ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಗೆ ಜೀವನ ಮೌ ಲ್ಯದ ದರ್ಶನ ಅಗತŀ

ಎರಡು ದಿನಗಳ ವಿಶೇಷ ಸಾಹಿತ್ಯ ಸಮ್ಮಿಲನ 21ರಿಂದ, ವಿವಿಧ ಗೋಷ್ಠಿ, ಆಹ್ವಾನ ಪತ್ರಿಕೆ ಬಿಡುಗಡೆ
Last Updated 9 ಜನವರಿ 2017, 8:24 IST
ಅಕ್ಷರ ಗಾತ್ರ
ಯಲ್ಲಾಪುರ: ಇಂದಿನ ಯುವಕರಲ್ಲಿ ರಾಷ್ಟ್ರೀಯತೆಯ ಕಲ್ಪನೆಯೇ ಇಲ್ಲವಾ­ಗಿದೆ. ಜೀವನ ಮೌಲ್ಯ ಎಂದರೇನು ಎಂಬುದೇ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಇದೇ 21 ಮತ್ತು 22 ರಂದು ಜೀವನ ಮೌಲ್ಯದ ಕುರಿತು ಎರಡು ದಿನಗಳ ವಿಶೇಷ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪರಿಷತ್‌ನ ತಾಲ್ಲೂಕು ಘಟಕದ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ ಹೇಳಿದರು.
 
ಪಟ್ಟಣದಲ್ಲಿ ಭಾನುವಾರ ಕಾರ್ಯ­ಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
 
ಅಖಿಲ ಭಾರತೀಯ ಸಾಹಿತ್ಯ ಪರಿ­ಷತ್‌ ಮುಂದಿನ ದಿನಗಳಲ್ಲಿ ಬರಹ­ಗಾರರಿಗೆ, ಸಾಹಿತ್ಯಾಸಕ್ತರಿಗೆ ವೇದಿಕೆ ಕಲ್ಪಿಸುವ ಜೊತೆಗೆ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಾಹಿತ್ಯಾಭಿ­ರುಚಿ ಬೆಳೆಸುವ ಕಾರ್ಯಕ್ರಮ ಹಮ್ಮಿ­ಕೊಳ್ಳ­ಲಿದೆ. ಇಂದಿನ ಯುವಕರಲ್ಲಿ ಓದುವ ಅಭಿರುಚಿ ಬೆಳೆಸುವ  ಮತ್ತು ಬರೆಯುವ ಕುರಿತಾದ ತರಬೇತಿ ಕಾರ್ಯಾಗಾರ ನಡೆಸುವ ಉದ್ದೇಶ ಹೊಂದಿದೆ. ಬಹುಭಾಷಾ ಕವಿಗೋಷ್ಠಿ ಏರ್ಪಡಿಸಿ ರಾಷ್ಟ್ರೀಯತೆಯ ಜಾಗೃತಿ ಮೂಡಿಸುವುದು, ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿಯೊಬ್ಬರಿಗೂ ಸಂಸ್ಕಾರಭರಿತ ಜೀವನ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆ ನಮ್ಮದಾಗಿದೆ ಎಂದರು.
 
ಇದೇ 21 ರಂದು ಅಖಿಲ ಭಾರ­ತೀಯ ಸಾಹಿತ್ಯ ಪರಿಷತ್‌ ಯಲ್ಲಾಪುರ ಘಟಕ,  ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಬಳಗ ವಜ್ರಳ್ಳಿ ಇವರ ಸಹಯೋಗದಲ್ಲಿ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ನಡೆ­ಯುವ  ‘ಜೀವನ ಮೌಲ್ಯ’ ಕುರಿತಾದ ಸಾಹಿತ್ಯ ಸಮ್ಮಿಲನವನ್ನು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ದೃಶ್ಯ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಿರಂಜನ ವಾನಳ್ಳಿ ಉದ್ಘಾಟಿಸು­ವರು. ಖ್ಯಾತ ಕವಿ, ಚಿಂತಕರೂ ಆದ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅಧ್ಯಕ್ಷತೆ ವಹಿಸುವರು. ಮುಕ್ತಾ ಶಂಕರ ಅವರ ‘ತಂಬೆಲರು’ ಕವನ ಸಂಕಲನವನ್ನು  ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಬಿಡು­ಗಡೆ ಮಾಡುವರು ಎಂದು ಹೇಳಿದರು.
 
ಇದೇ 22 ರಂದು ವಿಮರ್ಶಕ ಆರ್. ಡಿ. ಹೆಗಡೆ ಅಧ್ಯಕ್ಷತೆಯಲ್ಲಿ ‘ಜೀವನ ಮೌಲ್ಯ ಕಥೆ ಕಟ್ಟುವ’ ವಿಶೇಷ ಕಾರ್ಯ­ಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ  ಹಿರಿಯ ಸಾಹಿತಿ ನಾ.ಸು. ಭರತನಹಳ್ಳಿ ಅಧ್ಯಕ್ಷತೆಯಲ್ಲಿ ‘ಬಹುಭಾಷಾ ಕವಿ­ಗೋಷ್ಠಿ’ ಜರುಗುವುದು. ಸಂಜೆ ಸಮಾ­ರೋಪದಲ್ಲಿ ಸಾಹಿತಿ ವನರಾಗ ಶರ್ಮಾ, ನಾಟಿವೈದ್ಯ ವೆಂಕಟ್ರಮಣ ಬೋಳಗುಡ್ಡೆ, ಪ್ರಸೂತಿ ಶುಶ್ರೂಷಕಿ ಕಾತೂನಬಿ ಶೇಖ್ ಅವರನ್ನು ಗೌರವಿಸಲಾಗುವುದು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಎರಡು ದಿನದ ಕಾರ್ಯಕ್ರಮದ ಕುರಿತಾಗಿ ಅವಲೋಕಿ­ಸುವರು ಎಂದು ಹೇಳಿದರು.
 
ಈ ಸಂದರ್ಭದಲ್ಲಿ ನಾಗರಾಜ ಮದ್ಗುಣಿ, ಶ್ರೀಧರ ಅಣಲಗಾರ, ಕೃಷ್ಣ ಭಟ್ಟ ನಾಯಕನಕೆರೆ, ಪ್ರಕಾಶ ಕಟ್ಟಿ­ಮನಿ,ಗಣಪತಿ ಬೋಳಗುಡ್ಡೆ, ದತ್ತಾ­ತ್ರೇಯ ಕಣ್ಣಿಪಾಲ, ಸುವರ್ಣಲತಾ ಪಟಗಾರ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT