟುಗಳಾದ ಮೇರಿಕೋಮ್, ಎಂ.ಎಸ್‌.ಧೋನಿ, ಗೀತಾ ಪೋಗಟ್‌ ಅವರ ಬಯೋಪಿಕ್‌ ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ್ದು ಇನ್ನೂ ತಾಜಾ ಆಗಿರುವಾಗಲೇ ಈಗ ಮತ್ತೊಬ್ಬ ಕ್ರೀಡಾಪಟುವಿನ ಬಯೋಪಿಕ್‌ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಅಥ್ಲೀಟ್ ಮರಿಯಪ್ಪನ್ ತಂಗವೇಲು ಅವರ ಜೀವನ, ಸಾಧನೆಯನ್ನು ಆಧರಿಸಿ ‘ಮರಿಯಪ್ಪನ್‌’ ಎನ್ನುವ ಸಿನಿಮಾ ಇಂಗ್ಲಿಷ್‌ ಮತ್ತು ತಮಿಳು ಭಾಷೆಯಲ್ಲಿ ಬರಲಿದೆ.

ತಮಿಳುನಾಡಿನ 21ವರ್ಷದ ಹೈಜಂಪ್‌ ಪಟು   ಮರಿಯಪ್ಪನ್ ತಂಗವೇಲು ಪಾತ್ರಕ್ಕೆ ಕಾಲಿವುಡ್‌ನ ಖ್ಯಾತನಟ ಧನುಷ್‌ ಜೀವ ತುಂಬಲಿದ್ದಾರೆ.
ಮರಿಯಪ್ಪನ್ 2016ರ ರಿಯೊ ಪ್ಯಾರಾ ಒಲಿಂಪಿಕ್‌ ಗೇಮ್ಸ್‌ನ ಪುರುಷರ  ಟಿ–24  ವಿಭಾಗದ ಹೈಜಂಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಮರಿಯಪ್ಪನ್‌ ಬಾಲ್ಯದಲ್ಲೇ ಬಡತನ, ಅವಮಾನ, ನೋವಿನಿಂದ ನಲುಗಿದವರು.
ತಂದೆಯಿಂದ ಪರಿತ್ಯಕ್ತವಾಗಿದ್ದ ಕುಟುಂಬಕ್ಕೆ ತಾಯಿ ಸರೋಜಾ ಅವರದ್ದೇ ಹೊಣೆಗಾರಿಕೆ. ಪತಿ ದೂರವಾಗಿದ್ದರೂ ಎದೆಗುಂದದ ಸರೋಜಾ ಕೂಲಿ ಮಾಡಿ, ತರಕಾರಿ ಮಾರಿ ಆರು ಮಕ್ಕಳಿಗೆ ಭವಿಷ್ಯ ಕಲ್ಪಿಸಲು ಹೆಣಗಾಡಿದವರು.

ಸಣ್ಣವನಿದ್ದಾಗ ಆದ ಅಪಘಾತವೊಂದರಲ್ಲಿ ಮರಿಯಪ್ಪನ್ ತನ್ನ ಬಲಗಾಲಿನ ಶಕ್ತಿಯನ್ನು ಕಳೆದು ಕೊಳ್ಳಬೇಕಾಯಿತು. ಆದರೂ, ಛಲ ಬಿಡದೇ ಮರಿಯಪ್ಪನ್ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೆ ಮುಂದಾದರು. ಆ ಸಾಧನೆ ಸಾಕಾರವಾದದ್ದು ರಿಯೊ ಪ್ಯಾರಾ ಒಲಿಂಪಿಕ್‌ನಲ್ಲಿ ಚಿನ್ನದ ಪಡೆಯುವ ಮೂಲಕ. ಹೀಗೆ ಸಾಗುವ ಮರಿಯಪ್ಪನ್‌ ಅವರ ಜೀವನ ಮತ್ತು ಸಾಧನೆಯ ಕಥೆಯನ್ನು ಧನುಷ್ ಪತ್ನಿ ಐಶ್ವರ್ಯಾ ರಜನಿಕಾಂತ್  ತಾವೇ ನಿರ್ದೇಶನ ಮತ್ತು ನಿರ್ಮಾಣದ ಮೂಲಕ ತೆರೆಗೆ ತರಲು  ಮುಂದಾಗಿದ್ದಾರೆ.

ಮರಿಯಪ್ಪನ್‌ ಚಿತ್ರದ ಪೋಸ್ಟರ್‌ ಅನ್ನು ಹೊಸವರ್ಷದಂದು ಬಾಲಿವುಡ್‌ ನಟ ಶಾರುಖ್ ಖಾನ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ ಕಿಂಗ್ ಖಾನ್ ಈ ಬಗ್ಗೆ ಟ್ವೀಟ್‌ ಕೂಡಾ ಮಾಡಿರುವುದು ವಿಶೇಷ.

‘ಮರಿಯಪ್ಪನ್ ತಂಗವೇಲು ಅವರ ಬಯೋಪಿಕ್‌ನ ಮೊದಲ ಲುಕ್ ಬಿಡುಗಡೆಯಾಗಿದೆ. ಮರಿಯಪ್ಪನ್ ನಮ್ಮ ರಾಷ್ಟ್ರೀಯ ಹೀರೋ. ಆಲ್‌ ದಿ ಬೆಸ್ಟ್ ಐಶ್ವರ್ಯಾ ರಜನಿಕಾಂತ್ ಧನುಷ್‌’ ಎಂದು ಶಾರುಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ಐಶ್ವರ್ಯಾ ರಜನಿಕಾಂತ್ ಕೂಡಾ  ‘ಥ್ಯಾಂಕ್ಯೂ, ಹೊಸವರ್ಷದ ಶುಭಾಶಯಗಳು’ ಎಂದು  ಮರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT